"ಕರಿಯರ್‌ನಲ್ಲಿ ಪ್ರಮೋಷನ್ ಬೇಕಂದ್ರೆ ಬ್ರಾಡ್‌ ಆಗಿ ಯೋಚಿಸ್ಬೇಕು" ಬೋಲ್ಡ್ ಸೀನ್ಸ್ ಬಗ್ಗೆ ತಮನ್ನಾ ಹೀಗಂದಿದ್ದೇಕೆ..?

Tamannah on bold scenes : ಇತ್ತೀಚೆಗೆ ಸದಾ ಸುದ್ದಿಯಲ್ಲಿರುವ ನಟಿ ತಮನ್ನಾ ಬೋಲ್ಡ್‌ ಆಗಿ ಕಾಣಿಸಿಕೊಂಡು ಎಲ್ಲರ ಹುಬ್ಬೇರಸಿಸದ್ದರು. ಇದೀಗ ನಟಿ ಹಾಟ್‌ ಕಾಮೆಂಟ್‌ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಕರಿಯರ್‌ನಲ್ಲಿ ಬೆಳಿಬೇಕು ಎಂದರೇ ಬ್ರಾಡ್‌ ಮೈಂಡೆಡ್‌ ಆಗಿ ಇರಬೇಕು ಎಂದಿದ್ದಾರೆ.  

Written by - Savita M B | Last Updated : Aug 6, 2023, 11:16 AM IST
  • ಸೌತ್‌ ಸುಂದರಿ ತಮನ್ನಾ ತೆರೆ ಮೇಲೆ ಮೈಚಳಿ ಬಿಟ್ಟು ಬೋಲ್ಡ್‌ ಆಗಿ ನಟಿಸುತ್ತಿದ್ದಾರೆ.
  • ತಮನ್ನಾ ಬಾಟಿಯಾ ಅವರ 2 ದೊಡ್ಡ ಸಿನಿಮಾಗಳು ರಿಲೀಸ್ ಆಗಲಿವೆ.
  • ಸದ್ಯ ತಮನ್ನಾ ಹಾಟ್‌ ಕಾಮೆಂಟ್‌ ಕೊಟ್ಟು ಮತ್ತೆ ಸುದ್ದಿಯಲ್ಲಿದ್ದಾರೆ
"ಕರಿಯರ್‌ನಲ್ಲಿ ಪ್ರಮೋಷನ್ ಬೇಕಂದ್ರೆ ಬ್ರಾಡ್‌ ಆಗಿ ಯೋಚಿಸ್ಬೇಕು" ಬೋಲ್ಡ್ ಸೀನ್ಸ್ ಬಗ್ಗೆ ತಮನ್ನಾ ಹೀಗಂದಿದ್ದೇಕೆ..?  title=

Tamannah : ಸೌತ್‌ ಸುಂದರಿ ತಮನ್ನಾ ನೋ ಕಿಸ್ಸಿಂಗ್‌ ರೂಲ್ಸ್‌ ಬ್ರೇಕ್‌ ಮಾಡಿ ತೆರೆ ಮೇಲೆ ಮೈಚಳಿ ಬಿಟ್ಟು ಬೋಲ್ಡ್‌ ಆಗಿ ನಟಿಸುತ್ತಿದ್ದಾರೆ. ಸದ್ಯ ಮುಂದಿನ ವಾರ ಒಂದೇ ದಿನದ ಅಂತರದಲ್ಲಿ ತಮನ್ನಾ ಬಾಟಿಯಾ ಅವರ 2 ದೊಡ್ಡ ಸಿನಿಮಾಗಳು ರಿಲೀಸ್ ಆಗಲಿವೆ.

ಇನ್ನು ಆಗಸ್ಟ್ 10ಕ್ಕೆ ತಮನ್ನಾ ನಟನೆಯ 'ಜೈಲರ್' ಸಿನಿಮಾ ರಿಲೀಸ್ ಆಗಲಿದ್ದು, ಮಿಲ್ಕಿ ಬ್ಯೂಟಿ ರಜನಿಕಾಂತ್‌ ಜೊತೆ ನಟಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಕಾವಾಲಾ ಸಾಂಗ್‌ ರಿಲೀಸ್‌ ಆಗಿ ಸಾಕಷ್ಟು ಸದ್ದು ಮಾಡುತ್ತಿದೆ. ನೆಲ್ಸನ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದು, ಅಭಿಮಾನಿಗಳು ಈ ಚಿತ್ರಕ್ಕಾಗಿ ಎದುರುನೋಡುತ್ತಿದ್ದಾರೆ.

ತಮನ್ನಾ ನಟಿಸಿರುವ ಮತ್ತೊಂದು ಸಿನಿಮಾ ತೆಲುಗಿನ ಭೋಳಾ ಶಂಕರ ಸಿನಿಮಾ ತೆರೆಗ ಅಪ್ಪಳಿಸಲಿದೆ. ಈ ಚಿತ್ರದಲ್ಲಿ ಮೆಗಾಸ್ಟಾರ್‌ ಚಿರಂಜೀವಿ ಜೊತೆ ತಮನ್ನಾ ತೆರೆ ಹಂಚಿಕೊಂಡಿದ್ದಾರೆ. ಸದ್ಯ ಈ ಎರಡು ಸಿನಿಮಾ ಪ್ರಮೋಷನ್‌ನಲ್ಲಿ ನಟಿ ಸಖತ್‌ ಬ್ಯೂಸಿಯಾಗಿದ್ದಾರೆ. 

ಇದನ್ನೂ ಓದಿ-Ileana D'Cruz: ಮದುವೆಗೂ ಮುನ್ನವೇ ಮುದ್ದಾದ ಮಗುವಿಗೆ ಜನ್ಮ ನೀಡಿದ ಗೋವಾ ಬ್ಯೂಟಿ..ಹೆಸರೇನು ಗೊತ್ತಾ..?

ಇತ್ತೀಚೆಗೆ ತೆಲುಗು ಸಂದರ್ಶನದಲ್ಲಿ ಮಾತನಾಡಿದ ತಮನ್ನಾ "ನಾವು ಬದಲಾಗದಿದ್ದರೆ ಎಲ್ಲಿ ಇದ್ದೇವೋ ಅಲ್ಲೆ ಇರಬೇಕಾಗುತ್ತದೆ. ಆ ರೀತಿ ಇರಲು ಯಾರು ಇಚ್ಚಿಸುವುದಿಲ್ಲ. ಎಲ್ಲರೂ ತಮ್ಮ ಕರಿಯರ್‌ನಲ್ಲಿ ಬೆಳೆಯಬೇಕು ಎಂದುಕೊಳ್ಳುತ್ತಾರೆ. ಪ್ರತಿ ಕೆಲಸದಲ್ಲಿಯೂ ಪ್ರಮೋಷನ್‌ ಇರುತ್ತೆ ಅದಕ್ಕಾಗಿ ಸ್ವಲ್ಪ ಬ್ರಾಡ್‌ ಆಗಿ ಯೋಚಿಸಬೇಕು, ಹೊಸ ಪ್ರಯತ್ನ ಮಾಡಬೇಕು ಆಗ ಮಾತ್ರ ನಮ್ಮ ಸಿನಿ ಜರ್ನಿ ಸುದೀರ್ಘವಾಗಿರುತ್ತದೆ" ಎಂದು ತಮನ್ನಾ ಹೇಳಿದ್ದಾರೆ. 

ನಟಿ ತಮನ್ನಾ ಇತ್ತೀಚೆಗೆ 'ಜೀ ಕರ್ದಾ' ಹಾಗೂ 'ಲಸ್ಟ್ ಸ್ಟೋರಿಸ್-2' ವೆಬ್ ಸೀರಿಸ್‌ನಲ್ಲಿ ಸಖತ್‌ ಬೋಲ್ಡ್‌ ಆಗಿ ನಟಿಸಿದ್ದಾರೆ. "ನಮ್ಮ ಸುತ್ತ ಜನ ಏನೇನೋ ಮಾತಾನಾಡುತ್ತಾರೆ ಅದರಲ್ಲಿ ಯಾವುದು ಸರಿ..? ಯಾವುದು ತಪ್ಪು..? ಎಂದು ಮೊದಲು ನಾವು ತಿಳಿದುಕೊಳ್ಳಬೇಕು. ನಾನು ನಟಿಸಿರುವ 2 ಬೋಲ್ಡ್‌ ಸಿನಿಮಾಗಳ ಬಗ್ಗೆ ಕೆಲವರು ಚೆನ್ನಾಗಿದೆ ಎಂದರು..ಮುಖ್ಯವಾಗಿ ಮಹಿಳೆಯರು ವೆಬ್‌ ಸಿರೀಸ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅಷ್ಟು ಸಾಕು. ಇನ್ನು ಸದ್ಯಕ್ಕೆ ಮದುವೆ ಆಲೋಚನೆ ಇಲ್ಲ. ಮದುವೆ ಫಿಕ್ಸ್ ಆದ್ರೆ ಹೇಳ್ತೀನಿ" ಎಂದಿದ್ದಾರೆ ಮಿಲ್ಕಿ ಬ್ಯೂಟಿ. 

ಇದನ್ನೂ ಓದಿ-ಅನುಷ್ಕಾ ಅಲ್ಲ…“ನಾನು ಆ ನಟಿಯನ್ನ ಅನೇಕ ವರ್ಷಗಳಿಂದ ಲವ್ ಮಾಡ್ತಿದ್ದೇನೆ”: ಪ್ರಭಾಸ್ ಹೇಳಿದ್ದು ಯಾರ ಬಗ್ಗೆ?

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News