ಕಾಸ್ಟಿಂಗ್ ಕೌಚ್ ಕುರಿತು 'Four More Shots Please' ನಟಿ ಹೇಳಿದ್ದೇನು?

ವೆಬ್ ಸೀರಿಸ್ ವೊಂದರಲ್ಲಿ ಕೆಲಸಮಾಡಲು ಪ್ರಸ್ತಾವನೆಯೊಂದರ ಕುರಿತು ನಿರ್ಮಾಪಕರೊಬ್ಬರು ಕರೆ ಮಾಡಿದ್ದರು.

Updated: Apr 10, 2020 , 05:40 PM IST
ಕಾಸ್ಟಿಂಗ್ ಕೌಚ್ ಕುರಿತು 'Four More Shots Please' ನಟಿ ಹೇಳಿದ್ದೇನು?

ನವದೆಹಲಿ: ವಿಡಿಯೋ ಸ್ಟ್ರೀಮಿಂಗ್ ಆಪ್ TVF ನಲ್ಲಿ ಪ್ರದರ್ಶಿತಗೊಂಡ 'ಟ್ರಿಪಲಿಂಗ್' ಮೂಲಕ ಖ್ಯಾತಿಯ ಉತ್ತುಂಗಕ್ಕೇರಿದ ಖ್ಯಾತ ಬಾಲಿವುಡ್ ನಟಿ ಮಾನವಿ ಗಾಗರು ಇತ್ತೀಚೆಗಷ್ಟೇ ಕಾಸ್ಟಿಂಗ್ ಕೌಚ್ ಕುರಿತ ತಮ್ಮ ಅನುಭವವನ್ನು ಬಹಿರಂಗಪಡಿಸಿದ್ದಾಳೆ. ಇದು ವೆಬ್ ಸಿರೀಸ್ ನಿರ್ಮಾಪಕನನ್ನು ಒಳಗೊಂಡಿದೆ. ಇಂಡಿಯಾ ಗ್ಲಿಟ್ಜ್ ಡಾಟ್ ಕಾಮ್ ವರದಿಯ ಪ್ರಕಾರ, ಒಂದು ವರ್ಷದ ಹಿಂದೆ ಈ ಘಟನೆ ನಡೆದಿದೆ ಎಂದು ನಟಿ ಹೇಳಿದ್ದಾರೆ. ವೆಬ್‌ಸೈಟ್ ವರದಿಯ ಪ್ರಕಾರ, ವೆಬ್ ಸಿರೀಸ್ ನಲ್ಲಿನ ಪಾತ್ರಕ್ಕಾಗಿ ಪ್ರಸ್ತಾವನೆಯೊಂದಿಗೆ ನಿರ್ಮಾಪಕರೊಬ್ಬರು ಮಾನವಿಗೆ ಕರೆ ಮಾಡಿದ್ದರು ಎನ್ನಲಾಗಿದೆ.

ವೆಬ್‌ಸೈಟ್‌ ಗೆ ಹೇಳಿಕೆ ನೀಡಿರುವ ಮಾನವಿ, "ಒಂದು ವರ್ಷದ ಹಿಂದೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ನನಗೆ ಒಂದು ಕರೆ ಬಂದಿತ್ತು. ಅವರು ನನಗೆ 'ನಾವು ವೆಬ್ ಸರಣಿಯೊಂದನ್ನು ಮಾಡಲು ನಿರ್ಧರಿಸಿದ್ದು, ಅದರಲ್ಲಿ ನಿಮ್ಮನ್ನು ಕಾಸ್ಟ್ ಮಾಡಲು ಬಯಸುತ್ತಿದ್ದೇವೆ ಎಂದಿದ್ದರು. ನಂತರ ಅವರು ನನಗೆ ಬಜೆಟ್ ಕುರಿತು ಮಾಹಿತಿ ನೀಡಿದ್ದರು. ಇದಕ್ಕೆ ಉತ್ತರಿಸಿದ ನಾನು, ಬಜೆಟ್ ಬಗ್ಗೆ ಏಕೆ ಮಾತನಾಡುತ್ತಿದ್ದೇವೆ? ಸ್ಕ್ರಿಪ್ಟ್ ಹೇಳಿ ನಾನು ಕಥೆಯಲ್ಲಿ ಆಸಕ್ತಿ ಹೊಂದಿದ್ದರೆ ಮತ್ತು ನೀವು ನನ್ನನ್ನು ಕಾಸ್ಟ್ ಮಾಡಲು ಆಸಕ್ತಿ ಹೊಂದಿದ್ದರೆ, ನಾವು ಹಣ, ದಿನಾಂಕಗಳು ಮತ್ತು ಎಲ್ಲದರ ಬಗ್ಗೆ ಚರ್ಚಿಸುವೆ ಎಂದಿದ್ದೆ. ಎಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ ನಾನು ಬಜೆಟ್ ಕೇಳಿ ಮಾಡದಿರಲು ನಿರ್ಧರಿಸಿ ಅವರಿಗೆ ನನ್ನ ನಿಲುವು ತಿಳಿಸಿದೆ. ಆಗ ಅವರು ಬಜೆಟ್ ನನ್ನ ಬಜೆಟ್ ನಲ್ಲಿ ಏಕಾಏಕಿ ಮೂರು ಪಟ್ಟು ಹೆಚ್ಚಳ ಮಾಡಿ ನಾನು ಇಷ್ಟು ಹಣವನ್ನು ನಿಮಗೆ ನೀಡಬಲ್ಲೆ, ಆದರೆ ನೀವು ರಾಜಿ ಮಾಡಿಕೊಳ್ಳಬೇಕು ಎಂದಿದ್ದರು" ಎಂದು ಮಾನವಿ ಹೇಳಿದ್ದಾರೆ.

ಈ ಕುರಿತು ಮುಂದುವರೆದು ಮಾತನಾಡಿರುವ ಮಾನವಿ, "ಈ ಪದ ಒಪ್ಪಂದ, ನಾನು ಏಳು ರಿಂದ ಎಂಟು ವರ್ಷಗಳ ನಂತರ ಕೇಳಿದೆ. ಆದರೆ ಇದ್ದಕ್ಕಿದ್ದಂತೆ ನನಗೆ ಏನಾಯಿತು ತಿಳಿಯಲಿಲ್ಲ ಮತ್ತು ನಾನು ಅವರ ಮೇಲೆ ಕಿರುಚಾಡಲು ಪ್ರಾರಂಭಿಸಿ, ನಿನಗೆ ಎಷ್ಟು ಧೈರ್ಯ, ನಾನು ನಿನ್ನ ಬಗ್ಗೆ ಪೊಲೀಸರಲ್ಲಿ ದೂರು ನೀಡುವೆ ಎಂದು ಬೆದರಿಸಿದೆ. ಅಷ್ಟೇ ಅಲ್ಲ ಹ್ಯಾಶ್‌ಟ್ಯಾಗ್‌ ಯುಗದಲ್ಲಿಯೂ ಕೂಡ ಇಂತಹ ಘಟನೆಗಳು ನಡೆಯುತ್ತಿವೆ ಎಂಬುದನ್ನು ಅರಿತು ನನಗೆ ತುಂಬಾ ಕೋಪ ಬಂದಿತ್ತು" ಎಂದು ಮಾನವಿ ತಮ್ಮ ವೃತ್ತಿಜೀವನದ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.