ಬಿಗ್‌ಬಾಸ್‌ ಮನೆಯ ವಾರದ ಕಳಪೆ ಪಟ್ಟಕ್ಕೇರಿದ ಪವಿ ಪೂವಪ್ಪ: ಉತ್ತಮ ಸ್ಥಾನಗಳಿಸಿದ ತುಕಾಲಿ ಸಂತು!

Bigg Boss Kannada 10: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಶೋದಲ್ಲಿ ಈ ವಾರ ಸ್ಕೂಲ್‌ ಟಾಸ್ಕ್‌ನಲ್ಲಿ ತುಕಾಲಿ ಸಂತು ಉತ್ತಮ ಪಡೆದಿದ್ದಾರೆ. ಇತ್ತ ಪವಿ ಪೂವಪ್ಪ ಚೆನ್ನಾಗಿ ಪರ್ಫಾಮೆನ್ಸ್‌ ನೀಡದೆ ಕಳೆ ಪಟ್ಟ ಪಡೆದು ಜೈಲು ಸೇರಿದ್ದಾರೆ.

Written by - Zee Kannada News Desk | Last Updated : Dec 16, 2023, 11:17 AM IST
  • ಸ್ಕೂಲ್‌ ಟಾಸ್ಕ್ ಮುಗಿದ್ಮೇಲೆ ‘ಮನರಂಜನಾತ್ಮಕ ವಿದ್ಯಾರ್ಥಿ’ ಎಂದೆನಿಸಿಕೊಂಡಿದ್ದ ತುಕಾಲಿ ಸಂತು ಈ ವಾರ ಬೆಸ್ಟ್ ಪರ್ಫಾಮೆನ್ಸ್ ಮೆಡಲ್‌ ಅನ್ನೂ ತಮ್ಮದಾಗಿಸಿಕೊಂಡರು.
  • ಸ್ಕೂಲ್‌ ಟಾಸ್ಕ್‌ನಲ್ಲಿ ಪವಿ ಪೂವಪ್ಪ ಕೊಂಚ ಡಲ್ ಆಗಿದ್ದರು ಎಂಬ ಕಾರಣಕ್ಕೆ ಸಿರಿ, ಸಂಗೀತಾ, ಕಾರ್ತಿಕ್, ತನಿಷಾ ‘ಕಳಪೆ ಪಟ್ಟ ಕೊಟ್ಟರು.
  • ಈ ವಾರ ಪವಿ ಪೂವಪ್ಪ ಬಿಗ್‌ಬಾಸ್‌ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ.
ಬಿಗ್‌ಬಾಸ್‌ ಮನೆಯ ವಾರದ ಕಳಪೆ ಪಟ್ಟಕ್ಕೇರಿದ ಪವಿ ಪೂವಪ್ಪ: ಉತ್ತಮ ಸ್ಥಾನಗಳಿಸಿದ ತುಕಾಲಿ ಸಂತು!  title=

Bigg Boss Best And Worst Performer: ಬಿಗ್‌ಬಾಸ್‌ ಮನೆಯಲ್ಲಿ 10ನೇ ವಾರ ಬಿಗ್‌ಬಾಸ್‌ ಪ್ರಾಥಮಿಕ ಶಾಲೆ ಆಟ ನಡೆದಿದ್ದು, ಈ ಸ್ಕೂಲ್‌ ಟಾಸ್ಕ್‌ನಲ್ಲಿ ವಿದ್ಯಾರ್ಥಿಯಾಗಿ ತುಕಾಲಿ ಸಂತು ಎಲ್ಲರನ್ನೂ ನಕ್ಕಿ ನಲಿಸಿದ್ದರು. ತುಂಟ ವಿದ್ಯಾರ್ಥಿಯಾಗಿ ಬೇಜಾನ್ ಕ್ವಾಟ್ಲೆ ಕೊಟ್ಟಿದ್ದರು. ಆಂಗ್ಲ ಭಾಷೆಯ ಶಿಕ್ಷಕರಾಗಿ ತುಕಾಲಿ ಸಂತು ಎಲ್ಲರನ್ನೂ ಎಂಟರ್‌ಟೇನ್‌ ಮಾಡಿದ್ದರು. ಈ ಎಲ್ಲಾ ಪಾಯಿಂಟ್‌ಗಳನ್ನ ಕನ್ಸಿಡರ್‌ ಮಾಡಿ ಸಿರಿ, ಸಂಗೀತಾ, ಕಾರ್ತಿಕ್, ಪವಿ ಪೂವಪ್ಪ ಮುಂತಾದವರು ತುಕಾಲಿ ಸಂತುಗೆ ‘ಉತ್ತಮ’ ಎಂದರು.

ಟಾಸ್ಕ್ ಮುಗಿದ್ಮೇಲೆ ‘ಮನರಂಜನಾತ್ಮಕ ವಿದ್ಯಾರ್ಥಿ’ ಎಂದೆನಿಸಿಕೊಂಡಿದ್ದ ತುಕಾಲಿ ಸಂತು ಈ ವಾರ ಬೆಸ್ಟ್ ಪರ್ಫಾಮೆನ್ಸ್ ಮೆಡಲ್‌ ಅನ್ನೂ ತಮ್ಮದಾಗಿಸಿಕೊಂಡರು. ತಮ್ಮ 'ಬೆಸ್ಟ್ ಪರ್ಫಾಮೆನ್ಸ್' ಮೆಡಲ್‌ ಅನ್ನು ಇತರೆ ಸ್ಪರ್ಧಿಗಳಿಗೆ ತುಕಾಲಿ ಸಂತು ಡೆಡಿಕೇಟ್ ಮಾಡಿದರು. ಇತ್ತ ಪವಿ ಪೂವಪ್ಪ ಈ ವಾರ ಅಷ್ಟಾಗಿ ಒಳ್ಳೆಯ  ಪರ್ಫಾಮೆನ್ಸ್‌ ನೀಡಲಿಲ್ಲ.

ಇದನ್ನೂ ಓದಿ: BBK 10: ಬಿಗ್‌ಬಾಸ್‌ ಮನೆಯ ವಾರದ ಲಕ್ಷುರಿ ಬಜೆಟ್ ಹೊಗೆ! ದೊಡ್ಮನೆಯ ಸದಸ್ಯರ ಮಧ್ಯೆ ಮನಸ್ತಾಪ!

ಸ್ಕೂಲ್‌ ಟಾಸ್ಕ್‌ನಲ್ಲಿ ಪವಿ ಪೂವಪ್ಪ ಕೊಂಚ ಡಲ್ ಆಗಿದ್ದರು ಎಂಬ ಕಾರಣಕ್ಕೆ ಸಿರಿ, ಸಂಗೀತಾ, ಕಾರ್ತಿಕ್, ತನಿಷಾ ‘ಕಳಪೆ ಪಟ್ಟ ಕೊಟ್ಟರು. ಇತ್ತ ತನಿಷಾ ‘ಕಳಪೆ’ ಎಂದರು ಪವಿ ಪೂವಪ್ಪ. 50 ದಿನಗಳಾದ್ಮೇಲೆ ಬಿಗ್‌ಬಾಸ್‌ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕಾಲಿಟ್ಟವರು ಪವಿ ಪೂವಪ್ಪ ಹಾಗೂ ಅವಿನಾಶ್ ಶೆಟ್ಟಿ, ಕಳೆದ ವಾರ ರಾಕ್ಷಸರು ವರ್ಸಸ್ ಗಂಧರ್ವರು ಟಾಸ್ಕ್‌ನಲ್ಲಿ ಇವರಿಬ್ಬರೂ ‘ಬೆಸ್ಟ್ ಪರ್ಫಾಮೆನ್ಸ್’ ಮೆಡಲ್ ಪಡೆದಿದ್ದರು. ಆದರೆ ಈ ವಾರ ಕಳಪೆ ಪಟ್ಟ ಪಡೆದು ಪವಿ ಪೂವಪ್ಪ ಜೈಲಿಗೆ ತೆರಳಿದ್ದಾರೆ.

ಈ ವಾರ ಪವಿ ಪೂವಪ್ಪ ಬಿಗ್‌ಬಾಸ್‌ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ಡೇಂಜರ್ ಝೋನ್‌ನಲ್ಲಿ ಮೈಕಲ್, ಸಿರಿ, ಸಂಗೀತಾ ಶೃಂಗೇರಿ, ವಿನಯ್ ಗೌಡ, ಡ್ರೋನ್ ಪ್ರತಾಪ್ ಕೂಡ ಇದ್ದಾರೆ. ಇತರರಿಗೆ ಹೋಲಿಸಿದರೆ ಪವಿ ಪೂವಪ್ಪಗೆ ಕಡಿಮೆ ವೋಟ್ಸ್ ಲಭಿಸುತ್ತಾ? ಈ ವಾರ ಪವಿ ಪೂವಪ್ಪ ಔಟ್‌ ಆಗ್ತಾರಾ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News