​BBK10: ಬಿಗ್‌ ಬಾಸ್‌ ಮನೆಗೆ ಕ್ರಿಕೆಟರ್‌ ವೈಲ್ಡ್‌ ಕಾರ್ಡ್ ಎಂಟ್ರಿ.. ಈ ಸ್ಟೈಲಿಶ್ ಹಂಕ್ ಯಾರು ಗೊತ್ತೇ.!

Cricketer wild card entry : ಒಬ್ಬರು ಕಾರಿನಲ್ಲಿ ಜೂಮ್‌ ಅಂತ ಎಂಟ್ರಿ ಕೊಟ್ಟರೆ, ಮತ್ತೊಬ್ಬರು ಮನೆಯೊಳಗಿನಿಂದಲೇ ಬಂದಿದ್ದಾರೆ. ಇದನ್ನು ಕಂಡು ಮನೆ ಮಂದಿಯೆಲ್ಲ ಶಾಕ್‌ ಆಗಿದ್ದಾರೆ. 

Written by - Chetana Devarmani | Last Updated : Nov 27, 2023, 02:04 PM IST
  • ಬಿಗ್‌ಬಾಸ್‌ ಕನ್ನಡ ಸೀಸನ್ 10 ರಲ್ಲಿ ಬಿಗ್‌ ಟ್ವಿಸ್ಟ್‌
  • ಬಿಗ್‌ ಬಾಸ್‌ ಮನೆಗೆ ಡಬಲ್‌ ವೈಲ್ಡ್‌ ಕಾರ್ಡ್‌ ಎಂಟ್ರಿ
  • ಒಬ್ಬರು ಹಾಟ್‌ ಬ್ಯೂಟಿ.. ಇನ್ನೊಬ್ಬರು ಕ್ರಿಕೆಟರ್‌
​BBK10: ಬಿಗ್‌ ಬಾಸ್‌ ಮನೆಗೆ ಕ್ರಿಕೆಟರ್‌ ವೈಲ್ಡ್‌ ಕಾರ್ಡ್ ಎಂಟ್ರಿ.. ಈ ಸ್ಟೈಲಿಶ್ ಹಂಕ್ ಯಾರು ಗೊತ್ತೇ.!  title=
Avinash Shetty

Bigg Boss Kananda wild card entry: ಬಿಗ್‌ಬಾಸ್‌ ಕನ್ನಡ ಸೀಸನ್ 10 ರಲ್ಲಿ ಒಂದು ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಆಗಿದೆ. ಅದು ಒಬ್ಬರಲ್ಲ, ಇಬ್ಬರು ಸ್ಪರ್ಧಿಗಳು ಬಲಗಾಲಿಟ್ಟು ಒಳಗೆ ಬಂದಿದ್ದಾರೆ. ಒಬ್ಬರು ಕಾರಿನಲ್ಲಿ ಜೂಮ್‌ ಅಂತ ಎಂಟ್ರಿ ಕೊಟ್ಟರೆ, ಮತ್ತೊಬ್ಬರು ಮನೆಯೊಳಗಿನಿಂದಲೇ ಬಂದಿದ್ದಾರೆ. ಇದನ್ನು ಕಂಡು ಮನೆ ಮಂದಿಯೆಲ್ಲ ಶಾಕ್‌ ಆಗಿದ್ದಾರೆ. 

ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳಲ್ಲಿ ಒಬ್ಬರು ಫ್ಯಾಷನ್‌ ಮಾಡೆಲ್‌ ಪವಿ ಪೂವಪ್.‌ ಇವರ ಜೊತೆಗೆ ಪುರುಷ ಸ್ಪರ್ಧಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ. ಇವರ ಮುಖವನ್ನು ರಿವೀಲ್‌ ಮಾಡಿಲ್ಲ. ಆದರೆ ಆಸ್ಪರ್ಧಿ ಅವಿನಾಶ್‌ ಶೆಟ್ಟಿ ಎನ್ನಲಾಗ್ತಿದೆ. ಕ್ರಿಕೆಟರ್‌, ಫ್ಯಾಷನ್‌ ಮಾಡೆಲ್‌ ಆಗಿರುವ ಅವಿನಾಶ್ ಶೆಟ್ಟಿ ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾಋಡ್‌ ಎಂಟ್ರಿ ಪಡೆದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್‌ ಆಗಿದೆ.

ಇದನ್ನೂ ಓದಿ : Bigg Boss 10: ಕ್ಯಾಪ್ಟನ್ ಆಗಿದ್ರು ನೀತು ವನಜಾಕ್ಷಿ ಎಲಿಮಿನೇಟ್‌ ಆಗಲು ಕಾರಣ ಇದು.! 

ಅವಿನಾಶ್ ಅವರು  ಸುಕನ್ಯಾ ಮತ್ತು ಶ್ರೀಧರ್ ಶೆಟ್ಟಿ ಅವರ ಪುತ್ರ. ಇವರು ಸುರತ್ಕಲ್ ಮೂಲದವರು. 2006ರಲ್ಲಿ ಕೋಕ್‌ ಮತ್ತು 2009ರಲ್ಲಿ MRF ಟೈಯರ್‌ ಜಾಹೀರಾತಿನ ಮೂಲಕ ಗ್ಲಾಮರ್ ಲೋಕಕ್ಕೆ ಕಾಲಿಟ್ಟರು. 2007 ರಲ್ಲಿ ಮಿಸ್ಟರ್ ಮಂಗಳೂರು ಪ್ರಶಸ್ತಿ ಮತ್ತು 2012 ರಲ್ಲಿ ಮಾಡೆಲ್ ಹಂಟ್ ಸ್ಪರ್ಧೆಯಲ್ಲಿ ಗೆದ್ದರು. 

 

 

ನಿರ್ಮಾಪಕ ಸುದೇಶ್ ಶೆಟ್ಟಿ ಸಾಯಿಕೃಷ್ಣ ನಿರ್ದೇಶನದ 'ಚಲ್ಲ ಪಿಲ್ಲಿ' ಸಿನಿಮಾದಲ್ಲಿ ಅವಿನಾಶ್‌ ನಟಿಸಿದ್ದಾರೆ. ಬದ್ಮಾಶ್ ಚಿತ್ರದಲ್ಲೂ ಅವಿನಾಶ್‌ ಅಭಿನಯಿಸಿದ್ದಾರೆ. ಇದಲ್ಲದೇ ಅವಿನಾಶ್‌ ಕ್ರಿಕೆಟರ್ ಆಗಿಯೂ ಗುರುತಿಸಿಕೊಂಡಿದ್ದಾರೆ. 

 

 

ಇದನ್ನೂ ಓದಿ : ​BBK10: 'ಬಿಗ್ ಬಾಸ್ ಕನ್ನಡ 10' ಮನೆಗೆ ಕಾಲಿಟ್ಟ ಬೋಲ್ಡ್ ಬ್ಯೂಟಿ ಯಾರು ಗೊತ್ತಾ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News