Dwarkish Life Story: 'ವೀರ ಸಂಕಲ್ಪ' ದಿಂದ ಬಣ್ಣದ ಲೋಕಕ್ಕೆ ಎಂಟ್ರಿ.. ಏಳುಬೀಳಿನ ನಡುವೆ ಸಾಗಿದ ʻದ್ವಾರಕೀಶ್ ಸಿನಿಜರ್ನಿʼ ಹೇಗಿತ್ತು ಗೊತ್ತೇ!

Dwarakish Death: ಸ್ಯಾಂಡಲ್‌ವುಡ್‌ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಕನ್ನಡ ಚಿತ್ರರಂಗಕ್ಕೆ ಅಪೂರ್ವ ಕೊಡುಗೆಯನ್ನೇ ಕೊಟ್ಟಿದ್ದಾರೆ. ಈ ನಟನ ಸಿನಿಪಯಣ ರೋಮಾಂಚನಕಾರಿಯಾಗಿದೆ. ಇದರ ಸಂಪೂರ್ಣ ವಿವರ ಹೀಗಿದೆ.  

Written by - Zee Kannada News Desk | Last Updated : Apr 16, 2024, 03:01 PM IST
  • ದ್ವಾರಕೀಶ್‌ ಸಿನಿಮಾಗಳಲ್ಲಿ ಅಭಿನಯಿಸಲು ಕನಸು ಕಂಡಿದ್ದರಿಂದ ತಮ್ಮ ಸೋದರಮಾವ ಹುಣಸೂರು ಕೃಷ್ಣಮೂರ್ತಿ ಅವರ ಸಹಾಯದಿಂದ ಬಣ್ಣದ ಲೋಕದ ಕಡೆಗೆ ಮುಖ ಮಾಡಿದರು.
  • ದ್ವಾರಕೀಶ್‌ ಕೇವಲ ನಟನಾಗಿ, ಹಾಸ್ಯ ಕಲಾವಿದನಾಗಿ ಮಾತ್ರ ಉಳಿಯದೆ 'ಮೇಯರ್ ಮುತ್ತಣ್ಣ' ಚಿತ್ರವನ್ನು ನಿರ್ಮಾಣ ಮಾಡಿ ಗೆಲುವನ್ನು ಬೀರಿದರು.
  • ದ್ವಾರಕೀಶ್‌ ಇಲ್ಲಿಯವರೆಗೂ 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ ಮತ್ತು 17ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.
Dwarkish Life Story: 'ವೀರ ಸಂಕಲ್ಪ' ದಿಂದ ಬಣ್ಣದ ಲೋಕಕ್ಕೆ ಎಂಟ್ರಿ.. ಏಳುಬೀಳಿನ ನಡುವೆ ಸಾಗಿದ ʻದ್ವಾರಕೀಶ್ ಸಿನಿಜರ್ನಿʼ ಹೇಗಿತ್ತು ಗೊತ್ತೇ! title=

Dwarakish Film Journey: ಚಂದನವನದ ಹಿರಿಯ ನಟ-ನಿರ್ದೇಶಕ ದ್ವಾರಕೀಶ್‌, ಶಿಕ್ಷಣವನ್ನು ಮುಗಿಸಿದ ನಂತರ ತಮ್ಮ ಸಹೋದರ ಜೊತೆಗೆ ಮೈಸೂರಿನ ಗಾಂಧೀ ಚೌಕದಲ್ಲಿ ಭಾರತ್ ಆಟೋ ಸ್ಪೇರ್ಸ್ ಎಂಬ ಅಂಗಡಿಯನ್ನು ಇಟ್ಟಿಕೊಂಡಿದ್ದರು. ಈ ನಟ ಸಿನಿಮಾಗಳಲ್ಲಿ ಅಭಿನಯಿಸಲು ಕನಸು ಕಂಡಿದ್ದರಿಂದ ತಮ್ಮ ಸೋದರಮಾವ ಹುಣಸೂರು ಕೃಷ್ಣಮೂರ್ತಿ ಅವರ ಸಹಾಯದಿಂದ ಬಣ್ಣದ ಲೋಕದ ಕಡೆಗೆ ಮುಖ ಮಾಡಿದರು. ನಟ ದ್ವಾರಕೀಶ್‌ ಸಿ.ವಿ. ಶಂಕರ್ ನಿರ್ದೇಶನದ'ವೀರಸಂಕಲ್ಪ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ  ಮೊದಲು ಹೆಜ್ಜೆಹಾಕಿದರು. 

'ವೀರಸಂಕಲ್ಪ' ಸಿನಿಮಾದ ತದನಂತರ 'ಪರೋಪಕಾರಿ','ಸತ್ಯ ಹರಿಶ್ಚಂದ್ರ', 'ಕ್ರಾಂತಿ ವೀರ', 'ಮೇಯರ್ ಮುತ್ತಣ್ಣ', 'ದೂರದ ಬೆಟ್ಟ', 'ಗಾಂಧೀನಗರ', 'ಬಾಳು ಬೆಳಗಿತು', 'ಬಂಗಾರದ ಮನುಷ್ಯ', 'ಬಹದ್ದೂರ್ ಗಂಡು' ಹೀಗೆ ಹಲವು ಸಿನಿಮಾಗಳಲ್ಲಿ ಡಾ. ರಾಜ್‌ಕುಮಾರ್ ಜೊತೆ ದ್ವಾರಕೀಶ್‌ ಬಣ್ಣ ಹಚ್ಚಿದ್ದರು. ದ್ವಾರಕೀಶ್‌ ತಮ್ಮ ನ್ಯೂನ್ಯತೆಗಳ ಮೂಲಕ ಸಿನಿರಂಗದಲ್ಲಿ ಗೆದ್ದರು. ಕೇವಲ ನಟನಾಗಿ, ಹಾಸ್ಯ ಕಲಾವಿದನಾಗಿ ಮಾತ್ರ ಉಳಿಯದೆ 'ಮೇಯರ್ ಮುತ್ತಣ್ಣ' ಚಿತ್ರವನ್ನು ನಿರ್ಮಾಣ ಮಾಡಿ ಗೆಲುವನ್ನು ಬೀರಿದರು.

ಇದನ್ನೂ ಓದಿ: Dwarakish: ಚಂದನವನದ ಪ್ರಚಂಡ ಕುಳ್ಳ ದ್ವಾರಕೀಶ್‌ ಅಚ್ಚರಿಯ ಹಿನ್ನಲೆ!

ಅಷ್ಟು ಮಾತ್ರವಲ್ಲದೇ 'ಕುಳ್ಳ ಏಜೆಂಟ್ 000' ಸಿನಿಮಾವನ್ನು ನಿರ್ಮಿಸಿ ತಾವೇ ಆ ಚಿತ್ರಕ್ಕೆ ದ್ವಾರಕೀಶ್‌ ನಾಯಕನಟರಾದರು. ಬಳಿಕ ಸಾಹಸಸಿಂಹ ವಿಷ್ಣುವರ್ಧನ್ ಜೊತೆಗೆ ದ್ವಾರಕೀಶ್‌ ಕೂಡ ನಟಿಸಿದ್ದರು. ಈ ಇಬ್ಬರು ಅದ್ಭುತ ಕಲಾವಿದರು ಸಿನಿಮಾರಂಗದಲ್ಲಿ ಆಪ್ತ ಸ್ನೇಹಿತರಾಗಿದ್ದರು. ತಮ್ಮಿಬ್ಬರ ಮಧ್ಯೆ ಸಾಕಷ್ಟು ಬಾರಿ ಮುನಿಸು, ಜಗಳ ನಡೆದಿದ್ದರೂ, ಬಹಳ ವರ್ಷಗಳ ನಂತರ 'ಆಪ್ತ ಮಿತ್ರ' ಸಿನಿಮಾದ ಮೂಲಕ ಇಬ್ಬರು ಗೆಲುವನ್ನು ಪಡೆದರು. ಈ ಚಿತ್ರದ ಮೂಲಕ ದ್ವಾರಕೀಶ್ ತಾವು ಕಳೆದುಕೊಂಡಿದ್ದ ಜೀವನವನ್ನು ಮತ್ತೆ ಪಡೆದುಕೊಂಡರು.

ದ್ವಾರಕೀಶ್ ಕನ್ನಡ ಸಿನಿಮಾಗಳನ್ನು ವಿದೇಶಗಳಲ್ಲಿ ನಿರ್ಮಿಸುವ ಕನಸು ಕಂಡಿದ್ದು, 'ಸಿಂಗಾಪುರದಲ್ಲಿ ರಾಜಾಕುಳ್ಳ' ಮತ್ತು 'ಆಫ್ರಿಕಾದಲ್ಲಿ ಶೀಲ' ಎಂಬ ಅದ್ಭುತ ಸಿನಿಮಾಗಳ ಪ್ರಯತ್ನ ಮಾಡಿದ್ದರು. ಈ ನಟ ಸೋತಾಗ ಕುಗ್ಗದೇ ಗೆದ್ದಾಗ ಹಿಗ್ಗದೇ ಚಿತ್ರರಂಗಕ್ಕೆ ಅಪೂರ್ವ ಕೊಡುಗೆಯನ್ನೇ ನೀಡಿದ್ದಾರೆ. ಇವರು ಕಿಶೋರ್ ಕುಮಾರ್ ಅಂತಹ ಗಾಯಕನನ್ನು ಕನ್ನಡ ಸಿನಿರಂಗಕ್ಕೆ ಪರಿಚಯಿಸಿದರು. ದ್ವಾರಕೀಶ್‌ 'ಆಟಗಾರ', 'ಚೌಕ', 'ಅಮ್ಮ ಐ ಲವ್ ಯು' ಅಂತಹ 50ಕ್ಕೂ ಅಧಿಕ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಇಲ್ಲಿಯವರೆಗೂ 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ ಮತ್ತು 17ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News