BBK10: ರೊಚ್ಚಿಗೆದ್ದ ಡ್ರೋನ್‌.. ತಮ್ಮದೇ ಗುಂಪಿನ ವಿರುದ್ಧ ತುಕಾಲಿ! ದೊಡ್ಮನೆಯಲ್ಲಿ ನಿಜವಾದ ಊಸರವಳ್ಳಿ ಯಾರು?

Bigg Boss Kannada 10: ಬಿಗ್‌ ಬಾಸ್‌ ಮನೆಯಲ್ಲಿ ಆಟದ ವರಸೆಯನ್ನು ಬದಲಿಸಿರುವ ಡ್ರೋನ್‌.. ತಮ್ಮದೇ ಗುಂಪಿನವರ ವಿರುದ್ಧ ನಿಂತ ತುಕಾಲಿ ಸಂತು.. ಇದೀಗ ಬಿಗ್‌ ಬಾಸ್‌ ಮನೆಯಲ್ಲಿ ಊಸರವಳ್ಳಿ ಯಾರು ಅನ್ನೋದೇ ಅಭಿಮಾನಿಗಳಿಗೆ ಗೊಂದಲ..

Written by - Savita M B | Last Updated : Nov 9, 2023, 01:48 PM IST
  • ‘ಪಾಪರೆಡ್ಡಿಪಾಳ್ಯ’ ಗ್ಯಾಂಗ್‌ನಲ್ಲಿ ಬಿರುಕು ಮೂಡುತ್ತಿದೆ
  • ತುಕಾಲಿ ತಮ್ಮ ತಂಡದ ವಿರುದ್ಧ ತಿರುಗಿ ಬಿದ್ದಿದ್ದಾರೆ
  • ಬಿಗ್‌ ಬಾಸ್ ಮನೆಯಲ್ಲಿ ಸಹನಾಮೂರ್ತಿಯಂತಿದ್ದ ಡ್ರೋನ್‌ ಪ್ರತಾಪ್‌ ಇದೀಗ ರೊಚ್ಚಿಗೆದ್ದಿದ್ದಾರೆ.
BBK10: ರೊಚ್ಚಿಗೆದ್ದ ಡ್ರೋನ್‌.. ತಮ್ಮದೇ ಗುಂಪಿನ ವಿರುದ್ಧ ತುಕಾಲಿ! ದೊಡ್ಮನೆಯಲ್ಲಿ ನಿಜವಾದ ಊಸರವಳ್ಳಿ ಯಾರು?  title=

Drone Prathap: ಬಿಗ್‌ ಬಾಸ್‌ ಮನೆಯಲ್ಲಿ ವಿನಯ್‌ ಹಾಗೂ ನಮ್ರತಾ ಗ್ರೂಪಿಸಂ.. ಫಿಕ್ಸಿಂಗ್‌ ಗೇಮ್‌ ಸ್ಪಷ್ಟವಾಗಿ ಎಲ್ಲರಿಗೂ ಕಾಣುತ್ತಿದೆ.. ಇನ್ನು ಇವರು ಗುಂಪಿಗೆ ಈ ಹಿಂದೆ ‘ಪಾಪರೆಡ್ಡಿಪಾಳ್ಯ’ ಎಂದು ಹೆಸರಿಡಲಾಗಿತ್ತು. ಆದರೆ ಇದೀಗ ಇದೇ ಗ್ಯಾಂಗ್‌ನಲ್ಲಿ ಬಿರುಕು ಮೂಡಿದೆ.. 

ಹೌದು "ವಿನಯ್‌ಗೆ ದೇವ್ರಾಣೆ ಕಣಿಕರನೇ ಇಲ್ಲ.. ಸಂಗೀತಾ ಹಾಗೂ ಕಾರ್ತಿಕ್‌ ಅವರನ್ನು ನಾನು ಏನೋ ಅಂದುಕೊಂಡಿದ್ದೇ ಆದರೆ ಅವರೇ ಒಳ್ಳೆಯವರು" ಎಂದು ತುಕಾಲಿ ಸಂತು ತಮ್ಮ ಬಾಯಿಂದಲೇ ಸತ್ಯ ಬಿಚ್ಚಿಟ್ಟಿದ್ದಾರೆ.  ಸದ್ಯ ‘ಪಾಪರೆಡ್ಡಿಪಾಳ್ಯ’ ಗುಂಪಿನವರು ಡಬಲ್‌ ಗೇಮ್‌ ಆಡುತ್ತಿದ್ದಾರೆ ಅನ್ನೋದೆ ತುಕಾಲಿ ಅಭಿಪ್ರಾಯ ಎನ್ನುವಹಾಗೇ ಮಾತನಾಡಿದ್ದಾರೆ..

ಇದನ್ನೂಓದಿ-ಈ ಬಾರಿ ಬಿಗ್‌ ಬಾಸ್‌ ವಿನ್ನರ್‌ ಇವರೇ ಅಂತೆ.. ಆರ್ಯವರ್ಧನ್‌ ಭವಿಷ್ಯ ನಿಜವಾದ್ರೆ ಜಿಂಗಲಕಾ ಲಕಾ ಲಕಾ ಪಕ್ಕಾ!!

ಇದನ್ನು ಹೊರತುಪಡಿಸಿ ಬಿಗ್‌ ಬಾಸ್ ಮನೆಯಲ್ಲಿ ಸಹನಾಮೂರ್ತಿಯಂತಿದ್ದ ಡ್ರೋನ್‌ ಪ್ರತಾಪ್‌ ಇದೀಗ ರೊಚ್ಚಿಗೆದ್ದಿದ್ದಾರೆ.. ಇಷ್ಟು ದಿನ ಸೈಲೆಂಟ್‌ ಆಗಿರುವ ಸ್ಪರ್ಧಿ ಎಂದರೇ ಅದು ಡ್ರೋನ್‌ ಪ್ರತಾಪ್‌ ಎನ್ನಲಾಗುತ್ತಿತ್ತು ಆದರೆ ಇದೀಗ ಅವರ ಆಟದ ವರಸೆಯೇ ಬದಲಾಗಿದೆ.. ಮನೆಯ ಸದಸ್ಯೆರ ಪ್ರಶ್ನೆಗಳ ಹಾವಳಿಗೆ ಬೇಸತ್ತು.. ಕೈಯಲ್ಲಿದ್ದ ವಸ್ತುಗಳನ್ನು ಎಸೆದು ಕೂಗಾಡಿದ್ದಾರೆ. ಹೀಗಾಗಿ ಪ್ರತಾಪ್ ಮೇಲೆ ಅವರ ಸದಸ್ಯರೇ ಅಸಮಾಧಾನ ಹೊರಹಾಕಿ, ತನಿಷಾ, ವರ್ತೂರು ಸಂತೋಷ್ ಮುಂತಾದವರು ಗರಂ ಆಗಿದ್ದಾರೆ.

ಒಂದು ಕಡೆ ತಮ್ಮದೇ ಗುಂಪಿನ ವಿರುದ್ಧವಾಘಿ ಮಾತನಾಡುತ್ತಿರುವ ತುಕಾಲಿ ಸಂತು.. ಇನ್ನೊಂದು ಕಡೆ ತಮ್ಮ ಆಟದ ಶೈಲಿಯನ್ನು ಬದಲಿಸಿದ .. ತಾಳ್ಮೆ ಕಳೆದುಕೊಂಡು ಮಾತನಾಡುತ್ತಿರುವ ಪ್ರತಾಪ್‌ ಇವರಲ್ಲಿ ಊಸರವಳ್ಳಿ ಯಾರು? ಎನ್ನುತ್ತಿದ್ದಾರೆ ವೀಕ್ಷಕರು! 

ಇದನ್ನೂಓದಿ-"ನಮ್ ಮೀಸೆನಾ ನಾವೇ ತಿರುಗಿಸಿಕೊಳ್ಳಬೇಕು": ನಾದಬ್ರಹ್ಮನ ಡೈಲಾಗ್‌ ನೆನಪಿಸಿಕೊಂಡ ಬಿ.ಸಿ.ಪಾಟೀಲ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News