Ramya : ಈ ಹೊಯ್ಸಳ ಚಿತ್ರ ಬಹುದಿನಗಳಿಂದ ಅಭಿಮಾನಿಗಳಲ್ಲಿ ಹೆಚ್ಚು ನಿರೀಕ್ಷೆಯನ್ನು ಉಂಟುಮಾಡಿತ್ತು. ಇದೀಗ ಚಿತ್ರ ತೆರೆಕಂಡು ಸದ್ದು ಮಾಡುತ್ತಿದೆ. ನಟಿ ರಮ್ಯಾ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಚಿತ್ರ ವಿಜಯ್ ಎನ್. ನಿರ್ದೇಶನದಡಿಯಲ್ಲಿ, ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ನಿರ್ಮಾಣ ಮಾಡಿದೆ.ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯನ್ನು ಸೊಗಸಾಗಿ ಚಿತ್ರದಲ್ಲಿ ಚಿತ್ರೀಕರಿಸಲಾಗಿದೆ.
'ಗುರುದೇವ್ ಹೊಯ್ಸಳ' ಅವತಾರದಲ್ಲಿ ನಟರಾಕ್ಷಸ ಧನಂಜಯ ಖಾಕಿ ಖದರ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ರಮ್ಯಾ ಕೂಡ ಚಿತ್ರತಂಡದ ಜೊತೆ ಸೇರಿ ಗಾಂಧಿನಗರದ ಸಂತೋಷ್ ಚಿತ್ರಮಂದಿರದಲ್ಲಿ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಎಲ್ಲರೂ ಸಿನಿಮಾ ನೋಡುವಂತೆ ಹೇಳಿ, ಈ ಬಗ್ಗೆ ಟ್ವೀಟ್ ಕೂಡ ಮಾಡಿದ್ದಾರೆ.
ಇದನ್ನೂ ಓದಿ-ಫಸ್ಟ್ ಡೇ ಗಳಿಕೆಯಲ್ಲಿ ಚಿರಂಜೀವಿ ಚಿತ್ರವನ್ನೇ ಓವರ್ ಟೇಕ್ ಮಾಡಿದ ನಾನಿ!
Sakkath mass action entertainer! Dhanu swag and dialogues, Naveen attitude and killer looks, Amrutha smile and performance 😽♥️ Paisa vasool movie! Weekend plans fix maadi Hoysala nodi! @Dhananjayaka @amrutha_iyengar @KRG_Studios @yogigraj @Karthik1423 https://t.co/dSmHBQpQJg
— Ramya/Divya Spandana (@divyaspandana) March 30, 2023
ಆದರೆ ನಟಿಯ ಟ್ವೀಟ್ ಗೆ ನೆಟ್ಟಿಗರು ಗರಂ ಆಗಿ ಉತ್ತರಿಸಿದ್ದಾರೆ. ಮೊದಲು ನೀವು ಕನ್ನಡದಲ್ಲಿ ಮಾತನಾಡಿ, ಕನ್ನಡದಲ್ಲಿ ಟ್ವೀಟ್ ಮಾಡುವುದನ್ನು ಕಲಿಯಿರಿ ಎಂದು ಸಲಹೆ ನೀಡುತ್ತಿದ್ದಾರೆ. ಕಳೆದ ವಾರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನಟಿ ರಮ್ಯಾ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಬಹುತೇಕ ಇಂಗ್ಲೀಷ್‌ನಲ್ಲೇ ಮಾತನಾಡಿದರು ಎನ್ನುವ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದ್ದರು. ಕನ್ನಡ ಕಾರ್ಯಕ್ರಮದಲ್ಲಿ ಇಷ್ಟೊಂದು ಇಂಗ್ಲೀಷ್ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದರು.
ರಶ್ಮಿಕಾ ತತ್ಸಮ, ರಮ್ಯಾ ತದ್ಭವ ಅಂತೆಲ್ಲಾ ಟ್ರೋಲ್ ಮಾಡಿದ್ದಾರೆ. ರಮ್ಯಾ ಭಾಗಿ ಆಗಿದ್ದ ಎಪಿಸೋಡ್ ಬಗ್ಗೆ ಸಾಕಷ್ಟು ಮೀಮ್ಸ್, ಟ್ರೋಲ್ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇನ್ನು ಯೂಟ್ಯೂಬರ್ ಡಾ. ಬ್ರೋನ ಶೋಗೆ ಕರೆಸುವ ಬಗ್ಗೆ ರಾಘವೇಂದ್ರ ಹುಣಸೂರು ನೀಡಿದ ಹೇಳಿಕೆಯನ್ನು ರಮ್ಯಾ ಇಂಗ್ಲೀಷ್ ವ್ಯಾಮೋಹಕ್ಕೆ ಸೇರಿಸಿ ಟ್ರೋಲ್ ಮಾಡಿದ್ದರು. ಇಂತಹವರನ್ನು ಯಾಕೆ ಸಾಧಕರ ಸೀಟಿನಲ್ಲಿ ಕೂರಿಸುತ್ತೀರಾ ಎಂದಿದ್ದರು.
ಟ್ರೋಲ್‌ಗಳ ಬಗ್ಗೆ ಪ್ರತಿಕ್ರಿಯಿಸಿದ್ದ ನಟಿ "ಮುದ್ದು ಅಜ್ಜಿಯರಿಗೋಸ್ಕರ ಮುಂದಿನ ಶೋನಲ್ಲಿ ಕನ್ನಡದಲ್ಲೇ ಮಾತನಾಡುತ್ತೀನಿ" ಎಂದು ಖಾರವಾಗಿ ಉತ್ತರ ಕೊಟ್ಟಿದ್ದರು. ಈ ಪ್ರತಿಕ್ರಿಯೆ ಕೂಡ ಕೆಲವರ ಬೇಸರಕ್ಕೆ ಕಾರಣವಾಗಿತ್ತು. ಇದೀಗ 'ಗುರುದೇವ್ ಹೊಯ್ಸಳ' ಸಿನಿಮಾ ನೋಡಿ ಮಾಡಿರುವ ಟ್ವೀಟ್ ಕೂಡ ಕೆಲವರನ್ನು ಕೆರಳಿಸಿದೆ.
ಇದನ್ನೂ ಓದಿ-ಸಮಂತಾ ಜೊತೆಗಿನ ವಿಚ್ಚೇದನದ ನಂತರ ಹೊಸ ಗರ್ಲ್ ಫ್ರೆಂಡ್ ಜೊತೆ ಕಾಣಿಸಿಕೊಂಡ ನಾಗಚೈತನ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.