Tanisha Kuppanda : ಕೊನೆಗೂ ಜೈಲು ಸೇರಿದ ತನಿಷಾ ಕುಪ್ಪಂಡ, ಅಮ್ಮನ ನೆನೆದು ಕಣ್ಣೀರು!

Tanisha Kuppanda : ಬಿಗ್ ಬಾಸ್‌ ಮನೆಯಲ್ಲಿ ತುಕಾಲಿ ಸಂತೋಷ್ ಈ ವಾರ ಉತ್ತಮ ಎನಿಸಿಕೊಂಡರೆ, ತನಿಷಾ ಕುಪ್ಪಂಡ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದಾರೆ. 

Written by - Chetana Devarmani | Last Updated : Nov 18, 2023, 08:25 AM IST
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10
  • ತುಕಾಲಿ ಸಂತೋಷ್ ಈ ವಾರದ ಉತ್ತಮ
  • ತನಿಷಾ ಕುಪ್ಪಂಡಗೆ ಕಳಪೆ ಪಟ್ಟ
Tanisha Kuppanda : ಕೊನೆಗೂ ಜೈಲು ಸೇರಿದ ತನಿಷಾ ಕುಪ್ಪಂಡ, ಅಮ್ಮನ ನೆನೆದು ಕಣ್ಣೀರು!  title=
Tanisha Kuppanda

Bigg Boss Kannada Season 10 : ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ದಿನಕ್ಕೊಂದು ಹೊಸ ತಿರುವುಗಳೊಂದಿಗೆ ಸಾಗುತ್ತಿದೆ. ಹಿಂದಿನ ಸೀನಸ್‌ಗಳಂತೆ ಕೆಲವು ಸಂಗತಿಗಳಿದ್ದರೂ, ಮತ್ತೆ ಕೆಲವು ಆಶ್ಚರ್ಯಕರ ಘಟನೆಗಳು ನಡೆಯುತ್ತಿವೆ. ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಉತ್ತಮ ಕಳಪೆ ವಿಚಾರದಲ್ಲೂ ಅಚ್ಚರಿಯ ಹೆಸರುಗಳೇ ಕೇಳಿಬಂದಿವೆ. 

ಬಿಗ್ ಬಾಸ್‌ ಮನೆಯಲ್ಲಿ ಎಲ್ಲರ ಟೀಕೆಗೆ ಗುರಿಯಾಗಿದ್ದ ತುಕಾಲಿ ಸಂತೋಷ್ ಈ ವಾರ  ಉತ್ತಮ ಎನಿಸಿಕೊಂಡರೆ, ಸ್ಟ್ರಾಂಗ್‌ ಕಂಟೆಸ್ಟಂಟ್‌ ಆಗಿರುವ ತನಿಷಾ ಕುಪ್ಪಂಡ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದಾರೆ. 

ಇಷ್ಟು ದಿನ ವಿನಯ್‌ ಜೊತೆಗೆ ಕಾಣಿಸಿಕೊಡಿದ್ದ ತುಕಾಲಿ ಹಲವರ ಟೀಕೆಗೆ ಗುರಿಯಾಗಿದ್ದರು. ಆದರೆ ಈಗ ಬದಲಾಗಿದ್ದಾರೆ.  ಆಪ್ತರಾಗಿದ್ದ ವಿನಯ್ ಎದುರೇ ತೊಡೆ ತಟ್ಟಿದ್ದಾರೆ. ಇದು ಅನೇಕರಿಗೆ ಮನಸೆಳೆದಿದೆ. ಟಾಸ್ಕ್‌ನಲ್ಲಿ ಸಹ ತುಕಾಲಿ ಅವರ ಪರ್ಫಾರ್ಮೆನ್ಸ್ ಉತ್ತಮವಾಗಿದೆ. ಈ ಕಾರಣಗಳಿಂದ ಮನೆಯವರ ಬಳಿ ಭೇಷ್‌ ಎನಿಸಿಕೊಂಡು ಉತ್ತಮ ಪಟ್ಟ ಪಡೆದಿದ್ದಾರೆ. 

ಇದನ್ನೂ ಓದಿ : ಕಪ್ಪು ಉಡುಗೆಯಲ್ಲಿ ಕಮಲ್‌ ಪುತ್ರಿ..! ಶೃತಿ ಹಾಸ್‌ ಅಂದಕ್ಕೆ ಫ್ಯಾನ್ಸ್‌ ಫಿದಾ 

ಸ್ಟ್ರಾಂಗ್ ಸ್ಪರ್ಧಿ ಎಂದೇ ಬಿಂಬಿತವಾಗಿರುವ ತನಿಷಾ ಕುಪ್ಪಂಡ ಕಳಪೆ ಪಟ್ಟ ಪಡೆದಿದ್ದಾರೆ. ಈ ವಾರದ ಒಂದು ಟಾಸ್ಕ್‌ ವಿಚಾರವಾಗಿ ಅವರಿಗೆ ಕಳಪೆ ನೀಡಲಾಗಿದೆ. ಆದರೆ ತನಿಷಾ ಇದಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೈಲಿನಲ್ಲಿ ಅಮ್ಮನನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಈ ವಾರ ಕಾರ್ತಿಕ್ ಮಹೇಶ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಪ್ರತಿ ವಾರ ನಾಮಿನೇಟ್ ಆಗುತ್ತಲೇ ಬಂದಿದ್ದ ಕಾರ್ತಿಕ್‌, ಈ ವಾರ ಎಲಿಮಿನೇಷನ್‌ನಿಂದ ಪಾರಾದರೆ, ಕ್ಯಾಪ್ಟನ್ ಆಗಿರುವುದರಿಂದ ಮುಂದಿನ ವಾರ ನಾಮಿನೇಷನ್‌ನಿಂದ ಬಚಾವ್ ಆಗಲಿದ್ದಾರೆ.  

ಇದನ್ನೂ ಓದಿ : ಪ್ರತಾಪ್‌ ಒಳ್ಳೆತನಕ್ಕೆ ಮನಸೋತ್ರಾ ಸಂಗೀತಾ ಶೃಂಗೇರಿ..! ಇನ್ಮುಂದೆ ಲವ್‌ ಪ್ರಪಂಚದಲ್ಲಿ ಹಾರುತ್ತಂತೆ ಡ್ರೋನ್‌ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News