ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್‌ ನ್ಯಾಚುರಲ್‌ ಸ್ಟಾರ್....300 ಸಿನಿಮಾಗಳ 'ಅನಂತ' ಪಯಣ ಹೇಗಿತ್ತು.?

Ananthnag Birthday : ಸಿನಿಮಾ ಪಾತ್ರಗಳನ್ನು ಅನುಭವಿಸಿ ಜೀವಿಸಿದ್ದ ಅನಂತ್‌ ನಾಗ್‌ ಅವರಿಗೆ ಇಂದು (ಸೆ.4) ಹುಟ್ಟು ಹಬ್ಬದ ಸಂಭ್ರಮ. ಸದ್ಯ 75ನೇ ವಸಂತಕ್ಕೆ ಕಾಲಿಡುತ್ತಿರುವ ಇವರು 300 ಸಿನಿಮಾಗಳಲ್ಲಿ ನಟಿಸಿ ಚಿತ್ರರಂಗದಲ್ಲಿ 50 ವರ್ಷ ಪೂರ್ಣಗೊಳಿಸಿದ್ದಾರೆ.   

Written by - Savita M B | Last Updated : Sep 4, 2023, 03:26 PM IST
  • ಚಿಕ್ಕಮಕ್ಕಳಿಂದ ಹಿಡಿದು ನಮ್ಮ ಹಿಂದಿನವರಿಗೂ ಅನಂತ್‌ ನಾಗ್‌ ಎನ್ನುವ ಹೆಸರು ಚಿರಪರಿಚಿತ.
  • ನಟ ಅನಂತ್‌ ನಾಗ್‌ ಸಿನಿರಂಗದಿಂದ ಬ್ರೇಕ್‌ ತೆಗೆದುಕೊಂಡೇ ಇಲ್ಲ.
  • ನಟ ಸದ್ಯ ಚಿತ್ರರಂಗದಲ್ಲಿ 50 ವರ್ಷ ಪೊರೈಸಿದ ಸಂಭ್ರಮದಲ್ಲಿದ್ದಾರೆ
ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್‌ ನ್ಯಾಚುರಲ್‌ ಸ್ಟಾರ್....300 ಸಿನಿಮಾಗಳ 'ಅನಂತ' ಪಯಣ ಹೇಗಿತ್ತು.?  title=

Sandalwood News : ಚಿಕ್ಕಮಕ್ಕಳಿಂದ ಹಿಡಿದು ನಮ್ಮ ಹಿಂದಿನವರಿಗೂ ಅನಂತ್‌ ನಾಗ್‌ ಎನ್ನುವ ಹೆಸರು ಚಿರಪರಿಚಿತ. ಹೌದು ನಟ ಅನಂತ್‌ ನಾಗ್‌ ಸಿನಿರಂಗದಿಂದ ಬ್ರೇಕ್‌ ತೆಗೆದುಕೊಂಡೇ ಇಲ್ಲ. ಸಕ್ರಿಯವಾಗಿ ಬೆಳ್ಳಿ ಪರದೆಯ ಮೇಲೆ ಮಿಂಚುತ್ತಲೇ ಬಂದಿರುವ ನಟ ಸದ್ಯ ಚಿತ್ರರಂಗದಲ್ಲಿ 50 ವರ್ಷ ಪೊರೈಸಿದ ಸಂಭ್ರಮದಲ್ಲಿದ್ದಾರೆ. 

ಸಾಕಷ್ಟು ಸಿನಿಮಾಗಳ ಮೂಲಕ ತೆರೆ ಮೇಲೆ ಅಚ್ಚರಿ ಮೂಡಿಸಿದ ನಟ ಅನಂತ್‌ ನಾಗ್‌ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 75ನೇಋ ವಸಂತಕ್ಕೆ ಕಾಲಿಡುತ್ತಿರುವ ನಟ ಒಟ್ಟು 300 ಸಿನಿಮಾ ಪಾತ್ರಗಳಿಗೆ ಜೀವ ತುಂಬಿ ಅಭಿಮಾನಿಗಳ ಹೃದಯದಲ್ಲಿ ಅಚ್ಚಾಗಿ ಉಳಿದುಕೊಂಡಿದ್ದಾರೆ. 

ಇದನ್ನೂ ಓದಿ-ಪೋಷಕರನ್ನು ವಿರೋಧಿಸಿ ಮದುವೆ? ಗರ್ಭಪಾತ? 'ಖುಷಿ' ಸ್ಯಾಮ್ ರಿಯಲ್‌ ಲೈಫ್ ಸ್ಟೋರಿನಾ?

ರಂಗಭೂಮಿಯಿಂದ ಚಂದನವನಕ್ಕೆ ಕಾಲಿಟ್ಟ ಅನಂತ್‌ ನಾಗ್‌ ಅವರು  1973 ರಲ್ಲಿ ಬಿಡುಗಡೆಯಾದ 'ಸಂಕಲ್ಪ' ಎನ್ನುವ ಕನ್ನಡ ಸಿನಿಮಾ ಮೂಲಕ ತಮ್ಮ ಸಿನಿ ಜರ್ನಿಯನ್ನು ಆರಂಭಿಸಿದರು. ನಂತರ ಅಂಕುರ್‌ ಸಿನಿಮಾದಿಂದ ಬಾಲಿವುಡ್‌ಗೂ ಪಾದಾರ್ಪಣೆ ಮಾಡಿದ್ದರು. ಅಲ್ಲದೇ ಪ್ರೇಮ ಲೇಖಲು ಚಿತ್ರದ ಮೂಲಕ ತೆಲುಗು ಚಿತ್ರರಂಗಲ್ಲಿಯೂ ಕಾಣಿಸಿಕೊಂಡರು. 

ಹೀಗೆ ಮುಂದುವರೆದು ನಾಯಕ ನಟನಾಗಿ ಸಿನಿರಂಗದಲ್ಲಿ ಗುರುತಿಸಿಕೊಂಡರು. ಬಯಲು ದಾರಿ, ನಾ ನಿನ್ನ ಬಿಡಲಾರೆ, ಬೆಂಕಿಯ ಬಲೆ, ಚಂದನದ ಗೊಂಬೆ, ಇಂತಹ ಹಲವಾರು ಸಿನಿಮಾಗಳ ಮೂಲಕ ಹೆಣ್ಣು ಮಕ್ಕಳ ಹೃದಯದಲ್ಲಿ ಛಾಪು ಮೂಡಿಸಿದ್ದಾರೆ. ಒಬ್ಬ ನಾಯಕನಾಗಿ ಸಹೋದರನಾಗಿ...ಸದ್ಯ ಪೋಷಕ ಪಾತ್ರಗಳ ಮೂಲಕ ಸಿನಿರಂಗದಲ್ಲಿ ಸಕ್ರಿಯವಾಗಿರುವ ಅನಂತ್‌ ನಾಗ್‌ ಎಂದಿನಂತೆ ಈಗಲೂ ಪ್ರತಿ ಪಾತ್ರಕ್ಕೂ ಜೀವ ತುಂಬುತ್ತಿದ್ದಾರೆ. 

ಇದನ್ನೂ ಓದಿ-Jawan: 300 ಕೋಟಿಯ ಜವಾನ್ ಚಿತ್ರಕ್ಕೆ ಅತಿ ಹೆಚ್ಚು ಸಂಭಾವನೆ ಪಡೆದವರು ಇವರೇ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News