ಬೆಂಗಳೂರು: ನಮ್ಮ ದೇಶದ, ಕರುನಾಡಿನ ಬಹುದೊಡ್ಡ ಆಸ್ತಿ, ಶಕ್ತಿ, ದೇವರು ಅಂದ್ರೆ ಅದು ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್. ಪುನೀತ್ ರಾಜ್ ಕುಮಾರ್ ಅಂದ್ರೆ ಸಾಕು ಜೀವಕ್ಕೆ ಜೀವ ಕೊಡೋ ಮಂದಿ ಇದ್ದಾರೆ. ಇವತ್ತು ಅಪ್ಪು ಎಲ್ಲರ ಮನೆಯ ದೇವರಕೋಣೆಯಲ್ಲಿ ಆರಾಧಿಸುವ ದೇವರಾಗಿದ್ದಾರೆ. ಯಾವುದೇ ಸಭೆ, ಸಮಾರಂಭ, ಮದ್ವೆ ಏನೇ ನಡೀಲಿ ಅಲ್ಲಿ ಅಪ್ಪು ಗೆ ವಿಶೇಷ ಪೂಜೆ ಸಲ್ಲುತ್ತೆ. ಆ ಮಟ್ಟಿಗೆ ಪುನೀತ್ ಗೆ ವಿಶೇಷ ಪ್ರೀತಿ ಹಂಚುತ್ತಿದ್ದಾರೆ ನಾಡಿನ ಜನ. ಪ್ರತಿ ದಿನ ಪ್ರತಿಕ್ಷಣ ಪ್ರತಿಯೊಬ್ಬರೂ ಅಪ್ಪುವನ್ನ ನೆನೆದು ಭಾವುಕರಾಗುತ್ತಾರೆ. ದೇವರಿಗೂ ಹಿಡಿಹಿಡಿ ಶಾಪ ಹಾಕುತ್ತಾರೆ. ಅಪ್ಪು ನಮ್ಮನ್ನ ಅಗಲಿ ಇದೇ ಅಕ್ಟೋಬರ್ 29ಕ್ಕೆ ಒಂದು ವರ್ಷ ಆಗುತ್ತೆ. ಆದ್ರೆ ಆ ನೋವು ಮಾತ್ರ ಇನ್ನೂ ಮಾಸಿಲ್ಲ, ಮಾಸೋದು ಇಲ್ಲ ಬಿಡಿ.
ಅಕ್ಟೋಬರ್ 28ಕ್ಕೆ ಅಪ್ಪು ದರ್ಶನವಾಗುತ್ತಿದೆ. ಬಹುನಿರೀಕ್ಷೆಯ ಗಂಧದ ಗುಡಿ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾ ಪುನೀತ್ ಅವರ ಕನಸಿನ ಕೂಸು. ಕರುನಾಡಿನ ಕಾಡುಮೇಡು ಅಲೆದು ನಾಡಿನ ಶ್ರೀಮಂತಿಕೆಯನ್ನು ತೋರಿಸಲು ಅಪ್ಪು ಬರುತ್ತಿದ್ದಾರೆ. ಗಂಧದ ಗುಡಿ ಸಿನಿಮಾ ವಿಚಾರಕ್ಕೆ ಸಂಬಂಧಪಟ್ಟಂತೆ ಜೀ ಕನ್ನಡ ನ್ಯೂಸ್ ಜೊತೆ ಅಣ್ಣಾವ್ರ ಮಗಳು, ಅಪ್ಪುವಿನ ಪ್ರೀತಿಯ ಅಕ್ಕ ಪೂರ್ಣಿಮಾ ರಾಮ್ ಕುಮಾರ್ ಮಾತನಾಡಿ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ- Gandhada Gudi: ‘ಗಂಧದಗುಡಿ’ ಟ್ರೇಲರ್ ನೋಡಿ ‘ಅಪ್ಪು’ ಕೊಂಡಾಡಿದ ಪ್ರಧಾನಿ ಮೋದಿ
ಗಂಧದಗುಡಿ ಸಿನಿಮಾ ಶೂಟಿಂಗ್ ಗೆ ಹೋದಾಗ ಅಪ್ಪು ನನಗೆ ಹೇಳೇ ಇರಲಿಲ್ಲ. ನಾನು ಬೆಂಗಳೂರಿನಲ್ಲೇ ಇದ್ದಾನೆ ಅಂತ ಭಾವಿಸಿದ್ದೆ. ಶೂಟಿಂಗ್ ಹೋಗಿ ಬಂದ ಬಳಿಕ ಒಂದಷ್ಟು ದೃಶ್ಯಗಳನ್ನ ಮೊಬೈಲ್ ನಲ್ಲಿ ನನಗೆ ತೋರಿಸಿದ್ದ. ಅಪ್ಪುಗೆ ಗಂಧದ ಗುಡಿ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಆದ್ರೆ ಸಿನಿಮಾ ನೋಡಲು ಅಪ್ಪು ಇಲ್ಲ ಅಂದುಕೊಳ್ಳೋದು ಬೇಡ. ಇದೇ ಅಕ್ಟೋಬರ್ 28ಕ್ಕೆ ನನ್ನ ತಮ್ಮ ಮತ್ತೇ ಬರುತ್ತಾನೆ ಅನ್ನೋದನ್ನ ನೋವಿನಿಂದಲೇ ಜೀ ಕನ್ನಡ ನ್ಯೂಸ್ ಜೊತೆ ಹಂಚಿಕೊಂಡ್ರು ಪೂರ್ಣಿಮಾ.
ಅಪ್ಪು ಮತ್ತು ನನಗೆ ಜಾಸ್ತಿ ಒಡನಾಟ ಇತ್ತು. ನಂಗೆ ಅಪ್ಪು ಅಂದ್ರೆ ಪ್ರಾಣ, ನಾನೇ ಅವ್ನ ನೋಡ್ಕೊತ್ತಾ ಇದ್ದೆ. ಆದ್ರೆ ಏನ್ ಮಾಡೋದು ಆ ದೇವರ ಇಚ್ಛೆಯಂತೆ ನಮ್ಮನ್ನ ಬಿಟ್ಟು ಹೋದ. ಆದ್ರೆ ನನ್ನ ಜೊತೆ ಇಲ್ಲೇ ಎಲ್ಲೋ ಇದ್ದಾನೆ ಅಂತ ಹೇಳಿದ್ರು.
ಇದನ್ನೂ ಓದಿ- ʼನಾ ಕಂಡ ಅದ್ಭುತ ನಾಯಕನ ಅದ್ಭುತ ಪಯಣʼ : ʼಗಂಧದಗುಡಿʼ ನೋಡಿ ಭಾವುಕರಾದ ರಿಷಬ್ ಶೆಟ್ಟಿ
ಅಪ್ಪು ಪತ್ನಿ-ಪುತ್ರಿಯರ ಬಗ್ಗೆ ಪೂರ್ಣಿಮಾ ಮಾತು:-
ಅಶ್ವಿನಿ ಮತ್ತು ಮಕ್ಕಳು ತುಂಬಾ ಸ್ಟ್ರಾಂಗ್. ಅಶ್ವಿನಿ ಜೊತೆ ನಾವು ಯಾವತ್ತಿಗೂ ಇರ್ತೀವಿ. ಅಪ್ಪು ಮತ್ತು ಅಶ್ವಿನಿ ತುಂಬಾ ಒಳ್ಳೆ ಫ್ರೆಂಡ್ಸ್ ಅನ್ನೋದನ್ನ ಹೇಳಿಕೊಂಡ್ರು ಅಣ್ಣಾವ್ರ ಮಗಳು. ಅಪ್ಪಾಜಿ, ಅಮ್ಮ ಇಬ್ಬರೂ ಕೂಡ ಅಪ್ಪುವಿನಲ್ಲಿ ಇದ್ದರು ಅನ್ನೋದನ್ನ ಹೇಳುವಾಗ ಭಾವುಕರಾದರು ಅಪ್ಪು ಸಹೋದರಿ ಪೂರ್ಣಿಮಾ.
ಅಕ್ಟೋಬರ್ 28ಕ್ಕೆ ನಾಡಿನ ಜನತೆಗೆ ಗಂಧದಗುಡಿಯನ್ನು ತೋರಿಸಲು ಅಪ್ಪು ಬರುತ್ತಿದ್ದಾರೆ. ಚಿತ್ರ ಮಂದಿರಗಳಿಗೇ ಹೋಗಿ ಸಿನಿಮಾ ವೀಕ್ಷಿಸಿ. ಕನ್ನಡ ಸಿನಿಮಾಗಳನ್ನು ಆಶೀರ್ವದಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.