Kazan Khan: ʼಹಬ್ಬʼ ಸಿನಿಮಾದಲ್ಲಿ ನಟಿಸಿರುವ ಖ್ಯಾತ ಖಳನಟ ಕಝಾನ್​ ಖಾನ್​ ಇನ್ನಿಲ್ಲ!

ʼಹಬ್ಬʼ ಸಿನಿಮಾದಲ್ಲಿ ನಟಿಸಿರುವ ಖ್ಯಾತ ಖಳನಾಯಕ ಕಝಾನ್​ ಖಾನ್​ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರ ನಿಧನದ ಸುದ್ದಿಯನ್ನು ಮಲಯಾಳಂ ಚಲನಚಿತ್ರ ನಿರ್ಮಾಪಕ ಎನ್‌ಎಂ ಬಾದುಶಾ ಗಜನ್ ಖಾನ್ ಅವರು ಖಚಿತಪಡಿಸಿದ್ದಾರೆ.

Written by - Zee Kannada News Desk | Last Updated : Jun 13, 2023, 11:29 AM IST
  • ʼಹಬ್ಬʼ ಸಿನಿಮಾದಲ್ಲಿ ನಟಿಸಿರುವ ಖ್ಯಾತ ಖಳನಟ ಕಝಾನ್​ ಖಾನ್​ ನಿಧನ
  • ಸಾವಿನ ಸುದ್ದಿ ಖಚಿತ ಪಡಿಸಿದ ನಿರ್ಮಾಪಕ ಎನ್‌ಎಂ ಬಾದುಶಾ ಗಜನ್ ಖಾನ್
  • ಕನ್ನಡ , ತಮಿಳು ಸೇರಿದಂತೆ ಹಲವು ಭಾಷೆ ಸಿನಿಮಾಗಳಲ್ಲಿ ಕಝಾನ್​ ಖಾನ್​ ನಟನೆ
Kazan Khan: ʼಹಬ್ಬʼ ಸಿನಿಮಾದಲ್ಲಿ ನಟಿಸಿರುವ ಖ್ಯಾತ ಖಳನಟ ಕಝಾನ್​ ಖಾನ್​ ಇನ್ನಿಲ್ಲ! title=

ಚೆನ್ನೈ: ʼಹಬ್ಬʼ ಸಿನಿಮಾದಲ್ಲಿ ನಟಿಸಿರುವ ಖ್ಯಾತ ಖಳನಟ ಕಝಾನ್​ ಖಾನ್​ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರ ನಿಧನದ ಸುದ್ದಿಯನ್ನು ಮಲಯಾಳಂ ಚಲನಚಿತ್ರ ನಿರ್ಮಾಪಕ ಎನ್‌ಎಂ ಬಾದುಶಾ ಗಜನ್ ಖಾನ್ ಅವರು ಖಚಿತಪಡಿಸಿದ್ದಾರೆ.

1992ರಲ್ಲಿ ಕೇರಳದಲ್ಲಿ ಜನಿಸಿದ ಕಝಾನ್​ ಖಾನ್, ಪಿ ವಾಸು ನಿರ್ದೇಶನದ 'ಸೆಂತಮಿಜ್ ಪಾಟ್ಟು'  ಚಿತ್ರದ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ನಟನಾಗಿ ಪಾದಾರ್ಪಣೆ ಮಾಡಿದರು. ಸ್ಯಾಂಡಲ್ವುಡ್‌, ಟಾಲಿವುಡ್‌ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವಕಾಶ ದೊರಕಿದವು. ಇವರು ಮೂಲತಃ ಕೇರಳದವರಾಗಿದ್ದರೂ ಕಾಲಿವುಡ್‌ ಚಿತ್ರಗಳಲ್ಲೇ ಹೆಚ್ಚು ಖ್ಯಾತಿಗಳಿಸಿದರು. 

ಇದನ್ನೂ ಓದಿ: ‘ಹೌದು ಅಣ್ಣಾ.. ನಾನು ಹೀರೋಯಿನ್​ ಅಲ್ಲ’: ʼನಟ ಸಾರ್ವಭೌಮʼ ನಟಿ ಅನುಪಮಾ ಪರಮೇಶ್ವರನ್​ ಗರಂ..!

ಕನ್ನಡ ಚಿತ್ರರಂಗದಲ್ಲೂ ತಮ್ಮ ನಟನೆಯ ಛಾಪು ಮೂಡಿಸಿದ್ದಾರೆ. ಹಬ್ಬ’, ‘ನಾಗದೇವತೆ’ ʼಹುಬ್ಬಳ್ಳಿʼ ಸಿನಿಮಾದಲ್ಲಿ  ಖಳ ನಾಯಕನಾಗಿ ನಟಿಸಿ ಮಿಂಚಿದ್ದಾರೆ. 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನಿಗಿಂತ ಹೆಚ್ಚಾಗಿ ಖಳ ನಾಯಕನಾಗಿ ಕಝಾನ್​ ಖಾನ್​ ಗುರುತಿಸಿಕೊಂಡಿದ್ದರು. ಇದೀಗ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿರುವ ಇವರಿಗೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಇದನ್ನೂ ಓದಿ: Darling Krishna : ʼಹ್ಯಾಪಿ ಬರ್ತಡೇ ಮೈ ಡಾರ್ಲಿಂಗ್ ಕೃಷ್ಣ; ಆದಿಗೆ ಶುಭಕೋರಿದ ‘ಲವ್ ಮಾಕ್ಟೇಲ್ ನಿಧಿಮಾ!

ಕಝಾನ್​ ಖಾನ್ ಕಳೆದ 8 ವರ್ಷಗಳಿಂದ ಅವರು ಚಲನಚಿತ್ರಗಳಿಂದ ದೂರ ಇದ್ದರು ಎಂದು ಹೇಳಲಾಗುತ್ತಿದೆ. ‘ಗಂಧರ್ವಂ’, ‘ಸಿಐಡಿ ಮೂಸಾ’, ‘ದಿ ಕಿಂಗ್​’, ‘ಡ್ರೀಮ್ಸ್​’, ‘ಸೇತುಪತಿ ಐಪಿಎಸ್​’, ಎನ್ ಆಸೆ ಮಚ್ಚನ್, ಮುಸ್ತಫಾ, ವೇಲುಚಾಮಿ‘ವಾನತೈಪೋಲ’, ‘ಮೇಟ್ಟುಕುಡಿ’, ‘ವಲ್ಲರಸು’  ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕಝಾನ್​ ಖಾನ್​ ನಟಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News