ಮದುವೆಗೆ ಸಿದ್ದವಾದ ಬಿಗ್ ಬಾಸ್ ಬ್ಯೂಟಿ ಸಂಜನಾ

   

Last Updated : Dec 7, 2017, 05:07 PM IST
ಮದುವೆಗೆ ಸಿದ್ದವಾದ ಬಿಗ್ ಬಾಸ್ ಬ್ಯೂಟಿ ಸಂಜನಾ title=
Pic : Facebook/Sanjana Chidanand

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸದಾ ಗಾಸಿಪ್, ಕಾಂಟ್ರವರ್ಸಿಗಳಿಗೆ ಹೆಸರಾಗಿದ್ದ ಸಂಜನಾ ಈಗ ಮದುವೆ ಆಗ್ತಿದ್ದಾರಂತೆ. ಹುಡುಗ ಯಾರು ಅಂತ ಗೊತ್ತಾಯ್ತಾ? ಅದು ಖಂಡಿತಾ ಬಿಗ್ ಬಾಸ್ ಅಲ್ಲಿ ಸ್ಪರ್ಧಿಯಾಗಿದ್ದ ಭುವನ್ ಅಲ್ಲ !

ಬಿಗ್ ಬಾಸ್ ಸೀಸನ್-4 ಸ್ಪರ್ಧಿಗಳಾಗಿದ್ದ ಭುವನ್ ಮತ್ತು ಸಂಜನಾ ನಡುವೆ ಲವ್ವಿಡವ್ವಿ ನಡೆಯುತ್ತಿದೆ, ಇನ್ನೇನು ಇವರಿಬ್ಬರು ಜೊತೆಯಾಗಿ ಸಪ್ತಪದಿ ತುಳಿಯಲ್ಲಿದ್ದಾರೆ ಎನ್ನುವ ಅಂತೆ ಕಂತೆಗಳಿಗೆ ಈಗ ತೆರೆ ಬಿದ್ದಂತಾಗಿದೆ. 

ಯಾಕಂದ್ರೆ, ಬಿಗ್ ಬಾಸ್ ಖ್ಯಾತಿಯ ಮುದ್ದಾದ ಹುಡುಗಿ ಸಂಜನಾ ಚಿದಾನಂದ್ ತಮ್ಮ ಗೆಳೆಯ ಗೌರವ್ ರಾಯ್ ಜೊತೆ ಅತಿ ಶೀಘ್ರದಲ್ಲಿಯೇ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.  ಗೌರವ್ ರಾಯ್ ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಖಾಸಗಿ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ ಎನ್ನಲಾಗಿದೆ. 

ಗೌರವ್ ಹಾಗೂ ಸಂಜನಾ ಇಬ್ಬರೂ ಒಂದು ವರ್ಷಗಳಿಂದ ಪ್ರೀತಿಸುತ್ತಿದ್ದು, ಇಬ್ಬರ ಮನೆಯಲ್ಲಿ ಅವರ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ ಇದೊಂದು ಲವ್ ಕಂ ಅರೇಂಜ್ ಮ್ಯಾರೇಜ್ ಆಗಿದ್ದು, ಮುಂದಿನ ವರ್ಷ ಇವರಿಬ್ಬರ ನಿಶ್ಚಿತಾರ್ಥ ನೆರವೇರಲಿದೆ. 

Trending News