ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಈ ಖುಷಿಸುದ್ದಿಯನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ʼನಾವು ಜೀವನದ ಹೊಸ ಘಟ್ಟಕ್ಕೆ ಕಾಲಿಡುತ್ತಿದ್ದೇವೆ, ಶೀಘ್ರದಲ್ಲಿ ಬರುತ್ತಿರುವ ನಮ್ಮ ಪುಟ್ಟ ಕಂದಮ್ಮನನ್ನು ಆಶೀರ್ವಾದಿಸಿ. ಜೈ ಹನುಮಾನ್' ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಅದ್ಧೂರಿಯಾಗಿ ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ.
ಇದನ್ನೂ ಓದಿ: ಫ್ಯಾನ್ಸ್‌ಗೆ ಉಪ್ಪಿ ʼ18 ಛಾಲೆಂಜ್ʼ : ಗೆದ್ರೆ ಬಹುಮಾನ ನೀಡ್ತಾರಂತೆ ರೀಯಲ್ ಸ್ಟಾರ್
ಫೋಟೋ ಶೂಟ್‌ನಲ್ಲಿ ಕಾಫಿ, ನೀಲಿ, ಪಿಂಕ್ ಬಣ್ಣದ ಗೌನ್‌ನಲ್ಲಿ ಪ್ರೇರಣಾ ಮಿಂಚಿದ್ರೆ, ಬ್ಲ್ಯಾಕ್ ಸೂಟ್, ವೈಟ್ ಆಂಡ್ ವೈಟ್ ಲುಕ್‌ನಲ್ಲಿ ಧ್ರುವ ಕಾಣಿಸಿಕೊಂಡಿದ್ದಾರೆ. ಜೀವಿತಾ ಮತ್ತು ಆಧ್ಯಾ ರಾಜ್ ಮೇಕಪ್ ಮಾಡಿದ್ದು, ಸಾಕೇತ್ ಇವರಿಬ್ಬರ ಫೋಟೋಶೂಟ್ ಮಾಡಿದ್ದಾರೆ. ಉಡುಪುಗಳನ್ನು ಚೇತನ್ ಡಿಸೈನ್ ಮಾಡಿದ್ದಾರೆ. ವಿಡಿಯೋವನ್ನು ಕಾಂತಿ ಸ್ಟುಡಿಯೋ ಮತ್ತು ಪ್ರವೀಣ್ ಗೌಡ ಎಡಿಟ್ ಮಾಡಿದ್ದಾರೆ.
ಬಾಲ್ಯದಿಂದಲೇ ಸ್ನೇಹಿತರಾಗಿದ್ದ ಧೃವ ಸರ್ಜಾ ಹಾಗೂ ಪ್ರೇರಣಾ 2019ರಲ್ಲಿ ಪೋಷಕರ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ಇನ್ನು ಕ್ಯೂಟ್ ಜೋಡಿಗೆ ಕಾಮೆಂಟ್ ಮೂಲಕ ಮೇಘನಾ ರಾಜ್ ಕಂಗ್ರಾಟ್ಸ್ ಹೇಳಿದ್ದಾರೆ. ಅಭಿಮಾನಿಗಳು ಸಹ ಅಭಿನಂದನೆಗಳನ್ನ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.