Malaika Arora: “ಸಲ್ಮಾನ್ ನನ್ನನ್ನು ರೆಡಿ ಮಾಡಿಲ್ಲ..” ಸಲ್ಲು ಹೆಸರು ಕೇಳುತ್ತಿದ್ದಂತೆ ಮಲೈಕಾ ಕೋಪದಿಂದ ಹೇಳಿದ್ದೇನು ಗೊತ್ತಾ..!!

Malaika Arora angry on Salman Khan: ಮಲೈಕಾ ಅರೋರ ಅವರ ವೃತ್ತಿಜೀವನದ ಹಿಂದೆ ಸಲ್ಮಾನ್ ಖಾನ್ ಮೂವೀಸ್ ಇದೆ ಎಂದು ಜನರು ಸಾಮಾನ್ಯವಾಗಿ ಹೇಳುತ್ತಿದ್ದರು ಮತ್ತು ಇದು ನಿಜವೇ ಎಂದು ಕೇಳುತ್ತಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದಾಗ ಕೋಪಗೊಂಡ ಮಲೈಕಾ ದಿಟ್ಟ ಉತ್ತರ ನೀಡಿದ್ದಾರೆ. ಈ ಹಿಂದೆ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮಲೈಕಾ ಅರೋರಾ ಅವರನ್ನು ಗೇಲಿ ಮಾಡಿದ್ದರು.   

Written by - Bhavishya Shetty | Last Updated : Jan 28, 2023, 11:39 AM IST
    • ಮಲೈಕಾ ಅರೋರಾ ಯಾವಾಗಲೂ ತಮ್ಮ ವೈಯಕ್ತಿಕ ಜೀವನದಿಂದಲೇ ಸುದ್ದಿಯಲ್ಲಿರುತ್ತಾರೆ
    • ಅರೋರಾ ಮೊದಲು ಮದುವೆಯಾಗಿದ್ದು ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರನ್ನು
    • ಆದರೆ ಕೆಲವು ಕಾರಣಗಳಿಂದ ಇಬ್ಬರೂ ದೂರವಾಗಲು ನಿರ್ಧರಿಸಿದರು. ಬಳಿಕ ವಿಚ್ಛೇದನ ಕೂಡ ಪಡೆದರು.
Malaika Arora: “ಸಲ್ಮಾನ್ ನನ್ನನ್ನು ರೆಡಿ ಮಾಡಿಲ್ಲ..” ಸಲ್ಲು ಹೆಸರು ಕೇಳುತ್ತಿದ್ದಂತೆ ಮಲೈಕಾ ಕೋಪದಿಂದ ಹೇಳಿದ್ದೇನು ಗೊತ್ತಾ..!!
Malaika Arora

Malaika Arora angry on Salman Khan: ಬಾಲಿವುಡ್ ನಟಿ ಮಲೈಕಾ ಅರೋರಾ ಯಾವಾಗಲೂ ತಮ್ಮ ವೈಯಕ್ತಿಕ ಜೀವನದಿಂದಲೇ ಸುದ್ದಿಯಲ್ಲಿರುತ್ತಾರೆ. ಇನ್ನು ಮಲೈಕಾ ಅರೋರಾ ಮೊದಲು ಮದುವೆಯಾಗಿದ್ದು ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರನ್ನು. ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ ಬಾಲಿವುಡ್‌ನ ಬ್ಯೂಟಿಫುಲ್ ಕಪಲ್‌ಗಳಲ್ಲಿ ಒಬ್ಬರಾಗಿದ್ದರು. ಆದರೆ ಕೆಲವು ಕಾರಣಗಳಿಂದ ಇಬ್ಬರೂ ದೂರವಾಗಲು ನಿರ್ಧರಿಸಿದರು. ಬಳಿಕ ವಿಚ್ಛೇದನ ಕೂಡ ಪಡೆದರು. ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ನಡುವಿನ ಸಂಬಂಧವು ಅರ್ಬಾಜ್ ಖಾನ್ ಮತ್ತು ಅವರ ಕುಟುಂಬದೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಸಂಪರ್ಕ ಹೊಂದಿದೆ.

ಇದನ್ನೂ ಓದಿ: ಚಳಿಗಾಲದಲ್ಲಿ ತುಳಸಿ ಚಹಾ ಸೇವನೆಯಿಂದಾಗುವ ಈ ಆರೋಗ್ಯಕರ ಲಾಭಗಳು ನಿಮಗೂ ತಿಳಿದಿರಲಿ

ಕೋಪಗೊಂಡ ಮಲೈಕಾ ಅರೋರಾ!

ಮಲೈಕಾ ಅರೋರ ಅವರ ವೃತ್ತಿಜೀವನದ ಹಿಂದೆ ಸಲ್ಮಾನ್ ಖಾನ್ ಮೂವೀಸ್ ಇದೆ ಎಂದು ಜನರು ಸಾಮಾನ್ಯವಾಗಿ ಹೇಳುತ್ತಿದ್ದರು ಮತ್ತು ಇದು ನಿಜವೇ ಎಂದು ಕೇಳುತ್ತಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದಾಗ ಕೋಪಗೊಂಡ ಮಲೈಕಾ ದಿಟ್ಟ ಉತ್ತರ ನೀಡಿದ್ದಾರೆ. ಈ ಹಿಂದೆ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮಲೈಕಾ ಅರೋರಾ ಅವರನ್ನು ಗೇಲಿ ಮಾಡಿದ್ದರು.   ಸಲ್ಮಾನ್ ಖಾನ್ ಅವರ ಕುಟುಂಬದಿಂದ ಬಂದ ಮಲೈಕಾ ಅರೋರಾ ಟಿವಿ ಶೋಗಳಲ್ಲಿ ಐಟಂ ಗರ್ಲ್ ಎಂಬ ಟ್ಯಾಗ್ ಅನ್ನು ಎಂದಿಗೂ ಪಡೆದಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ: Mission Majnu ಸಿನಿಮಾ ಬಗ್ಗೆ ಕಿಡಿಕಾರಿದ ಪಾಕಿಸ್ತಾನಿ ನಟ! ಭುಗಿಲೆದ್ದ ಅಸಮಾಧಾನ

ರಾಖಿ ಸಾವಂತ್ ಅವರು ಮಲೈಕಾ ಅರೋರಾ ಬಗ್ಗೆ ಮಾತನಾಡುವಾಗ, ಖಾನ್ ಕುಟುಂಬದೊಂದಿಗಿನ ಸಂಬಂಧದಿಂದಾಗಿ ನನಗೆ ಉದ್ಯಮದಲ್ಲಿ ಅನೇಕ ಅವಕಾಶಗಳು ಸಿಕ್ಕಿವೆ ಎಂದು ಹೇಳಿದ್ದರು. ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ಕೋಪಗೊಂಡ ಮಲೈಕಾ ಖಡಕ್ ಉತ್ತರ ನೀಡಿದ್ದಾರೆ. “ಇದು ಸಂಭವಿಸಿದ್ದರೆ, ನಾನು ಸಲ್ಮಾನ್ ಖಾನ್ ಅವರ ಪ್ರತಿ ಚಿತ್ರದಲ್ಲೂ ಐಟಂ ಸಾಂಗ್ ಮಾಡಬೇಕಿತ್ತು. ನಾನು ನನ್ನ ಶ್ರಮದಿಂದ ಬಂದಿದ್ದೇನೆ. ಸಲ್ಮಾನ್ ಖಾನ್ ನನ್ನನ್ನು ತಯಾರು ಮಾಡಿಲ್ಲ...' ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News