ಹಾಲಿವುಡ್‌ ಸಿರೀಸ್‌ನ ಪ್ರೇರಣೆ ಪಡೆದ 'ಬ್ಯಾಚುಲರ್ ಪಾರ್ಟಿ'!

Bachelor Party: ದೂದ್ ಪೇಡ ದಿಗಂತ್, ಲೂಸ್ ಮಾದ ಯೋಗಿ ಹಾಗೂ ಅಚ್ಯುತ್ ಕುಮಾರ್ ಲೀಡ್‌ ರೋಲ್‌ನಲ್ಲಿ ನಟಿಸುತ್ತಿರುವ 'ಬ್ಯಾಚುಲರ್ ಪಾರ್ಟಿ' ಟ್ರೇಲರ್‌ ರಿಲೀಸ್‌ ಆಗಿದ್ದು, ಇದು ಹಾಲಿವುಡ್‌ ಫಿಲ್ಮ್ ಸಿರೀಸ್‌ನ ಪ್ರೇರಣೆ ಪಡೆದಿದೆ ಎನ್ನಲಾಗಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Jan 17, 2024, 11:40 AM IST
  • 'ಬ್ಯಾಚುಲರ್ ಪಾರ್ಟಿ'ಚಿತ್ರ ಇದೇ ತಿಂಗಳು ಜನವರಿ 26 ಕ್ಕೆ ತೆರೆಗೆ ಬರಲು ಸಜ್ಜಾಗುತ್ತಿದ್ದು, ಸದ್ಯ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ.
  • 'ಬ್ಯಾಚುಲರ್ ಪಾರ್ಟಿ' ಚಿತ್ರದಲ್ಲಿ ದೂದ್ ಪೇಡ ದಿಗಂತ್, ಲೂಸ್ ಮಾದ ಯೋಗಿ ಹಾಗೂ ಅಚ್ಯುತ್ ಕುಮಾರ್ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ.
  • 'ಬ್ಯಾಚುಲರ್ ಪಾರ್ಟಿ' ಟ್ರೇಲರ್‌ನಲ್ಲಿ ಮಡದಿ ಜೊತೆ ದಿನ ಜಗಳ ಮಾಡುತ್ತಾ ಜೀವನದಲ್ಲಿ ಸಂತೋಷವನ್ನೇ ಕಾಣದ ಸಂತೋಷ್ ಆಗಿ ದಿಗಂತ್ ಪಾತ್ರದ ಚಿತ್ರದ ಕೇಂದ್ರ ಬಿಂದು ಅನ್ನೋದು ಗೊತ್ತಾಗುತ್ತಿದೆ.
ಹಾಲಿವುಡ್‌ ಸಿರೀಸ್‌ನ ಪ್ರೇರಣೆ ಪಡೆದ 'ಬ್ಯಾಚುಲರ್ ಪಾರ್ಟಿ'! title=

Bachelor Party Trailer Release: ಸ್ಯಾಂಡಲ್‌ವುಡ್‌ ಸಿಂಪಲ್‌ ಸ್ಟಾರ್‌ ರಕ್ಷಿತ್ ಶೆಟ್ಟಿ ನಿರ್ಮಾಣದ 'ಬ್ಯಾಚುಲರ್ ಪಾರ್ಟಿ'ಚಿತ್ರ ಇದೇ ತಿಂಗಳು ಜನವರಿ 26 ಕ್ಕೆ ತೆರೆಗೆ ಬರಲು ಸಜ್ಜಾಗುತ್ತಿದ್ದು, ಸದ್ಯ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಕನ್ನಡ ಚಿತ್ರರಂಗದಲ್ಲಿಯೂ ಬಾಲಿವುಡ್ ಸ್ಟೈಲ್‌ನಲ್ಲಿರುವ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಎಂದು ಎಲ್ಲರೂ ಮೆಚ್ಚಿ ಕೊಂಡಾಡಿದ್ದು, ಫಸ್ಟ್ ಡೇ ಫಸ್ಟ್ ಶೋ 'ಬ್ಯಾಚುಲರ್ ಪಾರ್ಟಿ'ಗೆ ಹೋಗೋಕೆ ತಯಾರಾಗಿದ್ದಾರೆ. 

'ಬ್ಯಾಚುಲರ್ ಪಾರ್ಟಿ' ಚಿತ್ರದಲ್ಲಿ ದೂದ್ ಪೇಡ ದಿಗಂತ್, ಲೂಸ್ ಮಾದ ಯೋಗಿ ಹಾಗೂ ಅಚ್ಯುತ್ ಕುಮಾರ್ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸುತ್ತಿದ್ದು, ಜೀವನದ ಜಂಜಾಟದಿಂದ ಬೇಸತ್ತು ರಿಲ್ಯಾಕ್ಸ್ ಆಗುವುದಕ್ಕೆ ಥಾಯ್ಲೆಂಡ್ ಪ್ರವಾಸ ಕೈಗೊಳ್ಳುವ 3 'ಬ್ಯಾಚುಲರ್'ಗಳ ಕಥೆ ಚಿತ್ರದಲ್ಲಿದೆ. ಆದರೆ ಏನೋ ಮಾಡೋಕೆ ಹೋಗಿ ಮತ್ತೇನೋ ಆಗಿ ಏನೆಲ್ಲಾ ಎಡವಟ್ಟುಗಳಾಗುತ್ತದೆ ಅನ್ನೋದು ಚಿತ್ರದ ಒನ್‌ಲೈನ್ ಸ್ಟೋರಿ ಅನ್ನೋದು ಗೊತ್ತಾಗುತ್ತಿದೆ. 

ಇದನ್ನೂ ಓದಿ: ಸ್ಯಾಂಡಲ್‌ವುಡ್‌ಗೆ ಗೋಲ್ಡನ್‌ ಕ್ವೀನ್‌ ಕಂಬ್ಯಾಕ್‌: ಗುಡ್‌ ನ್ಯೂಸ್‌ ನೀಡಿದ ಅಮೂಲ್ಯ!

ನಿರ್ದೇಶಕ ಅಭಿಜಿತ್ ಮಹೇಶ್ ಚೊಚ್ಚಲ ಪ್ರಯತ್ನದಲ್ಲೇ ಮ್ಯಾಜಿಕ್ ಮಾಡುವ ಸುಳಿವು ಸಿಗುತ್ತಿದ್ದು, ಇದು ಹಾಲಿವುಡ್‌ನ 'ಹ್ಯಾಂಗೋವರ್' ಸರಣಿಯಿಂದ ಪ್ರೇರಣೆಗೊಂಡು ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಒಂದರ್ಥದಲ್ಲಿ ಇದು ಇಂಡಿಯನ್ 'ಹ್ಯಾಂಗೋವರ್' ಎಂದಯ ಕರೆಯಲಾಗಿದ್ದು, ಬ್ಯಾಂಕಾಕ್‌ನಲ್ಲಿ ನಡೆಯುವ ಒಂದು ಮದುವೆ ಇಡೀ ಕಥೆಗೆ ದೊಡ್ಡ ಟ್ವಿಸ್ಟ್ ಕೊಡುತ್ತದೆ. ಇದು ಕೂಡ ಹಾಲಿವುಡ್ ಸಿನಿಮಾದಲ್ಲಿದ್ದು, ಈ ಚಿತ್ರ ರೀಮೆಕ್ ಎನ್ನದಿದ್ದರೂ ಪ್ರೇರಣೆ ಎನ್ನಬಹುದು. 

'ಬ್ಯಾಚುಲರ್ ಪಾರ್ಟಿ' ಟ್ರೇಲರ್‌ನಲ್ಲಿ ಮಡದಿ ಜೊತೆ ದಿನ ಜಗಳ ಮಾಡುತ್ತಾ ಜೀವನದಲ್ಲಿ ಸಂತೋಷವನ್ನೇ ಕಾಣದ ಸಂತೋಷ್ ಆಗಿ ದಿಗಂತ್ ಪಾತ್ರದ ಚಿತ್ರದ ಕೇಂದ್ರ ಬಿಂದು ಅನ್ನೋದು ಗೊತ್ತಾಗುತ್ತಿದೆ. ಇನ್ನುಳಿದಂತೆ ಯೋಗಿ ಹಾಗೂ ಅಚ್ಯುತ್ ಸ್ಪೆಷಲ್ ಅಟ್ರಾಕ್ಷನ್ ಆಗಿದ್ದು, ಬ್ಯಾಂಕಾಕ್‌ನಲ್ಲಿ ಒಂದು ಮಗುವಿನ ತಾಯಿ ಜೊತೆ ಯೋಗಿ ಪ್ರೀತಿಲಿ ಬೀಳುವುದು ಇದೆ. ಇಬ್ಬರಿಗೂ ಒಂದು ಡ್ಯುಯೆಟ್ ಕೂಡ ಇದೆ. ಸಿನಿಮಾದಲ್ಲಿ ಬಾಲಾಜಿ ಮನೋಹರ್, ಪ್ರಕಾಶ್ ತುಂಬಿನಾಡು ಮುಖ್ಯಭೂಮಿಕೆಯಲ್ಲಿದ್ದು, ಇನ್ನುಳಿದಂತೆ ಶೈನ್ ಶೆಟ್ಟಿ, ಪವನ್ ಕುಮಾರ್, ವಿಕಾಸ್ ವಿಕ್ಕಿಪಿಡಿಯ, ಎನ್. ಸೋಮೇಶ್ವರ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

 

Trending News