'ಉಪಾಧ್ಯಕ್ಷ' ಚಿಕ್ಕಣ್ಣನ ಬಗ್ಗೆ ಡಿಬಾಸ್ ಹೇಳಿದ್ದೇನು?

ಹಾಸ್ಯ ನಟ ಚಿಕ್ಕಣ್ಣನಿಗೆ ಇಂಡಸ್ಟ್ರಿಯಲ್ಲಿ ಎಲ್ಲಾ ಸ್ಟಾರ್ ನಟರು ಸ್ನೇಹಿತರು.ಯಾರೊಂದಿಗೂ ಚಿಕ್ಕಣ್ಣನಿಗೆ ಮುನಿಸಿಲ್ಲ. ಕಿಚ್ಚ ಸುದೀಪ್, ಶಿವಣ್ಣ, ದರ್ಶನ್, ಪುನೀತ್, ರಾಕಿಂಗ್ ಸ್ಟಾರ್ ಯಶ್ ಎಲ್ಲರು ಕೂಡ ಚಿಕ್ಕಣ್ಣನ ಆಪ್ತರೇ.

Written by - YASHODHA POOJARI | Edited by - Yashaswini V | Last Updated : Jan 2, 2023, 02:27 PM IST
  • ಚಿಕ್ಕಣ್ಣನ ಉಪಾಧ್ಯಕ್ಷ ಸಿನಿಮಾ ಸೆಟ್ ಗೆ ಶಿವಣ್ಣ ಭೇಟಿ ಕೊಟ್ಟು ನಾವಿದ್ದೀವಿ ಅಂತ ಚಿಕ್ಕಣ್ಣನ ಬೆನ್ನು ತಟ್ಟಿದ್ದರು.
  • ಇದೀಗ ತುಂಬಾ ಆಪ್ತರೆನಿಸಿರೋ ಡಿ ಬಾಸ್ ದರ್ಶನ್ ಕೂಡ ನಿನ್ನ ಸಿನಿಮಾಗೆ ಏನು ಸಹಾಯ ಬೇಕೋ ಅದನ್ನ ಮಾಡಿಕೊಡುತ್ತೀನಿ ಅನ್ನೋ ಭರವಸೆ ಕೊಟ್ಟಿದ್ದಾರೆ.
  • ಇದು ಚಿಕ್ಕಣ್ಣನಿಗೆ ಆನೆಬಲ ನೀಡಿದಂತೆ ಆಗಿದೆ.
'ಉಪಾಧ್ಯಕ್ಷ' ಚಿಕ್ಕಣ್ಣನ ಬಗ್ಗೆ ಡಿಬಾಸ್ ಹೇಳಿದ್ದೇನು?  title=
Chikkanna

ಚಿಕ್ಕಣ್ಣ.. ಕನ್ನಡ ಇಂಡಸ್ಟ್ರಿಯ ಬಹುಬೇಡಿಕೆಯ ನಟ.. ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಗಳಿಸಿರೋ ಚಿಕ್ಕಣ್ಣ ಈಗ ಉಪಾಧ್ಯಕ್ಷ ಅನ್ನೋ ಸಿನಿಮಾದ ಮೂಲಕ ಹೀರೋ ಆಗಿದ್ದಾರೆ.

ಹಾಸ್ಯ ನಟ ಚಿಕ್ಕಣ್ಣನಿಗೆ ಇಂಡಸ್ಟ್ರಿಯಲ್ಲಿ ಎಲ್ಲಾ ಸ್ಟಾರ್ ನಟರು ಸ್ನೇಹಿತರು.ಯಾರೊಂದಿಗೂ ಚಿಕ್ಕಣ್ಣನಿಗೆ ಮುನಿಸಿಲ್ಲ. ಕಿಚ್ಚ ಸುದೀಪ್, ಶಿವಣ್ಣ, ದರ್ಶನ್, ಪುನೀತ್, ರಾಕಿಂಗ್ ಸ್ಟಾರ್ ಯಶ್ ಎಲ್ಲರು ಕೂಡ ಚಿಕ್ಕಣ್ಣನ ಆಪ್ತರೇ.

ಇದನ್ನೂ ಓದಿ- ಮತ್ತೆ ಮತ್ತೆ ವಿವಾದ ಮೈಮೇಲೆ ಹಾಕಿಕೊಳ್ಳೋದು ಯಾಕೆ ರಶ್ಮಿಕಾ ಮಂದಣ್ಣ?

ಚಿಕ್ಕಣ್ಣನ ಉಪಾಧ್ಯಕ್ಷ ಸಿನಿಮಾ ಸೆಟ್ ಗೆ ಶಿವಣ್ಣ ಭೇಟಿ ಕೊಟ್ಟು ನಾವಿದ್ದೀವಿ ಅಂತ ಚಿಕ್ಕಣ್ಣನ ಬೆನ್ನು ತಟ್ಟಿದ್ದರು. ಇದೀಗ ತುಂಬಾ ಆಪ್ತರೆನಿಸಿರೋ ಡಿ ಬಾಸ್ ದರ್ಶನ್ ಕೂಡ ನಿನ್ನ ಸಿನಿಮಾಗೆ ಏನು ಸಹಾಯ ಬೇಕೋ ಅದನ್ನ ಮಾಡಿಕೊಡುತ್ತೀನಿ ಅನ್ನೋ ಭರವಸೆ ಕೊಟ್ಟಿದ್ದಾರೆ. ಇದು ಚಿಕ್ಕಣ್ಣನಿಗೆ  ಆನೆಬಲ ನೀಡಿದಂತೆ ಆಗಿದೆ. 

ಇದರ ಜೊತೆ ಇಂಡಸ್ಟ್ರಿಗೆ ಕರೆತಂದ ರಾಕಿಂಗ್ ಸ್ಟಾರ್ ಯಶ್ ಕೂಡ ಚಿಕ್ಕಣ್ಣನ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಭೇಟಿಯಾಗಿ ಸಿನಿಮಾ ಬಗ್ಗೆ ಚರ್ಚಿಸಿ ಉಪಾಧ್ಯಕ್ಷ ಸಿನಿಮಾದಲ್ಲಿ ಏನು ಇರ್ಬೇಕು, ಇರಬಾರದು ಅನ್ನೋದನ್ನ ತಿಳಿ ಹೇಳಿದ್ದಾರೆ ಅನ್ನೋದನ್ನ ಜೀ ಕನ್ನಡ ನ್ಯೂಸ್ ಸಂದರ್ಶನದಲ್ಲಿ ರಿವಿಲ್ ಮಾಡಿದ್ದಾರೆ ಚಿಕ್ಕಣ್ಣ.

ಇದನ್ನೂ ಓದಿ- Bigg Boss ಶೋ ಕಿಚ್ಚನ ಜಾಗದಲ್ಲಿ ಬೇರೇ ಯಾರನ್ನೂ ಊಹೆ ಕೂಡ ಮಾಡಲು ಸಾಧ್ಯವಿಲ್ಲ.. ಯಾಕೆ ಅಂತೀರಾ?

ಉಪಾಧ್ಯಕ್ಷ ಸಿನಿಮಾದಲ್ಲಿ ನಾಯಕಿಯಾಗಿ ‘ಹಿಟ್ಲರ್ ಕಲ್ಯಾಣ’ ಖ್ಯಾತಿಯ ಮಲೈಕಾ ವಸುಪಾಲ್‌, ಸಾಧುಕೋಕಿಲ, ರವಿಶಂಕರ್, ವೀಣಾಸುಂದರ್ , ಧರ್ಮಣ್ಣ ಮುಂತಾದ ತಾರಾಬಳಗವಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ ಚಿತ್ರಕ್ಕೆ ಶೇಖರ್ ಚಂದ್ರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ. ಉಮಾಪತಿ ಫಿಲಂಸ್ ಅರ್ಪಿಸುವ, ಡಿ.ಎನ್ ಸಿನಿಮಾಸ್ ಲಾಂಛನದಲ್ಲಿ ಸ್ಮಿತಾ ಉಮಾಪತಿ ಹಾಗೂ ನಿರ್ಮಲ ಶ್ರೀನಿವಾಸ್ ನಿರ್ಮಾಣ ಮಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News