Google Search 2021:ಅಗ್ರಸ್ಥಾನದಲ್ಲಿ 'ಜೈ ಭೀಮ್', ಟ್ರೆಂಡ್ ಸೃಷ್ಟಿಸಿದ್ದ ಸೆಲೆಬ್ರಿಟಿಗಳಿವರು

Google Search 2021: ಸೂರ್ಯ ನಟನೆಯ ಜೈ ಭೀಮ್ (Jai Bhim) ಚಿತ್ರವು 'ಇಯರ್ ಇನ್ ಸರ್ಚ್' ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದು ಈ ವರ್ಷದ ಅತ್ಯಂತ ಹೆಚ್ಚು ಹುಡುಕಾಡಲ್ಪಟ್ಟ (The most searched) ಚಲನಚಿತ್ರವಾಗಿದೆ.  

Edited by - ZH Kannada Desk | Last Updated : Dec 8, 2021, 06:34 PM IST
 • ಗೂಗಲ್ ಇಂಡಿಯಾ ತನ್ನ 'ಇಯರ್ ಇನ್ ಸರ್ಚ್' ಫಲಿತಾಂಶ
 • ಸೂರ್ಯ ನಟನೆಯ ಜೈ ಭೀಮ್ 'ಇಯರ್ ಇನ್ ಸರ್ಚ್' ಪಟ್ಟಿಯಲ್ಲಿ ಅಗ್ರಸ್ಥಾನ
Google Search 2021:ಅಗ್ರಸ್ಥಾನದಲ್ಲಿ 'ಜೈ ಭೀಮ್', ಟ್ರೆಂಡ್ ಸೃಷ್ಟಿಸಿದ್ದ ಸೆಲೆಬ್ರಿಟಿಗಳಿವರು

ನವದೆಹಲಿ: ಗೂಗಲ್ ಇಂಡಿಯಾ ತನ್ನ 'ಇಯರ್ ಇನ್ ಸರ್ಚ್' (Year in Search) ಫಲಿತಾಂಶಗಳನ್ನು ಪ್ರಕಟಿಸಿದೆ. ಪ್ರಾದೇಶಿಕ ಸಿನಿಮಾಗಳಲ್ಲಿ ಬಲವಾದ ಆಸಕ್ತಿಯು ಕಂಡುಬರುತ್ತಿದೆ ಎಂಬುದು ಈ ಫಲಿತಾಂಶದಿಂದ ತಿಳಿದುಬಂದಿದೆ.

ಸೂರ್ಯ ನಟನೆಯ ಜೈ ಭೀಮ್ (Jai Bhim) ಚಿತ್ರವು 'ಇಯರ್ ಇನ್ ಸರ್ಚ್' ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದು ಈ ವರ್ಷದ ಅತ್ಯಂತ ಹೆಚ್ಚು ಹುಡುಕಾಡಲ್ಪಟ್ಟ (The most searched) ಚಲನಚಿತ್ರವಾಗಿದೆ.  

ನಂತರದ ಸ್ಥಾನದಲ್ಲಿ ಬಾಲಿವುಡ್ ಚಲನಚಿತ್ರ  ಶೇರ್ ಶಾ (Shershaah) ಇದೆ.  ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರವು ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಜೀವನಚರಿತ್ರೆಯಾಗಿದೆ. ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಯಿತು.

ಸಲ್ಮಾನ್ ಖಾನ್ ಅವರ ರಾಧೆ  (Radhe) ಮತ್ತು ವಾಣಿ ಕಪೂರ್ ನಟಿಸಿದ ಅಕ್ಷಯ್ ಕುಮಾರ್ ಅವರ ಬೆಲ್ ಬಾಟಮ್ (BellBottom), ಟ್ರೆಂಡಿಂಗ್ ಚಾರ್ಟ್‌ಗಳಲ್ಲಿರುವ ಇತರ ಹಿಂದಿ ಚಲನಚಿತ್ರಗಳಾಗಿವೆ. ರಾಧೆ ಒಂದು ದರೋಡೆಕೋರ ನಾಟಕವಾಗಿದ್ದರೆ, ಬೆಲ್‌ಬಾಟಮ್ ಒಂದು ಬೇಹುಗಾರಿಕೆಯ ಥ್ರಿಲ್ಲರ್ ಮೂವಿ ಆಗಿತ್ತು. 

ಇದನ್ನೂ ಓದಿ: Jacqueline Fernandez: ಇಡಿ ಮುಂದೆ ಹಾಜರಾದ ಜಾಕ್ವೆಲಿನ್ ಫರ್ನಾಂಡೀಸ್

ಹೆಚ್ಚು ನಿರೀಕ್ಷಿತ ಹಾಲಿವುಡ್ ಚಲನಚಿತ್ರಗಳಾದ ಗಾಡ್ಜಿಲ್ಲಾ vs ಕಾಂಗ್ (Godzilla vs Kong) ಮತ್ತು ಮಾರ್ವೆಲ್ಸ್ ಎಟರ್ನಲ್ಸ್ (Marvel’s Eternals) ಈ ವರ್ಷದ ಟಾಪ್ ಟ್ರೆಂಡಿಂಗ್ ಚಲನಚಿತ್ರಗಳ ಪಟ್ಟಿಯಲ್ಲಿವೆ. ದೃಶ್ಯಂ 2 (Drishyam 2) ಮತ್ತು ಭುಜ್: ದಿ ಪ್ರೈಡ್ ಆಫ್ ಇಂಡಿಯಾ (Bhuj: The Pride Of India) ಸಹ ಪಟ್ಟಿಯಲ್ಲಿವೆ.

Google Search 2021 ರಲ್ಲಿ ಟಾಪ್ ಟ್ರೆಂಡ್‌ ಮಾಡಿದ ಚಲನಚಿತ್ರಗಳು:

 • ಜೈ ಭೀಮ್
 • ಶೇರ್ ಶಾ
 • ರಾಧೆ
 • ಬೆಲ್ ಬಾಟಮ್
 • ಮಾರ್ವೆಲ್ಸ್ ಎಟರ್ನಲ್ಸ್
 • ಮಾಸ್ಟರ್
 • ಸೂರ್ಯವಂಶಿ
 • ಗಾಡ್ಜಿಲ್ಲಾ vs ಕಾಂಗ್
 • ದೃಶ್ಯಂ 2
 • ಭುಜ್: ದಿ ಪ್ರೈಡ್ ಆಫ್ ಇಂಡಿಯಾ 

ಇದನ್ನೂ ಓದಿ: Katrina-Vicky Wedding: ಕತ್ರಿನಾ -ವಿಕ್ಕಿ ವಿವಾಹದ ಭೋಜನದಲ್ಲಿ ಏನಿರಲಿದೆ ವಿಶೇಷ, ಕೇಕ್ ತಯಾರಿಸಲು ಇಟಲಿಯಿಂದ ಬಂದಿರುವ ಶೆಫ್

Google Search 2021 ರಲ್ಲಿ ಟ್ರೆಂಡ್ ಸೃಷ್ಟಿಸಿದ್ದ ಸೆಲೆಬ್ರಿಟಿಗಳು: 

ಆರ್ಯನ್ ಖಾನ್: ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಅಕ್ಟೋಬರ್ 2 ರಂದು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲ್ಪಟ್ಟರು ಮತ್ತು ಅಕ್ಟೋಬರ್ 28 ರಂದು ಜಾಮೀನಿನ ಮೇಲೆ ಬಿಡುಗಡೆಯಾದರು. 

ಶೆಹನಾಜ್ ಗಿಲ್: ಸೆಪ್ಟೆಂಬರ್‌ನಲ್ಲಿ ಹಠಾತ್ ಹೃದಯಾಘಾತದಿಂದ ಸಿದ್ಧಾರ್ಥ್ ಶುಕ್ಲಾ ನಿಧನರಾದ ನಂತರ, ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಅವರ ಆಪ್ತ ಸ್ನೇಹಿತ ಶೆಹನಾಜ್ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದರು. ಒಂದೆರಡು ವಾರಗಳ ಕಾಲ ವಿರಾಮ ತೆಗೆದುಕೊಂಡ ನಂತರ, ಅವರು ತಮ್ಮ ಚಿತ್ರೀಕರಣಕ್ಕೆ ಮರಳಿದರು.

ರಾಜ್ ಕುಂದ್ರಾ: ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಬಂಧಿಸಲಾಯಿತು. ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಯಿತು.

More Stories

Trending News