Hrithik Roshan:ಯುವ ನಟಿಯೊಂದಿಗೆ ಹೃತಿಕ್​ ರೋಷನ್​ ಡೇಟಿಂಗ್? ಕೈ-ಕೈ ಹಿಡಿದು ಓಡಾಡುವ ದೃಶ್ಯ ವೈರಲ್

Hrithik Roshan: ಯುವ ನಟಿಯೊಂದಿಗೆ ಹೃತಿಕ್​ ರೋಷನ್​ ಡೇಟಿಂಗ್ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದೆ. ಅದಕ್ಕೆ ಕಾರಣ ಈ ದೃಶ್ಯ.   

Edited by - Chetana Devarmani | Last Updated : Jan 30, 2022, 04:15 PM IST
  • ಬಾಲಿವುಡ್ ಗ್ರೀಕ್ ಗಾಡ್ ಹೃತಿಕ್ ರೋಷನ್
  • ಯುವ ನಟಿಯೊಂದಿಗೆ ಹೃತಿಕ್​ ರೋಷನ್​ ಡೇಟಿಂಗ್?
  • ಕೈ-ಕೈ ಹಿಡಿದು ಓಡಾಡುವ ದೃಶ್ಯ ವೈರಲ್
Hrithik Roshan:ಯುವ ನಟಿಯೊಂದಿಗೆ ಹೃತಿಕ್​ ರೋಷನ್​ ಡೇಟಿಂಗ್? ಕೈ-ಕೈ ಹಿಡಿದು ಓಡಾಡುವ ದೃಶ್ಯ ವೈರಲ್  title=
ಹೃತಿಕ್ ರೋಷನ್

ಬಾಲಿವುಡ್ ಗ್ರೀಕ್ ಗಾಡ್ ಹೃತಿಕ್ ರೋಷನ್ (Hrithik Roshan) ಶುಕ್ರವಾರ ರಾತ್ರಿ ಯುವತಿಯೊಬ್ಬಳ ಜೊತೆ ಓಡಾಡುತ್ತಿರುವಾಗ ಸೆರೆ ಸಿಕ್ಕಿದ್ದಾರೆ. ಮುಂಬೈನ ಖಾರ್‌ನಲ್ಲಿರುವ ಬೆಲೆಬಾಳುವ ಮಿಜು ರೆಸ್ಟೋರೆಂಟ್‌ನಿಂದ ಹೊರಬರುತ್ತಿರುವ ವೇಳೆ ಇವರ ಛಾಯಾಚಿತ್ರ (Photo) ಸೆರೆಯಾಗಿದೆ. 

ಇದನ್ನೂ ಓದಿ:  Viral Video: ‘ಕಚ್ಚಾ ಬಾದಾಮ್’ ಹಾಡು ಹಾಡಿ ಟ್ರೋಲ್ ಆದ ರಾನು ಮಂಡಲ್..!

ಹೃತಿಕ್ ಕಾರ್ಗೋ ಪ್ಯಾಂಟ್, ಬಿಳಿ ಟಿ-ಶರ್ಟ್ ಮತ್ತು ಅದರ ಮೇಲೆ ನೀಲಿ ಬಣ್ಣದ ಜಾಕೆಟ್ ಅನ್ನು ಡಿನ್ನರ್ ಔಟಿಂಗ್‌ಗೆ ಧರಿಸಿದ್ದರು. ಅವರು ತಮ್ಮ ಕೂದಲನ್ನು ಸಣ್ಣ ಪೋನಿಟೇಲ್ ಆಗಿ ಕಟ್ಟಿದ್ದರು.

 

 
 
 
 

 
 
 
 
 
 
 
 
 
 
 

A post shared by yogen shah (@yogenshah_s)

 

ರೆಸ್ಟೋರೆಂಟ್‌ನಿಂದ ಕೈ-ಕೈ ಹಿಡಿದುಕೊಂಡು ನಡೆಯುತ್ತಿದ್ದ ಇಬ್ಬರನ್ನು ಪಾಪರಾಜಿ ಸೆರೆ ಹಿಡಿದರು. ಈ ದೃಶ್ಯ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. 

ಸದ್ಯ ಇವರಿಬ್ಬರ ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿದೆ. Instagram ನಲ್ಲಿ "ಯಾರು ಅದು? ನಮಗೆ ಗೊತ್ತಿರಬೇಕು!!!" ಎಂದು ಅಭಿಮಾನಿಗಳ ಕಾಮೆಂಟ್ ಮಾಡಿದ್ದಾರೆ. "ನಿಮ್ಮ ಗೆಳತಿಯೇ?" ಎಂದು ಇನ್ನೂ ಕೆಲವರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:  ಪುನೀತ್ ಸ್ಮರಣಾರ್ಥ`ದೀಪ ನಮನ’ದ ಗೌರವ

ಹೃತಿಕ್ ಸದ್ಯ ಮೂರು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ದೀಪಿಕಾ ಪಡುಕೋಣೆ (Deepika Padukone) ಇರುವ 'ಫೈಟರ್', 'ವಿಕ್ರಮ್ ವೇದ'ದ ಹಿಂದಿ ರಿಮೇಕ್‌ನಲ್ಲಿ ಕಾರ್ಯನಿರತರಾಗಿದ್ದಾರೆ. ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ (Saif Ali Khan) ಕೂಡ ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News