BBK10: ಮನೆಮಂದಿ ಕಣ್ಣಲ್ಲಿ ನೀರು ತರಿಸಿದ ‘ಅಕ್ಕ’..! ಅಕ್ಕರೆಗೆ ಕರಗಿದ ಕಾರ್ತಿಕ್‌ ಸಿರಿಗೆ ಹೇಳಿದ್ದೇನು..?

Bigboss Siri-Kartik: ಬಿಗ್‌ಬಾಸ್‌ ಮನೆಯ ಸದಸ್ಯರು ಕಣ್ಣೀರು ಹಾಕುವುದು ಹೊಸ ವಿಷಯವೇನಲ್ಲ. ಜಗಳ ಮಾಡಿಕೊಂಡು, ಟಾಸ್ಕ್‌ನಲ್ಲಿ ಸೋತು, ಕುಟುಂಬದ ಸದಸ್ಯರ ನೆನೆದುಕೊಂಡು ಆಗಾಗ ಕಣ್ಣೀರು ಹಾಕುತ್ತಿರುವುದು ನಡೆಯುತ್ತಲೇ ಇರುತ್ತದೆ.   

Written by - Savita M B | Last Updated : Oct 17, 2023, 09:04 PM IST
  • ಬಿಗ್‌ಬಾಸ್‌ ಮನೆಯ ಸದಸ್ಯರು ಕಣ್ಣೀರು ಹಾಕುವುದು ಹೊಸ ವಿಷಯವೇನಲ್ಲ
  • ಇಲ್ಲಿಯೂ ಬಿಗ್‌ಬಾಸ್‌ ಸ್ಪರ್ಧಿಗಳ ಕಣ್ಣಲ್ಲಿ ನೀರು ಬಂತು
  • ಆದರೆ ಮೇಲೆ ಹೇಳಿರುವ ಯಾವ ಕಾರಣಕ್ಕೂ ಅಲ್ಲ
BBK10: ಮನೆಮಂದಿ ಕಣ್ಣಲ್ಲಿ ನೀರು ತರಿಸಿದ ‘ಅಕ್ಕ’..! ಅಕ್ಕರೆಗೆ ಕರಗಿದ ಕಾರ್ತಿಕ್‌ ಸಿರಿಗೆ ಹೇಳಿದ್ದೇನು..?  title=

BiggBossKannada: ಇಲ್ಲಿಯೂ ಬಿಗ್‌ಬಾಸ್‌ ಸ್ಪರ್ಧಿಗಳ ಕಣ್ಣಲ್ಲಿ ನೀರು ಬಂತು. ಆದರೆ ಮೇಲೆ ಹೇಳಿರುವ ಯಾವ ಕಾರಣಕ್ಕೂ ಅಲ್ಲ. ಮತ್ತೇಕೆ? ಅವರ ಹೃದಯ ಕರಗಿದ್ದು ಒಂದು ಹೃದಯಂಗಮ ಸನ್ನಿವೇಶಕ್ಕೆ. ಆ ಸನ್ನಿವೇಶವನ್ನು ಕಟ್ಟಿಕೊಟ್ಟವರೂ ಸ್ಪರ್ಧಿಗಳಾದ ಸಿರಿ, ಕಾರ್ತಿಕ್ ಮತ್ತು ಗೌರೀಶ ಅಕ್ಕಿ ಅವರೇ. 

ಸ್ಪರ್ಧಿಗಳೆಲ್ಲ ತಮ್ಮದೇ ಹೆಸರಿನ ಪಾತ್ರಗಳಾಗಿ ಅಭಿನಯಿಸಿದ ಸ್ಕಿಟ್ ಹೆಸರು ಅಕ್ಕ. ಅಕ್ಕ ಮನೆಯಲ್ಲಿ ತನ್ನ ನೆಚ್ಚಿನ ತಮ್ಮನಿಗೆ ಕೈತುತ್ತು ತಿನ್ನಿಸುತ್ತಿದ್ದಾಳೆ. ಯಾಕೋ ಅವಳ ಮುಖದಲ್ಲಿ ನೋವಿದೆ. ಕಣ್ಣುಗಳಲ್ಲಿ ಕಂಬನಿ ಉಕ್ಕಿ ಹರಿಯುತ್ತಿದೆ. 

ಇದನ್ನೂ ಓದಿ-ದುಬಾರಿ ಲಿಯೋ ಟಿಕೆಟ್:‌ ಐಮ್ಯಾಕ್‌ ಥಿಯೇಟರ್‌ನಲ್ಲೂ 75%ಟಿಕೆಟ್ ದರ ಹೆಚ್ಚಳ

ಸಿರಿ: ಕಾರ್ತಿಕ್… ಹುಶಾರು… 
ಕಾರ್ತಿಕ್: ಹೂ ಅಕ್ಕಾ…. 
ಸಿರಿ ಕಣ್ಣುಗಳಲ್ಲಿ ಕಂಬನಿ, ತುಟಿಗಳಲ್ಲಿ ನಗು ಇಟ್ಟುಕೊಂಡೇ ಕಾರ್ತಿಕ್ ನೆತ್ತಿಯನ್ನು ಅಕ್ಕರೆಯಿಂದ ಮುದ್ದಿಸುತ್ತಾಳೆ. 
ಕಾರ್ತಿಕ್: ಅಕ್ಕಾ… ನೀನು… ಅಲ್ಲ…
ಸಿರಿ: ಇನ್ನೊಂದ್ ಮಾತು… ನಿಂಗೆ ಏನೇ ಕಷ್ಟ ಬರ್ಲಿ, ನೀನೆನೇ ಸಾಧನೆ ಮಾಡು… ಈ ಅಕ್ಕ ನಿನ್ ಜೊತೆಗೆ ಯಾವಾಗ್ಲೂ ಇರ್ತಾಳೆ. 
ಕಾರ್ತಿಕ್‌ ಗಟ್ಟಿಯಾಗಿ ಅಕ್ಕನನ್ನು ತಬ್ಬಿಕೊಳ್ಳುತ್ತಾನೆ.
ಕಾರ್ತೀಕ್: ಪಲಾವ್ ತಿನ್ನಿಸ್ತೀಯಾ?
ಸಿರಿ: ಹೂಂ
ಕಾರ್ತಿಕ್: ನಂಗೆ ನೀರುಕುಡಿಬೇಕು ಅನಿಸ್ತಿದೆ… ತಂದ್ಕೊಡ್ತೀಯಾ…
ಸಿರಿ: ಅಪ್ಪ, ಅಮ್ಮ ಹುಶಾರು….
ಸಿರಿ ಎದ್ದು ಹೊರಡುತ್ತಾಳೆ. 
ಕಾರ್ತಿಕ್: ಅಕ್ಕಾ… ಅದು…
ಅಷ್ಟರೊಳಗೆ ಮನೆಯೊಳಗೆ ಗೌರೀಶ್ ಬರುತ್ತಾನೆ.
ಗೌರೀಶ: ಬಾಗಿಲು ಯಾಕೆ ಓಪನ್ ಇದೆ? 
ಕಾರ್ತಿಕ್ ಕಾಣಿಸುತ್ತಾನೆ.
ಗೌರೀಶ: ಕಾರ್ತಿಕ್… ನೀನ್ಯಾವಾಗ ಬಂದೆ…
ಕಾರ್ತೀಕ್: ಬಾವಾ…
ಗೌರೀಶ; ಬೆಳಗಿಂದ ನಿನ್ನ ಫೋನ್‌ಗೆ ಟ್ರೈ ಮಾಡ್ತಿದೀನಿ. ಸ್ವಿಚ್‌ಆಫ್ ಆಗೋಗಿದೆ…
ಕಾರ್ತಿಕ್: ಭಾವಾ ಬರ್ತಾ ದಾರಿಲಿ ಯಾವ್ದೋ ಒಬ್ಬ ಕಳ್ಳ ನನ್ನ ಫೋನ್‌ನ…. ಅದ್ ಬಿಡಿ…. ಅದು ಆಮೇಲೆ ಹೇಳ್ತೀನಿ… ಅಕ್ಕ ಸಖತ್ತಾಗಿ ಪಲಾವ್ ಮಾಡಿದಾಳೆ. ನೀವು ಸುಸ್ತಾದವ್ರ ಹಾಗೆ ಕಾಣಿಸ್ತಿದೀರಾ… ಸಖತ್ತಾಗಿ ಪಲಾವ್‌. ತಿನ್ನೋಣಂತೆ ಬನ್ನಿ…
ಗೌರೀಶ ಹಾಗೆಯೇ ನಿಂತುಕೊಂಡಿದ್ದಾನೆ.
ಗೌರೀಶ: ಏನಂದೆ? ಅಕ್ಕ ಪಲಾವ್ ಮಾಡಿದಾಳಾ? ಕಾರ್ತಿಕ್ ನಿಂಗೇನು ಹುಚ್ಚು ಹಿಡ್ದಿದ್ಯಾ?
ಕಾರ್ತಿಕ್: ಯಾಕ್ ಬಾವಾ?
ಗೌರೀಶ: ಈವತ್ ಬೆಳಗಿನ ಜಾವ ಆಕ್ಸಿಡೆಂಟ್ ಆಗಿ ನಿಮ್ಮಕ್ಕ ಹೋಗ್ಬಿಟ್ಳು ಕಣೋ… ಆನ್‌ಸ್ಪಾಟ್!
ಕಾರ್ತಿಕ್‌ ನಂಬಲೇ ಸಾಧ್ಯವಾಗುವುದಿಲ್ಲ. ಹಾಗಾದ್ರೆ ಈಗಷ್ಟೇ ಕಾರ್ತಿಕ್ ಜೊತೆಗೆ ಮಾತಾಡಿದ್ದು ಯಾರು? ತುತ್ತು ತಿನ್ನಿಸಿದ್ದು ಯಾರು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಪ್ರೇಕ್ಷಕರಿಗೇ ಬಿಡುತ್ತದೆ ಈ ಸ್ಕಿಟ್‌.

ಇದನ್ನೂ ಓದಿ-ಶಾಖಾಹಾರಿ’ ಫಸ್ಟ್ ಲುಕ್ ಬಿಡುಗಡೆ..ಹೇಗಿದೆ ರಂಗಾಯಣ ರಘು ಲುಕ್..?

ಈ ಭಾವಪೂರ್ಣ ಸ್ಕಿಟ್ ಅನ್ನು ನೀವು ಇಲ್ಲಿ ನೋಡಬಹುದು:https://jiocinema.onelink.me/fRhd/3qeqczco 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News