ಮನೆಯಲ್ಲಿಯೇ ಇದ್ದು ಫಿಟ್ ನೆಸ್ ಕಾಯ್ದುಕೊಳ್ಳುವುದು ಹೇಗೆ? ಇಲ್ಲಿದೆ ನಟಿ ಮಲೈಕಾ ಸ್ಟೋರಿ

ಬಾಲಿವುಡ್ ನಟಿ ಮಲೈಕಾ ಅರೋರಾ ಫಿಟ್ನೆಸ್ ಉತ್ಸಾಹಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ , ಈಗಲೂ ಅವರು ತಮ್ಮ ಫಿಟ್ ನೆಸ್ ಮೂಲಕ ಇತ್ತೀಚಿಗೆ ಬಾಲಿವುಡ್ ಗೆ ಕಾಲಿಟ್ಟ ನಟಿಯರೂ ನಾಚುವ ಹಾಗೆ ಫಿಟ್ ನೆಟ್ ನ್ನು ಕಾಪಾಡಿಕೊಂಡಿದ್ದಾರೆ.

Updated: Apr 4, 2020 , 04:00 PM IST
ಮನೆಯಲ್ಲಿಯೇ ಇದ್ದು ಫಿಟ್ ನೆಸ್ ಕಾಯ್ದುಕೊಳ್ಳುವುದು ಹೇಗೆ? ಇಲ್ಲಿದೆ ನಟಿ ಮಲೈಕಾ ಸ್ಟೋರಿ
Photo Courtsey : Instagram

ನವದೆಹಲಿ:ಬಾಲಿವುಡ್ ನಟಿ ಮಲೈಕಾ ಅರೋರಾ ಫಿಟ್ನೆಸ್ ಉತ್ಸಾಹಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ , ಈಗಲೂ ಅವರು ತಮ್ಮ ಫಿಟ್ ನೆಸ್ ಮೂಲಕ ಇತ್ತೀಚಿಗೆ ಬಾಲಿವುಡ್ ಗೆ ಕಾಲಿಟ್ಟ ನಟಿಯರೂ ನಾಚುವ ಹಾಗೆ ಫಿಟ್ ನೆಟ್ ನ್ನು ಕಾಪಾಡಿಕೊಂಡಿದ್ದಾರೆ.

ಈಗ ಕೊರೊನಾ ವೈರಸ್ ಭೀತಿಯಿಂದಾಗಿ ಮನೆಯಲ್ಲಿ ಯೋಗಾಭ್ಯಾಸ ಮಾಡುತ್ತಿರುವ ನಟಿ ಸಾಮಾಜಿಕ ಅಂತರವನ್ನು ಪಾಲಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಹೊರಗಡೆ ಎಲ್ಲಿಯೂ ಹೋಗದೆ ಮನೆಯಲ್ಲಿಯೇ ಇದ್ದುಕೊಂಡು ಫಿಟ್ನೆಸ್ ನ್ನ ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದರ ಕುರಿತಾಗಿ ಈಗ ಅವರು ತಮ್ಮ ಇನ್ಸ್ಟಾಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಮಲೈಕಾ ಇನ್ಸ್ಟಾ ವೀಡಿಯೊ ಶೀರ್ಷಿಕೆ ಪೋಸ್ಟ್‌ನಲ್ಲಿ : #workoutfromhome ಪವರ್ ಯೋಗ ಅನುಕ್ರಮ @reebokindia ನೀವು ಫಿಟ್ಟರ್ ಆಗಿದ್ದೀರಿ, ನೀವು ಉತ್ತಮವಾಗಿ ಭಾವಿಸುತ್ತೀರಿ ನಾನು ಮನೆಯಲ್ಲಿದ್ದಾಗಲೂ ನಾನು ಹೇಗೆ # ಕಮಿಟೆಡ್ ಟು ಫಿಟ್‌ನೆಸ್ ಆಗಿರುತ್ತೇನೆ ಎಂದು ತಿಳಿಯಲು ಈ ವೀಡಿಯೊವನ್ನು ನೋಡಿ! #WorkOUTfromHome #StayFitStayHealthy' ಎಂದು ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಗ್ಲಾಮ್ ದಿವಾ ಮಲೈಕಾ ಆರೋರಾ ದಿವಾ ಯೋಗ ಕೇಂದ್ರದ ಹೆಸರಿನಿಂದ ಯೋಗ ಸ್ಟುಡಿಯೋವನ್ನು ನಡೆಸುತ್ತಾರೆ ಮತ್ತು ದೇಹ, ಮನಸ್ಸು ಮತ್ತು ಆತ್ಮವನ್ನು ಸಮತೋಲನದಲ್ಲಿಡಲು  ಆಗಾಗ ತಮ್ಮ ವಿಶಿಷ್ಟಯೋಗದ ಆಸನಗಳನ್ನು ಆಗಾಗ್ಗೆ ತಮ್ಮ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಾರೆ.