I love you: ಶ್ರೀದೇವಿ ಜನ್ಮದಿನದಂದು ಜಾಹ್ನವಿ ಭಾವನಾತ್ಮಕ ಪೋಸ್ಟ್!

ದುಬೈನ ಹೋಟೆಲ್ ಸ್ನಾನದತೊಟ್ಟಿಯಲ್ಲಿ ಆಕಸ್ಮಿಕವಾಗಿ ಮುಳುಗಿ ಶ್ರೀದೇವಿ 2018 ರ ಫೆಬ್ರವರಿಯಲ್ಲಿ ನಿಧನರಾದರು. ಇಂದು (ಆಗಸ್ಟ್ 13) ಶ್ರೀದೇವಿಯವರ 56ನೇ ವರ್ಷದ ಹುಟ್ಟುಹಬ್ಬ. 

Last Updated : Aug 13, 2019, 11:36 AM IST
I love you: ಶ್ರೀದೇವಿ ಜನ್ಮದಿನದಂದು ಜಾಹ್ನವಿ ಭಾವನಾತ್ಮಕ ಪೋಸ್ಟ್! title=
Image Courtesy: Instagram/@janhvikapoor

ನವದೆಹಲಿ: ದಿವಂಗತ ನಟಿ ಶ್ರೀದೇವಿ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಅವರ ಪುತ್ರಿ ನಟಿ ಜಾಹ್ನವಿ ಕಪೂರ್ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಜಾಹ್ನವಿ ಶ್ರೀದೇವಿಯ ಥ್ರೋಬ್ಯಾಕ್ ಫೋಟೋವನ್ನು "ಹುಟ್ಟುಹಬ್ಬದ ಶುಭಾಶಯಗಳು, ಅಮ್ಮ. ನಾನು ನಿನ್ನನ್ನು ಪ್ರೀತಿಸುತ್ತೇನೆ(I love you)" ಎಂಬ ಹೃದಯಸ್ಪರ್ಶಿ ಬರವಣಿಗೆಯೊಂದಿಗೆ ಹಂಚಿಕೊಂಡಿದ್ದಾರೆ.

ದುಬೈನ ಹೋಟೆಲ್ ಸ್ನಾನದತೊಟ್ಟಿಯಲ್ಲಿ ಆಕಸ್ಮಿಕವಾಗಿ ಮುಳುಗಿ ಶ್ರೀದೇವಿ 2018 ರ ಫೆಬ್ರವರಿಯಲ್ಲಿ ನಿಧನರಾದರು. ಇಂದು (ಆಗಸ್ಟ್ 13) ಶ್ರೀದೇವಿಯವರ 56ನೇ ವರ್ಷದ ಹುಟ್ಟುಹಬ್ಬ. 

ತಾಯಿಯ ಜನ್ಮದಿನದಂದು ಮಗಳು ಜಾಹ್ನವಿ ಅವರ ಪೋಸ್ಟ್:

 
 
 
 

 
 
 
 
 
 
 
 
 

Happy birthday Mumma, I love you

A post shared by Janhvi Kapoor (@janhvikapoor) on

ಮಕ್ಕಳೊಂದಿಗೆ ಶ್ರೀದೇವಿ ಭಾವಚಿತ್ರಗಳು

ತಿರುಪತಿ ದೇವಸ್ಥಾನದಲ್ಲಿ ತೆಗೆಸಿಕೊಂಡಿರುವ ತಮ್ಮ ಫೋಟೋವನ್ನೂ ಕೂಡ ಜಾಹ್ನವಿ ಈ ಫೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿ ಅವಳು ಆಗಾಗ್ಗೆ ತನ್ನ ಕುಟುಂಬದೊಂದಿಗೆ ಪ್ರಾರ್ಥನೆ ಮಾಡಲು ಹೋಗುತ್ತಾರೆ. ಆದರೆ, ಈ ಫೋಟೋ ಹಳೆಯದೋ ಅಥವಾ ಇತ್ತೀಚಿನದ್ದೋ ಎಂಬುದು ಸ್ಪಷ್ಟವಾಗಿಲ್ಲ.

 
 
 
 

 
 
 
 
 
 
 
 
 

💚

A post shared by Janhvi Kapoor (@janhvikapoor) on

ಜಾಹ್ನವಿಯಲ್ಲದೆ, ಶ್ರೀದೇವಿಯನ್ನು ಅವರ ಅತ್ತಿಗೆ ಸುನೀತಾ (ಅನಿಲ್ ಕಪೂರ್ ಅವರ ಪತ್ನಿ) ಮತ್ತು ಮಹೀಪ್ (ಸಂಜಯ್ ಕಪೂರ್ ಅವರ ಪತ್ನಿ) ಕೂಡ ಸ್ಮರಿಸಿದ್ದಾರೆ.

ಸುನೀತಾ ದಿವಂಗತ ಮೆಗಾಸ್ಟಾರ್ ಅವರೊಂದಿಗೆ ಒಂದು ಸುಂದರವಾದ ಚಿತ್ರವನ್ನು ಹಂಚಿಕೊಂಡರೆ, ಮಹೀಪ್ ತಮ್ಮ ಕುಟುಂಬದ ಸದಸ್ಯರೊಂದಿಗೆ ಶ್ರೀದೇವಿಯ ಚಿತ್ರಗಳ ಸೆಟ್ ಅನ್ನು ಪೋಸ್ಟ್ ಮಾಡಿದ್ದಾರೆ.

"ನೆನಪುಗಳು ಯಾವಾಗಲೂ ವಿಶೇಷ. ಕೆಲವೊಮ್ಮೆ ನಾವು ಅಳುತ್ತಿದ್ದ ಸಮಯಗಳನ್ನು ನೆನಪಿಸಿಕೊಳ್ಳುವುದರ ಮೂಲಕ ನಾವು ನಗುತ್ತೇವೆ ಮತ್ತು ನಾವು ನಗುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳುವುದರ ಮೂಲಕ ನಾವು ಅಳುತ್ತೇವೆ !!! ಅದು ಜೀವನ. ಜನ್ಮದಿನದ ಶುಭಾಶಯಗಳು, ಶ್ರೀ .. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ" ಎಂದು ಸುನೀತಾ ಅವರ ಪೋಸ್ಟ್ ನಲ್ಲಿ ಬರೆಯಲಾಗಿದೆ.

 
 
 
 

 
 
 
 
 
 
 
 
 

♥️

A post shared by Maheep Kapoor (@maheepkapoor) on

ಶ್ರೀದೇವಿ ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದರು. ಜಾಹ್ನವಿ ಅವರಲ್ಲದೆ, ಅವರಿಗೆ ಖುಷಿ ಎಂಬ ಮಗಳೂ ಇದ್ದಾರೆ.

ಶ್ರೀದೇವಿ ಅವರ ಕೊನೆಯ ಚಿತ್ರ 'MOM', ಇದಕ್ಕಾಗಿ ಶ್ರೀದೇವಿಯವರಿಗೆ ಮರಣೋತ್ತರವಾಗಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Trending News