ಗುಟ್ಟಾಗಿ ತಮ್ಮ ಗೆಳತಿಯನ್ನು ಮದುವೆಯಾದ್ರ ಹೃತಿಕ್‌ ರೋಷನ್‌? ಸ್ಟಾರ್‌ ನಟನ ಪೋಸ್ಟ್‌ ಫುಲ್‌ ವೈರಲ್‌!

Hrithik roshan: ಬಾಲಿವುಡ್‌ನ ಸ್ಟಾರ್‌ ನಟ ಹೃತಿಕ್‌ ರೋಷನ್‌ ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದು ಹಲವು ವರ್ಷಗಳು ಕಳೆದಿದೆ, ಇದೀಗ ನಟ ಮಾಡೆಲ್‌ ಒಬ್ಬರನ್ನು ಪ್ರೀತಿ ಮಾಡುತ್ತಿದ್ದು, ಈ ಜೋಡಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಚರ್ಚೆಯಾಗುತ್ತಿದೆ, ಇದಕ್ಕೆ ಕಾರಣವಾಗಿರುವುದು ಸಾಮಾಜಿಕ ಜಾಲತಾಣದಲ್ಲಿ ಅವರು ಮಾಡಿರುವ ಅದೊಂದು ಪೋಸ್ಟ್‌.   

Written by - Zee Kannada News Desk | Last Updated : Oct 3, 2024, 07:58 AM IST
  • ಹೃತಿಕ್‌ ರೋಷನ್‌ ತಮ್ಮ ಮೊದಲ ಪತ್ನಿ ಸುಸ್ಸಾನ್ನೆ ಖಾನ್ ಅವರ ಜೊತೆ ವಿಚ್ಛೇದನ ಪಡೆದ ನಂತರ ಸಬಾ ಆಜಾದ್ ಅವರ ಜೊತೆ ಡೇಟಿಂಗ್‌ ಮಾಡುತ್ತಿರುವುದು ಗೊತ್ತೇ ಇದೆ.
  • ಜೋಡಿ ಸಾಮಾಜಿಕ ಜಾಲತಾಣದಲ್ಲಿ ಅನಿವರ್ಸರಿ ಕುರಿತು ಪೋಸ್ಟ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ.
  • ಈ ಜೋಡಿ ಯಾರಿಗೂ ಗತ್ತಿಲ್ಲದೆ, ರಹಸ್ಯವಾಗಿ ಮದುವೆಯಾಗಿದ್ದಾರಾ? ಎಂದು ಅನುಮಾನಿಸುತ್ತಿದ್ದಾರೆ.
ಗುಟ್ಟಾಗಿ ತಮ್ಮ ಗೆಳತಿಯನ್ನು ಮದುವೆಯಾದ್ರ ಹೃತಿಕ್‌ ರೋಷನ್‌? ಸ್ಟಾರ್‌ ನಟನ ಪೋಸ್ಟ್‌ ಫುಲ್‌ ವೈರಲ್‌!  title=

Hrithik roshan: ಬಾಲಿವುಡ್‌ನ ಸ್ಟಾರ್‌ ನಟ ಹೃತಿಕ್‌ ರೋಷನ್‌ ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದು ಹಲವು ವರ್ಷಗಳು ಕಳೆದಿದೆ, ಇದೀಗ ನಟ ಮಾಡೆಲ್‌ ಒಬ್ಬರನ್ನು ಪ್ರೀತಿ ಮಾಡುತ್ತಿದ್ದು, ಈ ಜೋಡಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಚರ್ಚೆಯಾಗುತ್ತಿದೆ, ಇದಕ್ಕೆ ಕಾರಣವಾಗಿರುವುದು ಸಾಮಾಜಿಕ ಜಾಲತಾಣದಲ್ಲಿ ಅವರು ಮಾಡಿರುವ ಅದೊಂದು ಪೋಸ್ಟ್‌. 

ಹೃತಿಕ್‌ ರೋಷನ್‌ ತಮ್ಮ ಮೊದಲ ಪತ್ನಿ  ಸುಸ್ಸಾನ್ನೆ ಖಾನ್ ಅವರ ಜೊತೆ  ವಿಚ್ಛೇದನ ಪಡೆದ ನಂತರ ಸಬಾ ಆಜಾದ್ ಅವರ ಜೊತೆ ಡೇಟಿಂಗ್‌ ಮಾಡುತ್ತಿರುವುದು ಗೊತ್ತೇ ಇದೆ, ಈ ನಡುವೆ ಈ ಜೋಡಿ ಬ್ರೇಕಪ್‌ ಮಾಡಿಕೊಂಡಿದ್ದಾರೆ ಎನ್ನುವ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು, ಆದರೆ ಇದೀಗ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಅನಿವರ್ಸರಿ ಕುರಿತು ಪೋಸ್ಟ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ, ಈ ಪೋಸ್ಟ್‌ ನೋಡಿದ ನೆಟ್ಟಿಗರು ಈ ಜೋಡಿ ಯಾರಿಗೂ ಗೊತ್ತಿರದ ಹಾಗೆ ಮದುವೆಯಾಗಿದ್ದಾರಾ ಎಂಬುದರ ಕುರಿತು ಚರ್ಚೆಗಳನ್ನು ಆರಂಭಿಸಿದ್ದಾರೆ. 

ನಟ ಹೃತಿಕ್‌ ರೋಷನ್‌ ಹಾಗೂ ಸಬಾ ಆಜಾದ್ ಹಲವು ವರ್ಷಗಳಿಂದ ಪರಸ್ಪರ ಡೇಟಿಂಗ್‌ ಮಾಡುತ್ತಿದ್ದಾರೆ, ಈ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್‌ ಆಗುತ್ತಾ ಇರುತ್ತವೆ. ಇದೀಗ ಅಂತಹದ್ದೆ ಒಂದು ಪೋಸ್ಟ್‌ನ ಮೂಲಕ ಈ ಜೋಡಿ ಸುದ್ದಿಯಲ್ಲಿದ್ದಾರೆ. ಈ ಪೋಸ್ಟ್‌ನಲ್ಲಿ ಹೃತಿಕ್‌ ಜೊತೆಗಿರುವ ಫೋಟೋವನ್ನು ಆತನ ಗೆಳತಿ ಸಬಾ ಆಜಾದ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ಶೀರ್ಷಿಕೆಯಲ್ಲಿ 'ಹ್ಯಾಪಿ ಆನಿವರ್ಸರಿ ಪಾರ್ಟ್ನರ್...' ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಶಾಕ್‌ ಆಗಿದ್ದಾರೆ.  

ಈ ಪೋಸ್ಟ್‌ಗೆ ಹೃತಿಕ್ ಅವರ ಮೊದಲ ಪತ್ನಿ ಸುಸಾನೆ ಖಾನ್ ಕೂಡ ಕಾಮೆಂಟ್ ಮಾಡಿದ್ದಾರೆ. 'ಸೂಪರ್ ಫೋಟೋ...'ಎಂದು ನಟನ ಮಾಜಿ ಪತ್ನಿ ಈ ಫೋಟೋಗೆ ಕಾಮೆಂಟ್‌ ಮಾಡಿದ್ದು, ಈ ಒಂದು ಪೋಸ್ಟ್‌ ಹಲವರಿಗೆ ಶಾಕ್‌ ಮೇಲೆ ಶಾಕ್‌ ಕೊಟ್ಟಿದೆ.  ಹೃತಿಕ್ ಸಹೋದರಿ ಪಶ್ಮಿನಾ ಕೂಡ 'ಓ ಮೈ ಡೇ...' ಎಂದು ಕಾಮೆಂಟ್ ಮಾಡಿದ್ದಾರೆ. ಇಷ್ಟೇ ಅಲ್ಲ, ಸಬಾ ನಟನೊಂದಿಗಿನ ಚಿತ್ರವನ್ನು ಪೋಸ್ಟ್ ಮಾಡಿ '3 ವರ್ಷಗಳ ಜೊತೆಗಾರನಿಗೆ ಅನಿವರ್ಸಿಯ ಶುಭಾಶಯಗಳುʼ ಎಂದು ಬರೆದುಕೊಂಡಿದ್ದಾರೆ, ಇದನ್ನು ನೋಡಿದ ಅಭಿಮಾನಿಗಳು ಈ ಜೋಡಿ ಯಾರಿಗೂ ಗತ್ತಿಲ್ಲದೆ, ರಹಸ್ಯವಾಗಿ ಮದುವೆಯಾಗಿದ್ದಾರಾ? ಎಂದು ಅನುಮಾನಿಸುತ್ತಿದ್ದಾರೆ. 

ಹೃತಿಕ್ - ಸಬಾ ಅವರ ವಾರ್ಷಿಕೋತ್ಸವದ ಪೋಸ್ಟ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅವರಿಬ್ಬರೂ ಮದುವೆಯಾಗಲಿಲ್ಲವೇ? ಹೀಗೊಂದು ಚರ್ಚೆ ಸದ್ಯ ಅಭಿಮಾನಿಗಳಲ್ಲಿ ನಡೆಯುತ್ತಿದೆ. ನಟನ ಅಭಿಮಾನಿಯೊಬ್ಬರು, 'ಕೊನೆಗೆ ಮದುವೆ ಯಾವಾಗ ನಡೆಯಿತು?' ಎಂದು ಪ್ರತಿಕ್ರಿಯಿಸಿದ್ದಾರೆ, ಮತ್ತೊಬ್ಬ ನೆಟಿಜನ್, 'ಇಬ್ಬರೂ ಮದುವೆಯಾಗಿದ್ದಾರೆಯೇ?'ಎಂದು ಬರೆಯುವ ಮೂಲಕ ತಮ್ಮಗಿದ್ದ ಅನುಮಾನಗಳನ್ನು ಕಾಮೆಂಟ್‌ನ ಮೂಲಕ ಹೊರಹಾಕುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News