Anushka Sharma : ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಅತ್ಯಂತ ಪ್ರೀತಿಯ ಸೆಲೆಬ್ರಿಟಿ ಜೋಡಿಗಳಲ್ಲಿ ಒಬ್ಬರು. ಈ ಸ್ಟಾರ್ ಜೋಡಿ ತಮ್ಮ ಎರಡು ವರ್ಷದ ಮಗಳು ವಮಿಕಾಳನ್ನು ಎಷ್ಟು ಪ್ರೀತಿ ಮಾಡ್ತಾರೆ ಅಂತ ಆಗಾಗೆ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುವ ಪೋಟೋಗಳನ್ನು ನೋಡಿದ್ರೆ ಗೊತ್ತಾಗುತ್ತದೆ. ಇದೀಗ ತಮ್ಮ ಮಗಳಿಗಾಗಿ ಅನುಷ್ಕಾ ತ್ಯಾಗ ಮಾಡಲು ಮುಂದಾಗಿದ್ದಾರೆ.
ಹೌದು.. ಅನುಷ್ಕಾ ಮತ್ತು ವಿರಾಟ್ ಇಬ್ಬರ ವೃತ್ತಿ ಬೇರೆ ಬೇರೆಯಾದರೂ ಸಹ ಒಬ್ಬರಿಗೊಬ್ಬರು ಸಮಯ ನೀಡುತ್ತಾರೆ. ಅಲ್ಲದೆ, ಮಗಳ ಜೊತೆ ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ. ಇತ್ತೀಚೆಗೆ, ಅನುಷ್ಕಾ ಶರ್ಮಾ ಅವರು ಮತ್ತು ವಿರಾಟ್ ತಮ್ಮ ಮಗಳಿಗೆ ಹೆಚ್ಚು ಅಗತ್ಯ ನೀಡುವ ಕುರಿತು ಮಾತನಾಡಿದ್ದರು. ಇದೇ ವೇಳೆ ಮಗಳಿಗೆ ಸಮಯ ನೀಡುವ ಸಲುವಾಗಿ ಪ್ರತಿ ವರ್ಷ ಒಂದಕ್ಕಿಂತ ಹೆಚ್ಚು ಚಿತ್ರಗಳನ್ನು ಮಾಡಲು ಬಯಸುವುದಿಲ್ಲ ಅಂತ ಅನುಷ್ಕಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Ashish Vidyarthi: ಮೊದಲ ಪತ್ನಿ ಜೊತೆಗಿನ ವಿಚ್ಛೇದನದ ಬಗ್ಗೆ ಸತ್ಯ ಬಿಚ್ಚಿಟ್ಟ ಆಶಿಶ್ ವಿದ್ಯಾರ್ಥಿ
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅನುಷ್ಕಾ ಶರ್ಮಾ, ನನ್ನ ಮಗಳು ಇನ್ನು ಚಿಕ್ಕವಳು, ಆಕೆಗೆ ನನ್ನ ಸಮಯ ಹೆಚ್ಚು ಬೇಕಾಗುತ್ತದೆ. ವಿರಾಟ್ ಒಬ್ಬ ಶ್ರೇಷ್ಠ ತಂದೆ. ಅವರು ಸಹ ಆಕೆಗೆ ತುಂಬಾ ಸಮಯ ನೀಡುತ್ತಾರೆ. ಅವಳಿಗೆ ನನ್ನ ಅವಶ್ಯಕತೆ ಹೆಚ್ಚಿದೆ ಅಂತ ನಾನು ಅರಿತುಕೊಂಡಿದ್ದೇನೆ. ಆದ್ದರಿಂದ, ವರ್ಷಕ್ಕೆ ಒಂದಕ್ಕಿಂತ ಹೆಚ್ಚು ಸಿನಿಮಾ ಮಾಡಲು ನಾನು ಬಯಸುವುದಿಲ್ಲ ಅಂತ ಹೇಳಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ