Choo Mantar: ಹಾರರ್‌ ಜಾನರ್‌ ಛೂ ಮಂತರ್‌ಗೆ ಮುಹೂರ್ತ ಫಿಕ್ಸ್‌!

Choo Mantar Update: ಚಂದನವನದ ಹಾಸ್ಯನಟ ಶರಣ್‌ ಅಭಿನಯದ ಹಾರರ್‌ ಜಾನರ್‌ ʻಛೂ ಮಂತರ್‌ʼ ಸಿನಿಮಾದ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ಶೀಘ್ರದಲ್ಲೇ ಈ ಚಿತ್ರದ ಟ್ರೇಲರ್‌ ಕೂಡ ಬಿಡುಗಡೆಯಾಗಲಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Apr 17, 2024, 11:27 AM IST
  • ಇನ್ನೂ ʻಛೂ ಮಂತರ್‌ʼ ಚಿತ್ರದ ಟ್ರೇಲರ್‌ ಇದೇ ಏಪ್ರಿಲ್‌ ಏಪ್ರಿಲ್ 19 ಶುಕ್ರವಾರದಂದು ಆನಂದ್‌ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ರಿಲೀಸ್‌ ಆಗಲಿದೆ.
  • ʻಛೂ ಮಂತರ್‌ʼ ಇದೊಂದು ಹಾರರ್‌ ಜಾನರ್‌ ಚಿತ್ರವಾಗಿದ್ದು, ಇದು ಬೇರೆ ಹಾರರ್‌ ಸಿನಿಮಾಗಳಿಗಿಂತ ವಿಭಿನ್ನವಾಗಿದೆ.
  • ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ನಿರ್ಮಿಸಿರುವ ʻಛೂ ಮಂತರ್‌ʼ ಸಿನಿಮಾದ ದೃಶ್ಯಗಳನ್ನು ಛಾಯಾಗ್ರಹಕ ಅನುಪ್ ಕಟ್ಟುಕರನ್ ಸೆರೆಹಿಡಿದಿದ್ದಾರೆ.
Choo Mantar: ಹಾರರ್‌ ಜಾನರ್‌ ಛೂ ಮಂತರ್‌ಗೆ ಮುಹೂರ್ತ ಫಿಕ್ಸ್‌! title=

Choo Mantar Release Date: ಸ್ಯಾಂಡಲ್‌ವುಡ್‌ ಹಾಸ್ಯನಟ ಶರಣ್‌ ಅಭಿನಯದ ʻಛೂ ಮಂತರ್‌ʼ ಸಿನಿಮಾದ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ಕರ್ವ ಚಿತ್ರದ ಖ್ಯಾತ ಡೈರೆಕ್ಟರ್‌  ನವನೀತ್ ನಿರ್ದೇಶನದ ಹಾಗೂ ನಟ ಶರಣ್‌ ಕಾಂಬಿನೇಷನ್‌ನ ಈ ಚಿತ್ರದ ಇದೇ ಮೇ 10 ರಂದು ರಾಜ್ಯಾದ್ಯಂತ ಬೆಳ್ಳಿತೆರೆಯ ಮೇಲೆ ಅಬ್ಬರಿಸಲಿದೆ. ಈಗಾಗಲೇ ಈ ಸಿನಿಮಾದ ಟೀಸರ್‌ ರಿಲೀಸ್‌ ಆಗಿ ಮನೆಮಾತಾಗಿದೆ. 

ಇನ್ನೂ ʻಛೂ ಮಂತರ್‌ʼ ಚಿತ್ರದ ಟ್ರೇಲರ್‌ ಇದೇ ಏಪ್ರಿಲ್‌ ಏಪ್ರಿಲ್ 19 ಶುಕ್ರವಾರದಂದು ಆನಂದ್‌ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ರಿಲೀಸ್‌ ಆಗಲಿದ್ದು, ಇನ್ನೂ ಈ ಸಿನಿಮಾ ಮುಂದಿನ ತಿಂಗಳು 10 ಶುಕ್ರವಾರದಂದು ಬೆಳ್ಳಿತೆರೆ ಮೇಲೆ ರಾರಾಜಿಸಲು ಸಜ್ಜಾಗುತ್ತಿದೆ. ಈ ಚಿತ್ರದಲ್ಲಿ ನಟ ಶರಣ್‌ ಪಾತ್ರ ಇದಕ್ಕೂ ಮುಂಚೆ ಮಾಡಿರುವ ಸಿನಿಮಾಗಳಿಗಿಂತ ಬೇರೆ ರೀತಿಯಲ್ಲಿ ವಿಭಿನ್ನವಾಗಿದೆ.

ಇದನ್ನೂ ಓದಿ: Uttarakaanda: ಉತ್ತರಕಾಂಡಕ್ಕೆ ಸ್ಯಾಂಡಲ್‌ವುಡ್‌ ಬೋಲ್ಡ್‌ ಬ್ಯೂಟಿ ಎಂಟೀ:‌ ಚೈತ್ರಾ ಆಚಾರ್ ನಯಾ ಲುಕ್‌ ರಿವೀಲ್!

ʻಛೂ ಮಂತರ್‌ʼ ಇದೊಂದು ಹಾರರ್‌ ಜಾನರ್‌ ಚಿತ್ರವಾಗಿದ್ದು, ಇದು ಬೇರೆ ಹಾರರ್‌ ಸಿನಿಮಾಗಳಿಗಿಂತ ವಿಭಿನ್ನವಾಗಿದೆ. ಈ ಚಿತ್ರದ ಮೇಕಿಂಗ್‌ ವಿಡಿಯೋ ನೋಡಿದರೇ  ಹಾಲಿವುಡ್ ಸಿನಿಮಾ ನೋಡಿದ ಅನುಭವ ಭಾಸವಾಗುತ್ತದೆ. ಈ ಚಿತ್ರದಲ್ಲಿ ನಟ ಶರಣ್‌ ಜೊತೆಗ ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ,  ಪ್ರಭು ಮುಂಡ್ಕರ್ , ಚಿಕ್ಕಣ್ಣ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ನಿರ್ಮಿಸಿರುವ ʻಛೂ ಮಂತರ್‌ʼ ಸಿನಿಮಾದ  ದೃಶ್ಯಗಳನ್ನು ಛಾಯಾಗ್ರಹಕ ಅನುಪ್ ಕಟ್ಟುಕರನ್ ಸೆರೆಹಿಡಿದಿದ್ದಾರೆ. ಹಾಗೆಯೇ ಈ ಚಿತ್ರದ ಹಾಡುಗಳಿಗೆ ಮ್ಯೂಸಿಕ್‌ ಕಂಪೋಸರ್‌ ಹಾಗೂ ರಾಪರ್‌ ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಮಾಡಿದರೇ, ಅವಿನಾಶ್ ಬಸುತ್ಕರ್ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News