Virushka: ಜೋಡಿ ನಂ.1 ಕೊಹ್ಲಿ-ಅನುಷ್ಕಾ.. ಇವರ ಸುಖ ದಾಂಪತ್ಯದಿಂದ ಕಲಿಯಬೇಕಾದ ಸಂಬಂಧದ ಸಲಹೆಗಳಿವು!

Virat-Anushka: ಉತ್ತಮ ಸಂಬಂಧವನ್ನು ಹೊಂದಲು ವಿರುಷ್ಕಾ ಜೋಡಿಯಿಂದ ಕಲಿಯಬೇಕಾದ ಅಮೂಲ್ಯವಾದ ಸಲಹೆಗಳು ಯಾವುವು ಎಂಬುದನ್ನು ಇದೀಗ ತಿಳಿಯೋಣ   

Written by - Savita M B | Last Updated : Dec 16, 2023, 12:08 PM IST
  • ಇತ್ತೀಚಿನ ದಿನಗಳಲ್ಲಿ ವಿವಾಹ ಬಂಧಗಳು ದುರ್ಬಲವಾಗುತ್ತಿವೆ.
  • ಆದರೆ ಕೆಲವು ಸೆಲೆಬ್ರಿಟಿ ಜೋಡಿಗಳು ತಮ್ಮ ಪರಸ್ಪರ ದಾಂಪತ್ಯ ಜೀವನದಿಂದ ಎಲ್ಲರಿಗೂ ಮಾದರಿಯಾಗುತ್ತಿದ್ದಾರೆ
  • ಈ ಪಟ್ಟಿಯಲ್ಲಿ ಹೇಳಲೇಬೇಕಾದ ಸೆಲೆಬ್ರಿಟಿ ಜೋಡಿ ಎಂದರೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ
Virushka: ಜೋಡಿ ನಂ.1 ಕೊಹ್ಲಿ-ಅನುಷ್ಕಾ.. ಇವರ ಸುಖ ದಾಂಪತ್ಯದಿಂದ ಕಲಿಯಬೇಕಾದ ಸಂಬಂಧದ ಸಲಹೆಗಳಿವು!  title=

Virushka: ಇತ್ತೀಚಿನ ದಿನಗಳಲ್ಲಿ ವಿವಾಹ ಬಂಧಗಳು ದುರ್ಬಲವಾಗುತ್ತಿವೆ.. ನಿತ್ಯವೂ ಹೆಚ್ಚುತ್ತಿರುವ ವಿಚ್ಛೇದನ ಪ್ರಮಾಣ ಇದಕ್ಕೊಂದು ದೊಡ್ಡ ಉದಾಹರಣೆ... ಆದರೆ ಕೆಲವು ಸೆಲೆಬ್ರಿಟಿ ಜೋಡಿಗಳು ತಮ್ಮ ಪರಸ್ಪರ ದಾಂಪತ್ಯ ಜೀವನದಿಂದ ಎಲ್ಲರಿಗೂ ಮಾದರಿಯಾಗುತ್ತಿದ್ದಾರೆ. ಈ ಪಟ್ಟಿಯಲ್ಲಿ ಹೇಳಲೇಬೇಕಾದ ಸೆಲೆಬ್ರಿಟಿ ಜೋಡಿ ಎಂದರೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ. ಅಭಿಮಾನಿಗಳು ಈ ಜೋಡಿಯನ್ನು 'ವಿರುಷ್ಕಾ' ಎಂದು ಕರೆಯುತ್ತಾರೆ. ಇವರು 11 ಡಿಸೆಂಬರ್ 2017 ರಂದು ಇಟಲಿಯಲ್ಲಿ ವಿವಾಹವಾದರು. 

ಇವರಿಬ್ಬರು ಡೌನ್ ಟು ಅರ್ಥ್ ಸೆಲೆಬ್ರಿಟಿ ಜೋಡಿಗಳಲ್ಲಿ ಒಬ್ಬರು. ಇತ್ತೀಚೆಗೆ ಈ ಜೋಡಿ ತಮ್ಮ ಆರನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ.. ಹಾಗಾದರೆ ಸಂಬಂಧವನ್ನು ಸಂದರವಾಗಿಸಲು ವಿರುಷ್ಕಾ ಜೋಡಿಯಿಂದ ಕಲಿಯಬೇಕಾದ ಅಮೂಲ್ಯವಾದ ಸಲಹೆಗಳು ಯಾವುವು ಎಂಬುದನ್ನು ನೋಡೋಣ: 

ಇದನ್ನೂ ಓದಿ-“ನನಗೆ ‘ಅದು’ ಬೇಕು… ಆದ್ರೆ ನನ್ನ ಗಂಡ ಸಹಕರಿಸುತ್ತಿಲ್ಲ…”-ಪುಷ್ಪಾ ನಟಿ ಅನಸೂಯ ಬೇಸರ

* ಪ್ರೀತಿ: ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಶ್ವದ ಮುದ್ದಾದ ಜೋಡಿ... ಇಬ್ಬರೂ ಈವೆಂಟ್‌ಗಳು, ಕ್ರಿಕೆಟ್ ಪಂದ್ಯಗಳು ಮತ್ತು ಪಾರ್ಟಿಗಳಲ್ಲಿ ಸ್ಟೈಲಿಶ್ ಆಗಿ ಕಾಣುತ್ತಾರೆ. ಅವರ ಫ್ಯಾಶನ್ ಸೆನ್ಸ್ ಮಾತ್ರವಲ್ಲದೆ ಅವರು ಒಬ್ಬರಿಗೊಬ್ಬರು ತುಂಬಾ ಕಾಳಜಿ ವಹಿಸುತ್ತಾರೆ. ವಿರಾಟ್ ಅವರ ನೋಟ ಮತ್ತು ನಡೆಯಲ್ಲಿ ಅವರ ಪ್ರೀತಿಯನ್ನು ಕಾಣಬಹುದು. 

* ಎಲ್ಲ ವಿಷಯಗಳಲ್ಲೂ ಒಬ್ಬರಿಗೊಬ್ಬರ ಬೆಂಬಲ: ಅನುಷ್ಕಾ ಶರ್ಮಾ ಒಮ್ಮೆ ವಿರಾಟ್ ಕೊಹ್ಲಿ T-20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದಾಗ ಸಾಕಷ್ಟು ನಕಾರಾತ್ಮಕ ಕಾಮೆಂಟ್‌ಗಳನ್ನು ಎದುರಿಸಿದ್ದರು. ವಿರಾಟ್ ಆಟದಲ್ಲಿ ಅನುಷ್ಕಾ ತನ್ನ ಗಮನವನ್ನು ಬೇರೆಡೆಗೆ ಸೆಳೆದಿದ್ದಾರೆ ಎಂದು ಕೆಲವರು ಆರೋಪಿಸಿದರು. ಆದರೆ ವಿರಾಟ್ ಕೊಹ್ಲಿ ಅನುಷ್ಕಾ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಅನಗತ್ಯ ಟೀಕೆಗಳನ್ನು ಇಷ್ಟಪಡುವುದಿಲ್ಲ ಮತ್ತು ವೈಯಕ್ತಿಕ ಜೀವನವು ಖಾಸಗಿಯಾಗಿರಬೇಕೆಂದು ಅವರು ಬಯಸುತ್ತಾರೆ. ಈ ನಿಟ್ಟಿನಲ್ಲಿ ಅನುಷ್ಕಾಗೆ ಬೆಂಬಲವಾಗಿ ಬಲವಾದ ನಿಲುವು ತಳೆದಿರುವ ಕೊಹ್ಲಿಯನ್ನು ಹಲವರು ಹೊಗಳಿದ್ದಾರೆ.

ಇದನ್ನೂ ಓದಿ-ಸಿಲ್ಕ್ ಸ್ಮಿತಾ ಮೈಯನ್ನು ಸಿಗರೇಟ್ ನಿಂದ ಸುಡುತ್ತಿದ್ದ ಖ್ಯಾತ ನಟ ಯಾರು?

* ಬಲವಾದ ಸಂಬಂಧ: ಈ ವರ್ಷದ ಮಹಿಳಾ ದಿನದಂದು, ವಿರಾಟ್ ತನ್ನ ಜೀವನದಲ್ಲಿ ಇಬ್ಬರು ಪ್ರಮುಖ ಮಹಿಳೆಯರು ತಮ್ಮ ತಾಯಿ ಮತ್ತು ಅನುಷ್ಕಾ ಎಂದು ಹೇಳಿದ್ದರು. ಇಬ್ಬರೂ ಒಟ್ಟಿಗೆ ಇರುವ ಚಿತ್ರಗಳನ್ನು ಪೋಸ್ಟ್ ಕೂಡಾ ಮಾಡಿದ್ದರು.. 

* ಧನಾತ್ಮಕ ಪ್ರಭಾವ: ಸಂದರ್ಶನವೊಂದರಲ್ಲಿ, ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಅವರ ಜೀವನದ ಮೇಲೆ ಬೀರಿದ ಪ್ರಭಾವವನ್ನು ವ್ಯಕ್ತಪಡಿಸಿದ್ದಾರೆ. ನಿರ್ಣಾಯಕ ಸಮಯದಲ್ಲಿ ಅವಳ ಪ್ರೇರಣೆ ಮತ್ತು ಬೆಂಬಲವು ನನ್ನನ್ನು ಮುಂದುವರಿಸಿದೆ ಎಂದಿದ್ದರು... ಅವಳು ತನ್ನ ವೈಯಕ್ತಿಕ ಮತ್ತು ವೃತ್ತಿಪರ ಪ್ರಯಾಣದ ಮೂಲಾಧಾರ ಎಂದು ವಿರಾಟ್‌ ಹೇಳಿದ್ದರು.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News