Renukaswamy murder case: ದರ್ಶನ್‌ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ, 17 ಆರೋಪಿಗಳು.. 231 ಸಾಕ್ಷಿ.. 3991 ಪುಟಗಳಲ್ಲಿ ಇದೆ ಈ ಎಲ್ಲ ಅಂಶ !

Charge sheet filed against Darshan: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು 3991 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 

Written by - Chetana Devarmani | Last Updated : Sep 4, 2024, 11:35 AM IST
    • ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣ
    • 3991 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿರುವ ಪೊಲೀಸರು
    • ದರ್ಶನ್‌ ಹಾಗೂ ಸಹಚರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ
Renukaswamy murder case: ದರ್ಶನ್‌ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ, 17 ಆರೋಪಿಗಳು.. 231 ಸಾಕ್ಷಿ.. 3991 ಪುಟಗಳಲ್ಲಿ ಇದೆ ಈ ಎಲ್ಲ ಅಂಶ !  title=

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಹಾಗೂ ಸಹಚರರ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. 3991 ಪುಟಗಳ ಚಾರ್ಜ್‌ ಶೀಟ್‌ ಸಲ್ಲಿಸಲಾಗಿದೆ. ಸೆಪ್ಟೆಂಬರ್ 4 ರ ಬೆಳಿಗ್ಗೆ ಬೆಂಗಳೂರಿನ 24ನೇ ಎಸಿಎಂಎಂ ಕೋಟ್‌ನಲ್ಲಿ ಪೊಲೀಸರು ಚಾರ್ಜ್‌ ಶೀಟ್‌ ಸಲ್ಲಿಕೆ ಮಾಡಿದ್ದಾರೆ.

ಈ ಕೊಲೆ ಪ್ರಕರಣದ FIR ನಲ್ಲಿ ಪವಿತ್ರಾ ಗೌಡ A1 ಮತ್ತು ದರ್ಶನ್‌ A2 ಆಗಿದ್ದರು. ಅನೇಕರು ಇದು ಬದಲಾಗಬಹುದೆಂದು ಭಾವಿಸಿದ್ದರು. ಆದರೆ ಚಾರ್ಜ್‌ ಶೀಟ್‌ ನಲ್ಲಿಯೂ ಪವಿತ್ರಾ ಗೌಡ A1 ಮತ್ತು ದರ್ಶನ್‌ A2  ಎಂದೇ ದಾಖಲಿಸಿದ್ದಾರೆ. ಎಸಿಪಿ ಚಂದನ್​​ ಕುಮಾರ್ ಹಾಗೂ ತನಿಖಾ ತಂಡ ಈ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ. 

ಇದನ್ನೂ ಓದಿ: ಹಳೆ ಮುನಿಸು ಮರೆತು ದರ್ಶನ್‌ಗೆ ಧೈರ್ಯ ಹೇಳ್ತಾರಾ ‘ಮಾಣಿಕ್ಯ’..? ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ ಭಯಂಕರ ಚರ್ಚೆ..!

ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 17 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯದ ಮುಂದೆ ಪೊಲೀಸರು ಇಟ್ಟಿದ್ದಾರೆ. ಮೂವರು ಪ್ರತ್ಯಕ್ಷ ಸಾಕ್ಷಿದಾರರು, ಎಫ್ಎಸ್ಎಲ್ ಮತ್ತು ಸಿಎಫ್ಎಸ್ ನ 8 ವರದಿಗಳು, 27 ಜನರ 164 ಹೇಳಿಕೆ, 8 ಇತರೆ ಸರ್ಕಾರಿ ಅಧಿಕಾರಿಗಳ ಸಾಕ್ಷಿ, 56 ಜನ ಪೊಲೀಸರು, 59 ಪಂಚರ ಸಮಕ್ಷಮದಲ್ಲಿ ಮಹಜರು ಸೇರಿ ಈ ಪ್ರಕರಣದಲ್ಲಿ ಒಟ್ಟು 231 ಸಾಕ್ಷಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. 

ಸಿಆರ್‌ಪಿಸಿ 173(8) ಅಡಿಯಲ್ಲಿ ಪ್ರಿಲಿಮಿನರಿ ಚಾರ್ಜ್‌ ಶೀಡ್ ಸಲ್ಲಿಕೆ ಮಾಡಲಾಗಿದ್ದು, 
ಕೊಲೆ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಈ ಪ್ರಕರಣದಲ್ಲಿ ವಿಶೇಷ ಕೋರ್ಟ್‌ಗಾಗಿ ಪೊಲೀಸರು ಸರ್ಕಾರದ ಎದುರು ಮನವಿ ಮಾಡಿದ್ದಾರೆ. 

ಇದನ್ನೂ ಓದಿ: ʼದರ್ಶನ್ ತುಂಬಾ ಒಳ್ಳೆಯವರು.. ದೇವರು ಅವರನ್ನು ಕೈ ಬಿಡೋದಿಲ್ಲʼ-ನಟಿ ಮಾಲಾಶ್ರೀ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News