BBK 10: ಬಿಗ್‌ಬಾಸ್ ಮನೆಯಲ್ಲಿ ಅತಿರೇಕಕ್ಕೆ ಏರಿದ ಗೆಲ್ಲುವ ಹಟ! ರಕ್ತ ಬಂದ್ರೂ ಡೋಂಟ್ ಕೇರ್‌.. ಕಡಿವಾಣ ಬೀಳುತ್ತಾ?

Bigg Boss Kannad 10: ಸಂಗೀತಾ, ಕಾರ್ತಿಕ್‌, ತನಿಷಾ ಒಂದೇ ಗುಂಪಿನಲ್ಲಿ ಒಳ್ಳೆಯ ಸ್ನೇಹದಿಂದಿದ್ದರು.. ಆದರೆ ಇದೀಗ ಮೂವರ ಮಧ್ಯ ಮೂಡಿದ ಬಿರುಕು ರಕ್ತ ಬಂದ್ರೂ ಡೋಂಟ್ ಕೇರ್‌ ಅನ್ನೋ ಲೆವೆಲ್‌ಗೆ ಹೋಗಿದೆ.. ಹಾಗಾದ್ರೆ ಅತಿರೇಕದ ಆಟಕ್ಕೆ ಬೀಳುತ್ತಾ ಬ್ರೇಕ್?‌ 

Written by - Savita M B | Last Updated : Nov 21, 2023, 12:27 PM IST
  • ಇತ್ತೀಚೆಗೆ ಬಿಗ್‌ ಬಾಸ್‌ ಮನೆಯಲ್ಲಿ ಬರೀ ಜಗಳ-ಮುನಿಸು ಹೆಚ್ಚಾಗಿದೆ
  • ಉತ್ತಮ ಸ್ನೇಹಿತರಾಗಿದ್ದ ಸಂಗೀತಾ, ತನಿಷಾ, ಕಾರ್ತಿಕ್‌ ಈಗ ಬೇರೆ ಬೇರೆ ಆಗಿದ್ದಾರೆ..
  • ರಕ್ತ ಬಂದ್ರೂ ಡೋಂಟ್ ಕೇರ್‌.. ಕಡಿವಾಣ ಬೀಳುತ್ತಾ?
BBK 10: ಬಿಗ್‌ಬಾಸ್ ಮನೆಯಲ್ಲಿ ಅತಿರೇಕಕ್ಕೆ ಏರಿದ ಗೆಲ್ಲುವ ಹಟ! ರಕ್ತ ಬಂದ್ರೂ ಡೋಂಟ್ ಕೇರ್‌.. ಕಡಿವಾಣ ಬೀಳುತ್ತಾ? title=

BBK 10: ಇತ್ತೀಚೆಗೆ ಬಿಗ್‌ ಬಾಸ್‌ ಮನೆಯಲ್ಲಿ ಬರೀ ಜಗಳ-ಮುನಿಸು ಹೆಚ್ಚಾಗಿದೆ.. ಉತ್ತಮ ಸ್ನೇಹಿತರಾಗಿದ್ದ ಸಂಗೀತಾ, ತನಿಷಾ, ಕಾರ್ತಿಕ್‌ ಈಗ ಬೇರೆ ಬೇರೆ ಆಗಿದ್ದಾರೆ.. ಕೀ ಪಡೆದುಕೊಂಡು ನಾಮಿನೇಷನ್‌ ಮಾಡುವ ಟಾಸ್ಕ್‌ನಲ್ಲಿ ಸಂಗೀತಾ ತನಿಷಾ ಇಬ್ಬರ ಕೈಗೂ ರಕ್ತ ಬರುತ್ತದೆ.. ಆದರೆ ಅವರಿಬ್ಬರೂ ಡೋಂಟ್‌ ಕೇರ್‌ ಎನ್ನುವಂತೆ ಇದ್ದಿದ್ದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.. ಟಾಸ್ಕ್‌ಗಾಗಿ ಈ ರೀತಿ ವರ್ತಿಸುವುದು ಸರಿಯೇ ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.. 

ಇದನ್ನೆಲ್ಲ ಹೊರತುಪಡಿಸಿ ಸದ್ಯ ಆರು ವಾರಗಳನ್ನು ಕಳೆದು ಏಳನೇ ವಾರದಲ್ಲಿರುವ ಬಿಗ್‌ಬಾಸ್‌ ಮನೆಯಲ್ಲಿ ‘ಕಾಂಪಿಟೇಷನ್‌ ಹೀಟ್‌’ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಬಿಸಿ ಈಗ ಸ್ಪರ್ಧಿಗಳ ತಲೆಬೋಳಿಸಿಕೊಳ್ಳುವವರೆಗೂ ಮುಟ್ಟಿದೆ. ಈ ಟಾಸ್ಕ್‌ ನೀಡಿದ ಸಂಗೀತಾ ಮೇಲೆ ಸದ್ಯ ತನಿಷಾ ಕೆಂಡ ಕಾರುತ್ತಿದ್ದಾರೆ..

ಇದನ್ನೂ ಓದಿ-ರಾಂಗ್‌ ಟೈಮ್‌ನಲ್ಲಿ 'ಸಪ್ತಸಾಗರದಾಚೆ ಎಲ್ಲೋ' ಸೈಡ್- B ರಿಲೀಸ್: ‌ಥಿಯೇಟರ್‌ಗಳಿಗೆ ಪ್ರೇಕ್ಷಕರ ಬರ!

ಬಿಗ್‌ ಬಾಸ್‌ ಮನೆಯನ್ನು ‘ಗಜಕೇಸರಿ’ ಮತ್ತು ‘ಸಂಪತ್ತಿಗೆ ಸವಾಲ್’ ಎಂಬ ಎರಡು ತಂಡಗಳನ್ನಾಗಿ ವಿಭಾಗಿಸಲಾಗಿದೆ. ‘ಗಜಕೇಸರಿ’ ತಂಡದಲ್ಲಿ ವಿನಯ್, ನಮ್ರತಾ, ಸಂಗೀತಾ, ಸ್ನೇಹಿತ್, ಸಿರಿ, ಪ್ರತಾಪ್‌ ಇದ್ದಾರೆ. ‘ಸಂಪತ್ತಿಗೆ ಸವಾಲ್ ತಂಡದಲ್ಲಿ, ‘ಮೈಕಲ್, ನೀತು, ತನಿಷಾ, ವರ್ತೂರು, ಕಾರ್ತಿಕ್ ಮತ್ತು ತುಕಾಲಿ ಸಂತೋಷ್‌ ಇದ್ದಾರೆ.

ಈ ತಂಡಗಳಿಗೆ ಬಿಗ್‌ಬಾಸ್ ಎದುರಾಳಿ ತಂಡಕ್ಕೆ ಒಂದಾದ ಮೇಲೆ ಒಂದರಂತೆ ಸವಾಲ್ ಹಾಕುವ ಟಾಸ್ಕ್ ಅನ್ನು ನೀಡಿದ್ದಾರೆ. ಅದರ ಭಾಗವಾಗಿ ಸಂಗೀತಾ, ತನ್ನ ಎದುರಾಳಿ ತಂಡದಲ್ಲಿರುವ ಕಾರ್ತಿಕ್ ಮತ್ತು ತುಕಾಲಿ ಅವರು ತಲೆಯನ್ನು ಕ್ಲೀನ್ ಶೇವ್ ಮಾಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದಕ್ಕೆ ವಿರೋಧವೂ ವ್ಯಕ್ತವಾಗಿದೆ. 

ನಂತರದ ದೃಶ್ಯದಲ್ಲಿ ಕಾರ್ತಿಕ್, ‘ಗೇಮ್‌ಗಾಗಿ, ತಂಡಕ್ಕಾಗಿ ಏನನ್ನಾದ್ರೂ ಮಾಡ್ತೀನಿ. ಬೋಳಿಸಿಕೊಂಡ್ರೂ ಕೂದಲು ಮತ್ತೆ ಬರತ್ತೆ’ ಎಂದು ಹೇಳಿ ತಲೆಬೋಳಿಸಿಕೊಳ್ಳು ಕೂತಿದ್ದಾರೆ. ನಿನ್ನೆಯ ನಾಮಿನೇಷನ್ ಟಾಸ್ಕ್‌ನಲ್ಲಿ ಸಂಗೀತಾ, ಕಾರ್ತಿಕ್‌ಗೇ ನಾಮಿನೇಷನ್ ಮಾಡಲು ಅಧಿಕಾರ ಕೊಟ್ಟಿದ್ದರು. 

ಇದನ್ನೂ ಓದಿ-ಫಾರಂ‌ಹೌಸ್ ನಲ್ಲಿ ಸಂಜು ವೆಡ್ಸ್ ಗೀತಾ

ಹಾಗೆಯೇ ಕಾರ್ತಿಕ್ ಕೂಡ ಸಂಗೀತಾಗೆ ನಾಮಿನೇಷನ್‌ ಅಧಿಕಾರ ಕೊಟ್ಟಿದ್ದರು. ಕಾರ್ತಿಕ್ ಜೊತೆಗೆ ಇಷ್ಟು ಸ್ನೇಹದಿಂದ ಇದ್ದ ಸಂಗೀತಾ ಅವರೇ ಕಾರ್ತಿಕ್‌ಗೆ ತಲೆಬೋಳಿಸಿಕೊಳ್ಳುವ ಸವಾಲ್ ಹಾಕಿದ್ದಾರೆ. ಕಾರ್ತಿಕ್ ಇದನ್ನು ಸ್ವೀಕರಿಸಿದ್ದಾರೆ ಕೂಡ. 

ಇದನ್ನೆಲ್ಲ ದಿಗ್ಮೂಢರಾಗಿ ನರೇಂದ್ರ (ಬ್ರಹ್ಮಾಂಡ ಗುರೂಜಿ) ನೋಡುತ್ತ ಕೂತಿರುವುದೂ ಪ್ರೋಮೊದಲ್ಲಿ ಸೆರೆಯಾಗಿದೆ. ಹಾಗಾದ್ರೆ ಏನಾಗ್ತಿದೆ ಬಿಗ್‌ಬಾಸ್ ಮನೆಯಲ್ಲಿ? ಗೆಲ್ಲುವ ಹಟ ಯಾವ ಅತಿರೇಕಕ್ಕೆ ಸ್ಪರ್ಧಿಗಳನ್ನು ತೆಗೆದುಕೊಂಡು ಹೋಗುತ್ತಿದೆ? ಇದಕ್ಕೆಲ್ಲ ಕಡಿವಾಣ ಬೀಳುತ್ತದೆಯೇ? ಅನ್ನೋದನ್ನು ಕಾದುನೋಡಬೇಕಿದೆ.. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News