24ನೇ ದಿನವೂ ಕೂಡ ಅಕ್ಷಯ್ ಗೆ 'GOOD NEWWZ'

ರಾಜ್ ಮೆಹ್ತಾ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ ಜೊತೆಗೆ ಕರೀನಾ ಕಪೂರ್ ಖಾನ್, ದಿಲ್ಜೀತ್ ದೊಸಾಂಜ್ ಹಾಗೂ ಕಿಯಾರಾ ಅಡ್ವಾಣಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

Updated: Jan 20, 2020 , 06:27 PM IST
24ನೇ ದಿನವೂ ಕೂಡ ಅಕ್ಷಯ್ ಗೆ 'GOOD NEWWZ'

ನವದೆಹಲಿ: 'ತಾನಾಜಿ:ದಿ ಅನ್ಸಂಗ್ ವಾರಿಯರ್' ಚಿತ್ರದ ಜೊತೆಗೆ ಮತ್ತೊಂದು ಚಿತ್ರ ಬಾಲಿವುಡ್ ಮೇಲೆ ತನ್ನ ನಾಗಾಲೋಟ ಮುಂದುವರೆಸಿದೆ. ಡಿಸೆಂಬರ್ 27 ರಂದು ಬಿಡುಗಡೆಗೊಂಡ ಅಕ್ಷಯ್ ಕುಮಾರ್ ಅಭಿನಯದ 'ಗುಡ್ ನ್ಯೂಸ್' ಇದುವರೆಗೂ ಕೂಡ ದೇಶಾದ್ಯಂತ ತನ್ನ ಉತ್ತಮ ಪ್ರದರ್ಶನ ಮುಂದುವರೆಸಿದೆ. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಜ್ ಮೆಹ್ತಾ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಜೊತೆಗೆ ಕರೀನಾ ಕಪೂರ್ ಖಾನ್, ದಿಲ್ಜೀತ್ ದೊಸಾಂಜ್, ಕಿಯಾರ ಅಡ್ವಾಣಿ ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಸದ್ಯ ಈ ಚಿತ್ರದ 24ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಬಹಿರಂಗಗೊಂಡಿದ್ದು, ಈ ಚಿತ್ರಕ್ಕೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿರುವುದು ಮತ್ತೊಮ್ಮೆ ಸಿದ್ಧವಾಗಿದೆ. ಈ ಕುರಿತು ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ದಿಲ್ಜೀತ್ ದೊಸಾಂಜ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ದಿಲ್ಜೀತ್ ಇದುವರೆಗೆ ಈ ಚಿತ್ರ 201.14 ಕೋಟಿ ರೂ.ಕಲೆಹಾಕುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ. ಚಿತ್ರದ ಕಥೆ ಕುರಿತು ಹೇಳುವುದಾದರೆ ಆರಂಭದಿಂದ ಚಿತ್ರ ಮುಗಿಯುವವರೆಗೆ ಈ ಚಿತ್ರ ನಿಮ್ಮನ್ನು ಸೀಟ್ ನಲ್ಲಿ ಕಟ್ಟಿಹಾಕಲಿದೆ. 

 'ಕೇಸರಿ' ಚಿತ್ರದಲ್ಲಿ ಅದ್ಭುತ ಅಭಿನಯದ ಮೂಲಕ ತನ್ನ ಅಭಿಮಾನಿಗಳನ್ನು ರಂಜಿಸಿದ ಅಕ್ಷಯ ಕುಮಾರ್, 'ಹೌಸ್ ಫುಲ್-4' ಚಿತ್ರದಲ್ಲಿ ತಮ್ಮ ಸಾಮಾನ್ಯ ಪಾತ್ರದಲ್ಲಿ ಕಂಡುಬಂದಿದ್ದರು. 'ಗುಡ್ ನ್ಯೂಸ್' ಚಿತ್ರದಲ್ಲಿ ಅಕ್ಷಯ್ ಅವರ ನೈಸರ್ಗಿಕ ನಟನೆ ಪ್ರೇಕ್ಷಕರ ಮನ ಗೆದ್ದಿದ್ದು, ಮದುವೆಯ 7 ವರ್ಷಗಳ ಬಳಿಕವೂ ಕೂಡ ತಾಯಿ ಭಾಗ್ಯ ಕಾಣದ ಮಹಿಳೆಯ ಪಾತ್ರಕ್ಕೆ ಕರೀನಾ ಕೂಡ ಜೀವ ತುಂಬಿದ್ದಾರೆ. ಅಕ್ಷಯ್-ಕರೀನಾಗೆ ಹೋಲಿಸಿದರೆ ದಿಲ್ಜೀತ್-ಕಿಯಾರಾಗೆ ಪರದೆಯ ಮೇಲೆ ಕಾಣಿಸಿಕೊಳ್ಳಲು ಸ್ವಲ್ಪ ಕಡಿಮೆ ಅವಕಾಶ ಸಿಕ್ಕಿದ್ದರೂ ಕೂಡ ಚಿತ್ರದ ಹಲವು ದೃಶ್ಯಗಳಲ್ಲಿ ಇವರು ಪ್ರೇಕ್ಷಕರು ಹೊಟ್ಟೆ ಹಿಡಿದು ನಗುವಂತೆ ಮಾಡಿದ್ದಾರೆ. ಅಕ್ಷಯ್ ಕುಮಾರ್ ಅವರ ಕುರಿತು ಹೇಳುವುದಾದರೆ, ಅಕ್ಷಯ್ ಪರದೆಗೆ ಎಂಟ್ರಿ ಹೊಡೆದರೆ, ಅವರ ಪಕ್ಕದ ಕಲಾವಿದರ ಮೇಲೆ ಪ್ರೇಕ್ಷರ ಗಮನ ಹರಿಯುವುದೇ ಇಲ್ಲ. ಆದರೆ, ಈ ಚಿತ್ರದಲ್ಲಿ ಅಕ್ಷಯ್ ಉಪಸ್ಥಿತಿಯಲ್ಲಿಯೂ ಕೂಡ ದಿಲ್ಜೀತ್ ದೊಸಾಂಜ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಕಿಯಾರಾ ಅಡ್ವಾಣಿ, ದಿಲ್ಜೀತ್ ಅವರ ಪಂಜಾಬಿ ಪತ್ನಿಯ ಭೂಮಿಕೆಯಲ್ಲಿ ಕಂಡುಬಂದಿದ್ದಾರೆ. ಪಂಜಾಬಿ ಪತ್ನಿಯರ ನಡೆ-ನುಡಿ ಬಾಡಿ ಲ್ಯಾಂಗ್ವೇಜ್ ಅನ್ನು ಉತ್ತಮ ರೀತಿಯಲ್ಲಿ ಪರದೆಯ ಮೇಲೆ ಇಳಿಸುವಲ್ಲಿ ಕಿಯಾರಾ ಬಹುತೇಕ ಯಶಸ್ವಿಯಾಗಿದ್ದಾರೆ.