ಸೆನ್ಸಾರ್ ಪಾಸಾದ "ಅಥಿ ಐ ಲವ್ ಯು"

Written by - YASHODHA POOJARI | Edited by - Manjunath N | Last Updated : Nov 25, 2023, 09:16 PM IST
  • ಈಗ "ಅತಿ ಐ ಲವ್ ಯು U" ಸರ್ಟಿಫಿಕೇಟ್ ಪಡೆದುಕೊಂಡು ಬಿಡುಗಡೆಗೆ ಮತ್ತಷ್ಟು ಧೈರ್ಯ ತುಂಬಿದೆ ಎಂದರು ರೆಡ್ ಅಂಡ್ ವೈಟ್ ನಿರ್ಮಾಪಕ ಸವೆನ್ ರಾಜ್.
  • ಲೋಕೇಂದ್ರ ಸೂರ್ಯ ಈ ಬಾರಿಯೂ ಅಂತಹದ್ದೆ ಒಂದು ವಿಭಿನ್ನತೆಗೆ ಜೀವ ನೀಡಿದ್ದಾರೆ
ಸೆನ್ಸಾರ್ ಪಾಸಾದ "ಅಥಿ ಐ ಲವ್ ಯು"  title=

ಈವರೆಗೂ ಚಲನಚಿತ್ರಗಳಿಗೆ ಸೆನ್ಸರ್ ಮಂಡಳಿ ಕೊಡುವ  U, U/A, A, ಸರ್ಟಿಫಿಕೇಟ್ ಗಳು ಪ್ರೇಕ್ಷಕರ ವರ್ಗವನ್ನು ನಿಗದಿ ಮಾಡುತ್ತಿದ್ದು ಅದೇ ರೀತಿ "ಅಥಿ ಐ ಲವ್ ಯು" ಚಿತ್ರಕ್ಕೂ ಸಹ ಸೆನ್ಸಾರ್ ಮಂಡಳಿ ಯು ಸರ್ಟಿಫಿಕೇಟ್ ನೀಡುವ ಮೂಲಕ ಮಕ್ಕಳಿಂದ ವಯೋ ವೃದ್ಧರವರೆಗೂ ಸೇರಿದಂತೆ ಎಲ್ಲಾ ವರ್ಗದ ಜನರು ಸಿನಿಮಾವನ್ನು ವೀಕ್ಷಣೆ ಮಾಡಬಹುದು ಎಂದು ಅನುಮತಿ ನೀಡಿದ್ದಾರೆ.

ಆದರೆ ನಿರ್ದೇಶಕ ಲೋಕೇಂದ್ರ ಸೂರ್ಯ ಈ ಚಿತ್ರ ಕೇವಲ ದಂಪತಿಗಳಿಗೆ ಮಾತ್ರ ಎಂದು ಹೇಳಿದ್ದಾರೆ.  ಹೌದು ನಿರ್ದೇಶಕರ ಈ ಹೇಳಿಕೆಯಿಂದ ಎಂಥವರಿಗಾದರೂ ಗೊಂದಲ ಎನಿಸುವುದು ಸಹಜ. ಜನಸಾಮಾನ್ಯರು ಇಂದು ಥಿಯೇಟರ್ ಕಡೆ ಮುಖ ಮಾಡಿ ಚಿತ್ರಗಳನ್ನ ವೀಕ್ಷಿಸುವ ಪ್ರಮಾಣ ಕಡಿಮೆಯಾದ ಬೆನ್ನಲ್ಲಿ ಗಾಂಧಿನಗರದ ನಟರು, ನಿರ್ದೇಶಕರು, ನಿರ್ಮಾಪಕರು ಪ್ರೇಕ್ಷಕರನ್ನು ಥಿಯೇಟರ್ ನತ್ತ ಕರೆದು ತರಲು ಸಾಕಷ್ಟು ಸರ್ಕಸ್ ಮಾಡುತ್ತಿರುವ ಸಂದರ್ಭದಲ್ಲಿ, ನಿರ್ದೇಶಕ ಲೋಕೇಂದ್ರ ಸೂರ್ಯ ನನ್ನ "ಅಥಿ ಐ ಲವ್ ಯು" ಚಿತ್ರವನ್ನು ದಂಪತಿಗಳು ಮಾತ್ರ ಜೊತೆಯಲ್ಲಿ ಕುಳಿತು ನೋಡಬೇಕಿದೆ.  

ಇದನ್ನೂ ಓದಿ-ಅತಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕೂಡ ದೇಹದಿಂದ ಹೊರಹಾಕುತ್ತೆ ಈ ಕರಿಕಾಳು, 5 ವಿಧದಲ್ಲಿ ಬಳಸಿ!

ಸೆನ್ಸರ್ ಮಂಡಳಿ ಕೊಟ್ಟಿರುವ U ಸರ್ಟಿಫಿಕೇಟ್ ಮತ್ತು ನಿರ್ದೇಶಕ ಲೋಕೇಂದ್ರ ಸೂರ್ಯ ಕೊಟ್ಟಿರುವ ಹೇಳಿಕೆಗೆ ಒಂದಕ್ಕೊಂದು ವಿರುದ್ಧವಾಗಿದೆ. ಈ ಬಗ್ಗೆ ನಿರ್ಮಾಪಕ ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರು ನಿರ್ದೇಶಕರು ಕೊಟ್ಟಿರುವ ಹೇಳಿಕೆ ಸರಿಯಾಗಿದೆ ಅದರಿಂದ ನನಗೇನು ನಷ್ಟವಿಲ್ಲ ನಮ್ಮ ಸಿನಿಮಾ ದಂಪತಿಗಳೇ ನೋಡಬೇಕಾದ ಚಿತ್ರವಾದ ಕಾರಣ ಅವರನ್ನೇ ಉದ್ದೇಶಿಸಿ ನಿರ್ದೇಶಕರು ಮಾತನಾಡಿದ್ದಾರೆ ಈ ಸಾಂಸಾರಿಕ ವಿಚಾರಗಳು ಸಂಸಾರದ ಅನುಭವವನ್ನು ಕಂಡವರಿಗೆ ಮಾತ್ರವೇ ರುಚಿಸುತ್ತದೆ ವಿನಹ ಅದರ ಅನುಭವ ಇಲ್ಲದವರಿಗೆ ಅದು ಕ್ಷುಲ್ಲಕ ಎನಿಸಬಹುದು ಆ ನಿಟ್ಟಿನಲ್ಲಿ ನಿರ್ದೇಶಕರು ಕೊಟ್ಟಿರುವ ಹೇಳಿಕೆಯನ್ನೇ ನಾನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-ಮಧುಮೇಹಕ್ಕೆ ಸಂಬಂಧಿಸಿದ ತಪ್ಪು ಕಲ್ಪನೆಗಳು ನಿಮ್ಮ ಮನದಲ್ಲೂ ಇವೆಯಾ?

ಅಲ್ಲದೆ ಈ ಮೊದಲ ಚಿತ್ರ A ಸರ್ಟಿಫಿಕೇಟ್ ಪಡೆದುಕೊಂಡ ಕಾರಣ ನನಗೆ ಬಹಳ ನಿರಾಶೆಯಾಗಿತ್ತು ಆದರೆ ಈಗ "ಅತಿ ಐ ಲವ್ ಯು U" ಸರ್ಟಿಫಿಕೇಟ್ ಪಡೆದುಕೊಂಡು ಬಿಡುಗಡೆಗೆ ಮತ್ತಷ್ಟು ಧೈರ್ಯ ತುಂಬಿದೆ ಎಂದರು ರೆಡ್ ಅಂಡ್ ವೈಟ್ ನಿರ್ಮಾಪಕ ಸವೆನ್ ರಾಜ್.  ಮೊದಲಿನಿಂದಲೂ ಒಂದಲ್ಲ ಒಂದು ರೀತಿ ವಿಭಿನ್ನ ಪ್ರಯತ್ನಗಳನ್ನ ತಮ್ಮ ಇತಿಮಿತಿಗಳಲ್ಲಿ ಸಾಬೀತು ಪಡಿಸುತ್ತಿರುವ ಲೋಕೇಂದ್ರ ಸೂರ್ಯ ಈ ಬಾರಿಯೂ ಅಂತಹದ್ದೆ ಒಂದು ವಿಭಿನ್ನತೆಗೆ ಜೀವ ನೀಡಿದ್ದಾರೆ ಎಂದು ಕಾಣುತ್ತಿದೆ. ಈ ಎಲ್ಲಾ ಗೊಂದಲಗಳಿಗೆ ಡಿಸೆಂಬರ್ 7ರಂದು ಚಿತ್ರದ ಬಿಡುಗಡೆ ಉತ್ತರ ನೀಡಲಿದೆ.  ಒಂದೇ ಮನೆ, ಎರಡೇ ಪಾತ್ರಗಳು, ಒಂದು ಸನ್ನಿವೇಶವನ್ನು ನಿರ್ದೇಶಕರು ಚಿತ್ರವನ್ನಾಗಿ ರೂಪಿಸಿದ್ದಾರೆ.  ಇಂತಹ ವಿಭಿನ್ನ ಪ್ರಯತ್ನದ "ಅಥಿ ಐ ಲವ್ ಯು" ಚಿತ್ರ ಜನಮೆಚ್ಚುಗೆ ಪಡೆಯುತ್ತದೆ ಎಂಬ ಭರವಸೆ ಚಿತ್ರತಂಡಕ್ಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News