ವೀಕ್ಷಿಸಿ ದೀಪ್-ವೀರ್ ವೈರಲ್ ವಿಡಿಯೋ!

ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಅವರ ಈ ವಿಡಿಯೋವನ್ನು ನೋಡಿ ನಿಮಗೂ ಹೃದಯ ತುಂಬುತ್ತದೆ.

Updated: Feb 1, 2019 , 11:09 AM IST
ವೀಕ್ಷಿಸಿ ದೀಪ್-ವೀರ್ ವೈರಲ್ ವಿಡಿಯೋ!
Pic Courtesy: Yogesh Shah

ನವದೆಹಲಿ: ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ನಂತಹ ಉತ್ಸಾಹಭರಿತ ಮತ್ತು ಮುದ್ದಾದ ಜೋಡಿ ಎಲ್ಲರನ್ನು ಆಕರ್ಷಿಸುತ್ತಿದೆ. ಗುರುವಾರ ರಾತ್ರಿ ಭೋಜನಕೂಟದಿಂದ ಹೊರ ಬಂದ ಜೋಡಿ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆ ಸಿಕ್ಕಿದೆ. ಬೆಂಗಳೂರಿನಲ್ಲಿ ನಡೆದ ದೀಪ್-ವೀರ್ ಆರತಕ್ಷತೆ ಸಂದರ್ಭದಲ್ಲಿ ರಣವೀರ್ ಸಿಂಗ್ ಪತ್ನಿ ದೀಪಿಕಾ ಅವರ ಸೀರೆ ಸರಿಪಡಿಸಿದ್ದ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು. ಇದೀಗ ಅಂತಹದ್ದೇ ಹೊಸ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಈ ವಿಡಿಯೋದಲ್ಲಿ ದೀಪಿಕಾ ಜೀನ್ಸ್ ಧರಿಸಿದ್ದಾರೆ.

ಮುಂಬೈಯ ಸೊಹೊ ಹೌಸ್ನಿಂದ ಭೋಜನದ ನಂತರ, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮಾಧ್ಯಮಗಳಿಗೆ ಫೋಟೋ ಪೋಸ್ ನೀಡಿದರು.  ಈ ಸಮಯದಲ್ಲಿ ಮಾಧ್ಯಮಗಳ ಮುಂದೆಯೇ ರಣವೀರ್ ದೀಪಿಕಾ ಅವರ ಜೀನ್ಸ್ ಅನ್ನು ಸ್ವಚ್ಛಗೊಳಿಸಿದರು.  ಈ ಸಂದರ್ಭದಲ್ಲಿ ರಣವೀರ್ ಸಿಂಗ್ ಏನು ಮಾಡಿದ್ರೂ ಅಂತ ನೀವೇ ನೋಡಿ...
 

 
 
 
 

 
 
 
 
 
 
 
 
 

@ranveersingh #ranveersingh @deepikapadukone #deepikapadukone #snapped today post #dinner date at #sohohouse in #Juhu

A post shared by yogen shah (@yogenshah_s) on