ʻಆ ಹುಡುಗಿ ನನ್ನ ಖಾಸಗಿ ಅಂಗ ಮುಟ್ಟಿ...ʼ ಖ್ಯಾತ ನಟಿಗೆ ಯುವತಿಯಿಂದಲೇ ದೌರ್ಜನ್ಯ !

Actress Sanjeeda Shaikh: ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ಆರೋಪಗಳು ಆಗಾಗ್ಗೆ ಕೇಳುತ್ತಲೇ ಇರುತ್ತವೆ. ಇದೀಗ  ಬಾಲಿವುಡ್ ನಟಿಯೊಬ್ಬರು ತಾವು ಯುವತಿಯಿಂದ ದೌರ್ಜನ್ಯ ಅನುಭವಿಸಿದ ವಿಚಾರವನ್ನು ಬಿಟ್ಟಿಟ್ಟಿದ್ದಾರೆ. 

Written by - Chetana Devarmani | Last Updated : Jun 3, 2024, 11:40 AM IST
  • ಹೀರಾಮಂಡಿ ನಟಿ ಸಂಜೀದಾ
  • ʻಆ ಹುಡುಗಿ ನನ್ನ ಖಾಸಗಿ ಅಂಗ ಮುಟ್ಟಿದಳುʼ
  • ಯುವತಿಯಿಂದಲೇ ದೌರ್ಜನ್ಯಕ್ಕೊಳಗಾದ ನಟಿ
ʻಆ ಹುಡುಗಿ ನನ್ನ ಖಾಸಗಿ ಅಂಗ ಮುಟ್ಟಿ...ʼ ಖ್ಯಾತ ನಟಿಗೆ ಯುವತಿಯಿಂದಲೇ ದೌರ್ಜನ್ಯ !  title=
ನಟಿ ಸಂಜೀದಾ

Actress Tortured By a Lady in Night Club: ಸಂಜಯ್ ಲೀಲಾ ಬನ್ಸಾಲಿಯವರ OTT ಸರಣಿ ಹಿರಾಮಂಡಿ: ಡೈಮಂಡ್ ಬಜಾರ್ ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆಯನ್ನು ಗಳಿಸಿತು. ಈ ಸರಣಿಯಲ್ಲಿ ಮನೀಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ ಅವರಂತಹ ಪ್ರತಿಭಾವಂತ ನಟಿಯರು ಅಭಿನಯಿಸಿದ್ದಾರೆ. ಇವರೆಲ್ಲರ ನಡುವೆ ನಟಿ ಸಂಜೀದಾ ತಮ್ಮ ನಟನೆಯ ಮೂಲಕ ವಿಶೇಷ ಪ್ರಭಾವ ಬೀರಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ, ಸಂಜೀದಾ ತಮಗಾದ ಆಘಾತಕಾರಿ ಅನುಭವವನ್ನು ಬಹಿರಂಗಪಡಿಸಿದರು. ಯುವತಿಯೊಬ್ಬಳು ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆಯನ್ನು ನೆನೆದಿದ್ದಾರೆ. ನಿಮ್ಮ ಜೀವನದಲ್ಲಿ ಯಾವುದೇ ಮುಜುಗರದ ಘಟನೆಗಳು ನಡೆದಿವೆಯೇ ಎಂದು ಅವರನ್ನು ಪ್ರಶ್ನಿಸಲಾಯಿತು. 

ಇದನ್ನೂ ಓದಿ: ನೀತಾ ಅಂಬಾನಿಗೆ 60 ವರ್ಷವಾದ್ರೂ ದಂತದ ಬೊಂಬೆಯಂತೆ ಕಾಣಲು ಕಾರಣ ಪ್ರತೀ ದಿನ ಕುಡಿಯುವ ಈ ಜ್ಯೂಸ್​​ !

“ನನಗೆ ಆ ಘಟನೆ ನೆನಪಿದೆ. ತುಂಬಾ ಕೆಟ್ಟ ಘಟನೆ. ಆದರೆ ಇದನ್ನು ಮಾಡಿದ್ದು ಮಹಿಳೆ. ನಾನು ರಾತ್ರಿ ಕ್ಲಬ್‌ನಲ್ಲಿದ್ದೆ. ಒಬ್ಬ ಹುಡುಗಿ ನನ್ನ ಬಳಿ ಹಾದುಹೋದಳು. ಹಾಗೆ ಹೋಗುತ್ತಿರುವಾಗ.. ನನ್ನ ಎದೆಯನ್ನು ಮುಟ್ಟಿದಳು. ನನಗೆ ಇದ್ದಕ್ಕಿದ್ದಂತೆ  ಗಾಬರಿಯಾಯಿತು. ಏನೂ ಆಗಿಲ್ಲವೆಂಬಂತೆ ಹೊರಟಳು. ನಾನು ಹಿಂತಿರುಗಿ ನೋಡಿದೆ” ಎಂದು ಸಂಜೀದಾ ಹೇಳಿದರು.

“ಹುಡುಗರು ಇಂತಹ ಕೆಲಸಗಳನ್ನು ಮಾಡುತ್ತಾರೆ ಎಂದು ನಾವು ಕೇಳುತ್ತೇವೆ. ಆದರೆ ಕೆಲವು ಹುಡುಗಿಯರು ಸಹ ಕಡಿಮೆ ಇಲ್ಲ. ಅವರೂ ಇಂತಹ ಕೆಟ್ಟ ವರ್ತನೆ ತೋರುತ್ತಾರೆ. ಯಾರೇ ಆಗಲಿ ಈ ಥರ ಮಾಡಿದ್ದು ತಪ್ಪು. ಹುಡುಗನಾಗಲಿ, ಹುಡುಗಿಯಾಗಲಿ ಅದು ತಪ್ಪು. ಮಹಿಳೆಯರು ತಪ್ಪು ಮಾಡಿದರೂ ಪೊಲೀಸರಿಗೆ ದೂರು ನೀಡಬೇಕು. ಇಂತಹ ಕಿರುಕುಳ ಹೇಳತೀರದು” ಎಂದು ಸಂಜೀದಾ ಹೇಳಿದರು.

ಇದನ್ನೂ ಓದಿ: ಈಕೆ ಅಲ್ಲು ಅರ್ಜುನ್ ಎರಡನೇ ಪತ್ನಿಯೇ? ಟ್ರೆಂಡ್ ಆಗ್ತಿರುವ ಈ ಬೆಡಗಿ ಯಾರು ಗೊತ್ತಾಯ್ತಾ!!

ಹಿರಾಮಂಡಿಗಿಂತ ಮೊದಲು.. ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ವೈಮಾನಿಕ ಆಕ್ಷನ್ ಚಿತ್ರ ಫೈಟರ್‌ನಲ್ಲಿ 39 ವರ್ಷದ ಸಂಜೀದಾ ಸಚಿ ಗಿಲ್ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರ ವಿಶ್ವಾದ್ಯಂತ 300 ಕೋಟಿ ಕಲೆಕ್ಷನ್ ಮಾಡಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರವು 2024 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಬಾಲಿವುಡ್ ಚಿತ್ರವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News