ಒಂದು ಕಾಲದಲ್ಲಿ ಎಂಎಸ್ ಧೋನಿ ವಿರುದ್ಧ ಪಂದ್ಯ ಆಡಿದ್ದ 37 ವರ್ಷದ ಈ ಖ್ಯಾತ ಗಾಯಕ-ನಟ ಕ್ರಿಕೆಟ್‌ ತ್ಯಜಿಸಿದ್ದೇಕೆ?

Harrdy Sandhu: ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಸಲೀಲ್ ಅಂಕೋಲಾ ಮತ್ತು ಸುನಿಲ್ ಗವಾಸ್ಕರ್ ಸೇರಿದಂತೆ ಅನೇಕ ಕ್ರಿಕೆಟಿಗರು ನಂತರ ನಟರಾದರು. ಹಾಗೆಯೇ ಸದ್ಯ ಸಿಂಗರ್ ಆಗಿರುವ ಮತ್ತೊಬ್ಬ ಕ್ರಿಕೆಟಿಗನ ಬಗ್ಗೆ ತಿಳಿಯೋಣ..  

Written by - Savita M B | Last Updated : Dec 5, 2023, 04:00 PM IST
  • ಹಾರ್ಡಿ ಸಂಧು ಭಾರತೀಯ ಗಾಯಕ ಮಾತ್ರವಲ್ಲದೆ ನಟ ಮತ್ತು ಮಾಜಿ ಕ್ರಿಕೆಟಿಗರೂ ಹೌದು
  • ಹಾಗಾದರೆ ಹಾರ್ಡಿ ಸಂಧು ಕ್ರಿಕೆಟ್ ಬಿಟ್ಟು ಹೀರೋ ಆಗಲು ಕಾರಣವೇನು?
  • ಸದ್ಯ ಪಂಜಾಬಿ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿರುವ ಹಾರ್ಡಿ ಸಂಧು
ಒಂದು ಕಾಲದಲ್ಲಿ ಎಂಎಸ್ ಧೋನಿ ವಿರುದ್ಧ ಪಂದ್ಯ ಆಡಿದ್ದ 37 ವರ್ಷದ ಈ ಖ್ಯಾತ ಗಾಯಕ-ನಟ ಕ್ರಿಕೆಟ್‌ ತ್ಯಜಿಸಿದ್ದೇಕೆ? title=

Harrdy Sandhu life: ಹಾರ್ಡಿ ಸಂಧು ಭಾರತೀಯ ಗಾಯಕ ಮಾತ್ರವಲ್ಲದೆ ನಟ ಮತ್ತು ಮಾಜಿ ಕ್ರಿಕೆಟಿಗರೂ ಹೌದು. ಶಿಖರ್ ಧವನ್, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರಂತಹ ಕ್ರಿಕೆಟಿಗರೊಂದಿಗೆ ಆಡಿದ್ದಾರೆ. ಹಾಗಾದರೆ ಹಾರ್ಡಿ ಸಂಧು ಕ್ರಿಕೆಟ್ ಬಿಟ್ಟು ಹೀರೋ ಆಗಲು ಕಾರಣವೇನು?

ಸದ್ಯ ಪಂಜಾಬಿ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿರುವ ಹಾರ್ಡಿ ಸಂಧು ಅವರು ಮೊದಲು ಹಾಡಿದ್ದು ಪಾರ್ಟಿ ಸಾಂಗ್..‌ ಈಗಿನ ಯುವಕ ಸಖತ್‌ ಫೇವರೆಟ್‌.. 

ಸಂಧು ಯಾರನ್ ದ ಕೆಚಪ್ (2014) ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಶ್ವೇತಾ ತಿವಾರಿ ಅವರ ಮಗಳು ಪಾಲಕ್ ತಿವಾರಿ ನಟಿಸಿದ ಬಿಜ್ಲಿ ಬಿಜ್ಲಿ ಚಿತ್ರದ ಮೂಲಕ ಸಂಧು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದರು.

ಇದನ್ನೂ ಓದಿ-ಡಂಕಿ ಟ್ರೇಲರ್‌ ಔಟ್:‌ ಸ್ನೇಹ, ಪ್ರೇಮಗಳ ಭಾವನಾತ್ಮಕ ಪಯಣದ ಝಲಕ್‌!

ಹಾರ್ಡಿ ಸಂಧು 2021 ರಲ್ಲಿ ಕಬೀರ್ ಖಾನ್ ಅವರ ಸ್ಪೋರ್ಟ್ಸ್-ಡ್ರಾಮಾ 83 ನೊಂದಿಗೆ ಹಿಂದಿ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ಇದು 1983 ರ ಕ್ರಿಕೆಟ್ ವಿಶ್ವಕಪ್ ಅನ್ನು ಆಧರಿಸಿತ್ತು.. ಅಂದಿನಿಂದ ಅವರ ಗಾಯನ ಮತ್ತು ಅವರ ನಟನೆಯನ್ನು ಜನರು ಸಹ ಇಷ್ಟಪಟ್ಟಿದ್ದಾರೆ. 

ಇನ್ನು ಇವರ ಕ್ರಿಕೆಟರ್‌ ಜೀವನದ ಬಗ್ಗೆ ನೋಡುವುದಾದರೆ ಹಾಡುವ ಮೊದಲು, ಹಾರ್ಡಿ ಸಂಧು ಅದ್ಭುತ ಕ್ರಿಕೆಟಿಗರಾಗಿದ್ದರು. ಅವರು ವೇಗದ ಬೌಲರ್ ಆಗಿ ಒಂದು ದಶಕಕ್ಕೂ ಹೆಚ್ಚು ಕಾಲ ಕ್ರಿಕೆಟ್ ಆಡಿದರು, ಆದರೆ 2007 ರಲ್ಲಿ ಗಂಭೀರವಾದ ಮೊಣಕೈ ಗಾಯದಿಂದಾಗಿ ಆಟವನ್ನು ತೊರೆಯಬೇಕಾಯಿತು. ಈ ಕಾರಣಕ್ಕಾಗಿಯೇ ಅವರು ಕ್ರೀಡೆಯಿಂದ ಗಾಯನದತ್ತ ಗಮನ ಹರಿಸಬೇಕಾಯಿತು.

ಇದನ್ನೂ ಓದಿ-Bollywood: 13 ಲಕ್ಷದ ಪರ್ಸ್, 100 ಕೋಟಿಯ ಮನೆ... ಇದು ಈ ಬಾಲಿವುಡ್ ನಟಿಯ ಲಕ್ಷುರಿ ಲೈಫ್‌!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News