Bollywood Actor And Director Anumapm Kher: ಮುಂಬೈಗೆ ಹೋಗುವುದು ಸುಲಭ ಆದರೆ ಅಲ್ಲಿ ಬದುಕುವುದು ಅಷ್ಟೇ ಕಷ್ಟ. ಮಾಯಾನಗರಿಗೆ ಬಂದು ನಟನಾಗುವ ಮೂಲಕ ತಮ್ಮ ಸ್ಥಾನವನ್ನು ಸಾಧಿಸಬೇಕು ಎಂಬುದು ಲಕ್ಷಾಂತರ ಯುವಕರ ಕನಸಾಗಿದೆ.. ಆದರೆ ಈ ಹಾದಿ ಅಷ್ಟು ಸುಲಭವಲ್ಲ. ಏಕೆಂದರೆ ನೀವು ಪರದೆಯ ಮೇಲೆ ನೋಡುವುದಕ್ಕಿಂತ ವಾಸ್ತವದಲ್ಲಿ ಬಾಂಬೆಯ ಜೀವನವು ಸಾಕಷ್ಟು ಪ್ರತ್ಯೇಕವಾಗಿದೆ.
ಇಲ್ಲಿ ಅನೇಕ ಜನರು ತಮ್ಮ ಕನಸುಗಳನ್ನು ಪೊರೈಸಿಕೊಳ್ಳುತ್ತಾರೆ.. ಇನ್ನೂ ಕೆಲವರು ಧೈರ್ಯವನ್ನು ಕಳೆದುಕೊಂಡು ಬೇರೆ ಯಾವುದಾದರೂ ಗಮ್ಯಸ್ಥಾನವನ್ನು ಹುಡುಕುತ್ತಾರೆ.. ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಹಲವು ರಾತ್ರಿಗಳನ್ನು ಕಳೆದು ಕಡಲತೀರವನ್ನೇ ಮನೆ ಮಾಡಿಕೊಂಡಿರುವವರು ಇದ್ದಾರೆ.. ಹಾಗಾದರೇ ಯಾವ ನಟನ ಬಗ್ಗೆ ಹೇಳುತ್ತಿದ್ದೇವೆ ಅಂತೀರಾ ಅವರು ಬೇರೆ ಯಾರೂ ಅಲ್ಲ.. ಹಲವು ಸಂದಿಗ್ಧ ಸಂದರ್ಭಗಳಲ್ಲೂ ಧೈರ್ಯ ಕಳೆದುಕೊಳ್ಳದ.. ಮತ್ತು ಇಂದು ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತದಲ್ಲೂ ತಮ್ಮ ನಟನಾ ಕೌಶಲವನ್ನು ಪಸರಿಸುತ್ತಿರುವ.. ಎಲ್ಲರಿಗೂ ಸ್ಪೂರ್ತಿದಾಯಕವಾಗಿರುವ ಅನುಪಮ್ ಖೇರ್ ಅವರು..
ಇದನ್ನೂ ಓದಿ-2023 ರಲ್ಲಿ Netflix ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಸಿನಿಮಾ ಯಾವುದು ಗೊತ್ತಾ?
ಅನುಪಮ್ ಖೇರ್ ಅವರು 2 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು 8 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು 2004 ರಲ್ಲಿ ಪದ್ಮಶ್ರೀ ಮತ್ತು 2016 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು ಮತ್ತು ಇದೀಗ ಇವರು ಭಾರತೀಯ ಚಿತ್ರರಂಗದ ಅತ್ಯುತ್ತಮ ತಾರೆಗಳಲ್ಲಿ ಒಬ್ಬರಾಗಿದ್ದಾರೆ...
ಸಂದರ್ಶನವೊಂದರಲ್ಲಿ, "ಹೋರಾಟದ ದಿನಗಳಲ್ಲಿ ನಾನು ಸುಮಾರು ಒಂದು ತಿಂಗಳ ಕಾಲ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಮಲಗುತ್ತಿದ್ದೆ. ಕೊನೆಯ ರೈಲು ಹೋದ ನಂತರ, ಅವರು ರಾತ್ರಿ 1:40 ರವರೆಗೆ ಪ್ಲಾಟ್‌ಫಾರ್ಮ್‌ನಲ್ಲಿ ಮಲಗುತ್ತಿದ್ದರು ಮತ್ತು ಮೊದಲ ರೈಲು ಪ್ರಾರಂಭವಾದ ತಕ್ಷಣ 4:30 ಕ್ಕೆ ಎಚ್ಚರಗೊಳ್ಳುತ್ತಿದ್ದೆ.. ಚಲನಚಿತ್ರಕ್ಕೆ ಬರುವ ಮೊದಲು ಬೀಚ್‌ಗಳಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತಿದ್ದೆ.. ಎಂದು ನಟ ಅನುಪಮ್ ಖೇರ್ ಹೇಳಿದ್ದಾರೆ..
ಮುಂದುವರೆದು ಮಾತನಾಡಿದ ಅವರು.. 'ನಾವು ಬಡ ಮತ್ತು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದೆವು.. ಕುಟುಂಬದ 14 ಜನರಿಗೆ ಸಣ್ಣ ಕೋಣೆ ಇತ್ತು. ನನ್ನ ಅಜ್ಜಿ ಮತ್ತು ನನ್ನ ಚಿಕ್ಕಪ್ಪಂದಿರು ಮತ್ತು ಚಿಕ್ಕಮ್ಮ, ನನ್ನ ಸೋದರಸಂಬಂಧಿಗಳು.. ಆದರೆ ಗಳಿಸುವ ಮತ್ತು ಮನೆ ಜವಾಬ್ದಾರಿ ಹೊತ್ತಿರುವ ಏಕೈಕ ಸದಸ್ಯ ನನ್ನ ತಂದೆ.. ಅವರು 50 ರ ದಶಕದ ಕೊನೆಯಲ್ಲಿ ಮತ್ತು 60 ರ ದಶಕದ ಆರಂಭದಲ್ಲಿ ತಿಂಗಳಿಗೆ 90 ರೂಪಾಯಿಗಳನ್ನು ಗಳಿಸುತ್ತಿದ್ದರು
ಇದನ್ನೂ ಓದಿ-Virushka: ಜೋಡಿ ನಂ.1 ಕೊಹ್ಲಿ-ಅನುಷ್ಕಾ.. ಇವರ ಸುಖ ದಾಂಪತ್ಯದಿಂದ ಕಲಿಯಬೇಕಾದ ಸಂಬಂಧದ ಸಲಹೆಗಳಿವು!
ಮುಂಬೈನಲ್ಲಿನ ಜೀವನದ ಬಗ್ಗೆ ನಾನು ಒಮ್ಮೆ ನನ್ನ ಅಜ್ಜನಿಗೆ ಪತ್ರ ಬರೆದಿದ್ದೆ.. ನಂತರ ಅಜ್ಜನಿಂದ ಮರಳಿ ಬಂದ ಆ ಒಂದು ಪತ್ರವು ನನ್ನ ಜೀವನವನ್ನು ಬದಲಾಯಿಸಿತು... ನನ್ನ ಅಜ್ಜ ತಾನು ಬರೆದ ಪತ್ರದಲ್ಲಿ 'ಒದ್ದೆಯಾದ ಮನುಷ್ಯ ಮಳೆಗೆ ಹೆದರುವುದಿಲ್ಲʼ ಎಂದು ಬರೆದಿದ್ದರು.. ಹೀಗಾಗಿ ನಾನು ಧೈರ್ಯ ಕಳೆದುಕೊಳ್ಳಲಿಲ್ಲ".. ಎಂದು ತಮ್ಮ ಸಾಧನೆಯ ಜೀವನದ ಹಿಂದಿನ ಪರಿಶ್ರಮದ ಬಗ್ಗೆ ಮಾತನಾಡಿದ್ದಾರೆ..
ಅನುಪಮ್ ಖೇರ್ 1984 ರಲ್ಲಿ ಮಹೇಶ್ ಭಟ್ ನಿರ್ದೇಶನದ ಸಾರಾಂಶ್ ನಾಟಕದ ಮೂಲಕ ಹಿಂದಿ ಚಲನಚಿತ್ರಗಳಲ್ಲಿ ನಟನೆಯನ್ನು ಪ್ರಾರಂಭಿಸಿದರು. ಅದರಲ್ಲಿ ಅವರು ತಮ್ಮ ಮಗನನ್ನು ಕಳೆದುಕೊಳ್ಳುವ 65 ವರ್ಷದ ನಿವೃತ್ತ ಮಧ್ಯಮ ವರ್ಗದ ಶಿಕ್ಷಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ಈ ಪಾತ್ರವನ್ನು ನಿರ್ವಹಿಸುವಾಗ ಅವರಿಗೆ ಕೇವಲ 29 ವರ್ಷ. ಅಂದಿನಿಂದ, ನಟ 500 ಕ್ಕೂ ಹೆಚ್ಚು ಚಲನಚಿತ್ರಗಳ ಭಾಗವಾಗಿದ್ದಾರೆ. ಅವರು ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಕಳೆದ ವರ್ಷವೇ ಅವರು ಕಾರ್ತಿಕೇಯ 2 ರಲ್ಲಿ ಕಾಣಿಸಿಕೊಂಡಿದ್ದರು..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ