Hansika Motwani: ಹನ್ಸಿಕಾ ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿದ್ದಾರಾ? ಇದೇ ಸತ್ಯ

Hansika Hormone Injections: ಕೆಲವೇ ದಿನಗಳಲ್ಲಿ ತೆಲುಗು ಪ್ರೇಕ್ಷಕರ ಮನಗೆದ್ದ ಹನ್ಸಿಕಾ ಟಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿದರು. ಆದರೆ ಸೌಂದರ್ಯಕ್ಕಾಗಿ ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ.  

Written by - Chetana Devarmani | Last Updated : May 19, 2023, 06:02 PM IST
  • ಟಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ ನಟಿ
  • ಹನ್ಸಿಕಾ ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿದ್ದಾರಾ?
  • ಸೌಂದರ್ಯಕ್ಕಾಗಿ ಹಾರ್ಮೋನ್ ಇಂಜೆಕ್ಷನ್!?
Hansika Motwani: ಹನ್ಸಿಕಾ ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿದ್ದಾರಾ? ಇದೇ ಸತ್ಯ  title=
ಹನ್ಸಿಕಾ

Hansika Hormone Injections: ಹನ್ಸಿಕಾ ಮೋಟ್ವಾನಿ ಬೆಳ್ಳಿತೆರೆಯನ್ನು ತನ್ನ ಮೋಡಿಯಿಂದ ಆಳಿದರು. ಒಂದು ಹಂತದಲ್ಲಿ ಆಕೆಯ ಗ್ಲಾಮರ್ ಡೋಸ್ ತೆಲುಗು ಪ್ರೇಕ್ಷಕರ ಹೃದಯವನ್ನು ಕದ್ದಿತ್ತು. ಕೆಲವೇ ದಿನಗಳಲ್ಲಿ ತೆಲುಗು ಪ್ರೇಕ್ಷಕರನ್ನು ತಲುಪಿದ ಹನ್ಸಿಕಾ ಟಾಲಿವುಡ್ ನಲ್ಲಿ ಕಮಾಲ್‌ ಮಾಡಿದರು. ಆದರೆ ಈ ನಡುವೆ ಹನ್ಸಿಕಾ ಹಾರ್ಮೋನ್‌ ಇಂಜೆಕ್ಷನ್ ತೆಗೆದುಕೊಂಡಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ.

2003 ರಲ್ಲಿ ಹನ್ಸಿಕಾ, ಹೃತಿಕ್ ರೋಷನ್ ಅವರೊಂದಿಗೆ ಕೋಯಿ ಮಿಲ್ ಗಯಾ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ನಟಿಸಿದರು. ಆದರೆ ಈ ನಾಲ್ಕು ವರ್ಷಗಳಲ್ಲಿ ಆಕೆಯ ಸೌಂದರ್ಯದಲ್ಲಿ ಇಷ್ಟೊಂದು ಬದಲಾವಣೆ ಆಗಲು ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿದ್ದೇ ಕಾರಣ ಎಂದು ಅನೇಕ ಜನರು ಹೇಳುತ್ತಾರೆ.

ಇದನ್ನೂ ಓದಿ: ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ ʼರಾಧಾ ಕಲ್ಯಾಣʼ ನಟಿ ರಾಧಿಕಾ : ಇಲ್ಲಿವೆ ನೋಡಿ ಫೋಟೊಸ್‌

ಈ ಹಿನ್ನೆಲೆಯಲ್ಲಿ ಕೊನೆಗೂ ಹನ್ಸಿಕಾ ಮೋಟ್ವಾನಿ ಈ ವಿಚಾರಕ್ಕೆ ತೆರೆ ಎಳೆದಿದ್ದಾರೆ. ನನ್ನ ಮೇಲಿನ ಆರೋಪಗಳು ನನಗೆ ತುಂಬಾ ನೋವುಂಟು ಮಾಡಿದೆ ಎಂದು ಹನ್ಸಿಕಾ ಹೇಳಿದ್ದಾರೆ. ನಾನು ಹಾರ್ಮೋನ್‌ ಇಂಜೆಕ್ಷನ್‌ ತೆಗೆದುಕೊಂಡೆ ಎಂಬ ವದಂತಿಗಳು ನನಗೆ ನೋವುಂಟು ಮಾಡಿದೆ ಎಂದು ಹನ್ಸಿಕಾ ಹೇಳಿದ್ದಾರೆ.

ಈ ಬಗ್ಗೆ ಹನ್ಸಿಕಾ ತಾಯಿ ಕೂಡ ಪ್ರತಿಕ್ರಿಯಿಸಿದ್ದಾರೆ. ಮೂಳೆ ಸಾಂದ್ರತೆಯನ್ನು ಹೆಚ್ಚಿಸಲು ಚುಚ್ಚುಮದ್ದು ಇದೆಯೇ? ಯಾವ ತಾಯಿಯಾದರೂ ಹೀಗೆ ಮಾಡುತ್ತಾಳೆಯೇ ಎಂದು ನೋವು ಹೇಳಿಕೊಂಡಿದ್ದಾರೆ. ಇದು ಹನ್ಸಿಕಾಳ ಬೆಳವಣಿಗೆಯನ್ನು ಸಹಿಸದ ಜನ ಸೃಷ್ಟಿಸಿದ ವದಂತಿಗಳು ಎಂದು ಹನ್ಸಿಕಾ ತಾಯಿ ಮೋನಾ ಮೋಟ್ವಾನಿ ಹೇಳಿದ್ದಾರೆ.

ಸ್ಟಾರ್ ಪಟ್ಟ ಸಿಗದಿದ್ದರೂ ಜನಮನದಲ್ಲಿ ಸ್ಥಾನ ಗಳಿಸಿದ್ದಾಳೆ ಹನ್ಸಿಕಾ. ಟಾಲಿವುಡ್ ಪ್ರೇಕ್ಷಕರು ಆಕೆಯ ಮೋಡಿಗಳಿಗೆ ಮುಗಿಬಿದ್ದರು. ಕಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಮಿಂಚಿದ್ದ ಈ ಮೋಹನಾಂಗಿ ಹಲವು ಹಿಟ್ ಚಿತ್ರಗಳ ಭಾಗವಾಗಿದ್ದಾಳೆ.

ಇದನ್ನೂ ಓದಿ:  ಟ್ರಾನ್ಸ್‌ಜೆಂಡರ್ ಆಗಿ ನಟಿಸಿದ ಅನುಭವ ಬಿಚ್ಚಿಟ್ಟ ನವಾಜುದ್ದೀನ್ ಸಿದ್ದಿಕಿ

ಹನ್ಸಿಕಾ ಕಳೆದ ವರ್ಷ ಡಿಸೆಂಬರ್ 4 ರಂದು ರಾಜಸ್ಥಾನದ ಜೈಪುರದ ಮುಂಡೋಟಾ ಫೋರ್ಟ್ ಪ್ಯಾಲೇಸ್‌ನಲ್ಲಿ ಸೊಹೈಲ್ ಖತುರಿಯಾ ಅವರನ್ನು ವಿವಾಹವಾದರು. ಸಾಂಪ್ರದಾಯಿಕ ವಿವಾಹ ಸಮಾರಂಭದಲ್ಲಿ ಹಸೆಮಣೆ ಏರಿದರು. ಸದ್ಯ ಅವರ ಜೊತೆ ವೈವಾಹಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ ಈ ಬ್ಯೂಟಿ ತನ್ನದೇ ಆದ ಯೂಟ್ಯೂಬ್ ಚಾನೆಲ್ ಕೂಡ ಆರಂಭಿಸಿದ್ದಾರೆ. ಕಾಲಕಾಲಕ್ಕೆ ತನ್ನ ಇತ್ತೀಚಿನ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲ್‌ಚಲ್‌ ಸೃಷ್ಟಿಸುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News