'ಜೈಲರ್'.. ರಜಿನಿಕಾಂತ್ ಕತ್ತಿನಲ್ಲಿರೋ ಡಾಲರ್ ಹೇಳುತ್ತೆ ಎಮೋಷನಲ್ ಸ್ಟೋರಿ..!

Jailer Film Review: ನಟ ರಜನಿಕಾಂತ್ ಹಾಗೂ ಡಾ. ಶಿವರಾಜ್‌ಕುಮಾರ್ ನಟನೆಯ ಬಹುನಿರೀಕ್ಷಿತ  'ಜೈಲರ್' ಸಿನಿಮಾ ಫೈನಲಿ ತೆರೆ ಕಂಡು ದಿಲ್ ಖುಷ್ ಆಗಿಸೋದ್ರ ಜೊತೆಗೆ  ಕ್ಲೈಮ್ಯಾಕ್ ಕಣ್ಣೀರು ತರಿಸಿದೆ. 

Written by - YASHODHA POOJARI | Edited by - Yashaswini V | Last Updated : Aug 10, 2023, 04:15 PM IST
  • ಜೈಲರ್ ಸಿನಿಮಾದಲ್ಲಿ ರಜಿನಿಕಾಂತ್ ಅವರಿಗೆ ಮಗ ಅಂದ್ರೆ ಎಮೋಷನಲ್.
  • ಮಗನಿಗೆ ನ್ಯಾಯ ನೀತಿ ಅಂತ ಪಾಠ ಹೇಳಿ ಬೆಳೆಸಿ ಪೊಲೀಸ್ ಅಧಿಕಾರಿ ಮಾಡಿರುತ್ತಾರೆ.
  • ಕೊನೆಗೆ ಮಗ ಕಾಣೆಯಾಗುತ್ತಾನೆ. ಪ್ರೀತಿಯ ಮಗನಿಗೆ ಏನಾಯ್ತು ಅಂತ ಹುಡುಕಾಟ ಶುರುವಾದಾಗ
'ಜೈಲರ್'.. ರಜಿನಿಕಾಂತ್ ಕತ್ತಿನಲ್ಲಿರೋ ಡಾಲರ್ ಹೇಳುತ್ತೆ ಎಮೋಷನಲ್ ಸ್ಟೋರಿ..! title=
Jailer Movie Review

Jailer Film Review: ದೇಶದಾದ್ಯಂತ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಹ್ಯಾಟ್ರಿಕ್ ಹೀರೋ ಡಾ ಶಿವರಾಜ್‌ಕುಮಾರ್ ನಟನೆಯ 'ಜೈಲರ್' ಸಿನಿಮಾ ರಿಲೀಸ್ ಆಗಿದೆ. ಬೆಳ್ಳಂ ಬೆಳಗ್ಗೆ ರಜನಿ ಅಭಿಮಾನಿಗಳು ಸಿನಿಮಾ ನೋಡಿ ಕಣ್ತುಂಬಿಕೊಂಡಿದ್ದಾರೆ. 

ಹೌದು, ನಟ ರಜನಿಕಾಂತ್ ಹಾಗೂ ಡಾ. ಶಿವರಾಜ್‌ಕುಮಾರ್ ನಟನೆಯ ಬಹುನಿರೀಕ್ಷಿತ  'ಜೈಲರ್' ಸಿನಿಮಾ ಫೈನಲಿ ತೆರೆ ಕಂಡು ದಿಲ್ ಖುಷ್ ಆಗಿಸೋದ್ರ ಜೊತೆಗೆ  ಕ್ಲೈಮ್ಯಾಕ್ ಕಣ್ಣೀರು ತರಿಸಿದೆ. ಯೆಸ್, ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಜೈಲರ್ ಸಿನಿಮಾ ನೋಡಲು ಅಭಿಮಾನಿಗಳು ತುಂಬಾ ಸಮಯದಿಂದ ಕಾತುರರಾಗಿ ಕಾದಿದ್ದರು. ಜೈಲರ್ ಸಿನಿಮಾದಲ್ಲಿ ರಜಿನಿಕಾಂತ್ ಅವರಿಗೆ ಮಗ ಅಂದ್ರೆ ಎಮೋಷನಲ್. ಮಗನಿಗೆ ನ್ಯಾಯ ನೀತಿ ಅಂತ ಪಾಠ ಹೇಳಿ ಬೆಳೆಸಿ ಪೊಲೀಸ್ ಅಧಿಕಾರಿ ಮಾಡಿರುತ್ತಾರೆ. ಕೊನೆಗೆ ಮಗ ಕಾಣೆಯಾಗುತ್ತಾನೆ. ಪ್ರೀತಿಯ ಮಗನಿಗೆ ಏನಾಯ್ತು ಅಂತ ಹುಡುಕಾಟ ಶುರುವಾದಾಗ  ಬ್ಯಾಕ್ ಟು ಬ್ಯಾಕ್ ಕೊಲೆಗಳು ನಡೆಯುತ್ತೆ. ನಂತರ ರಜಿನಿ ರೋಲ್ ಹೇಗಿರುತ್ತೆ ಅನ್ನೋದನ್ನ ಬಿಗ್ ಸ್ಕ್ರೀನ್ ಮೇಲೆ ನೋಡೋದೇ ಮಜಾ ಬಿಡಿ. 

ಇನ್ನೂ 'ಜೈಲರ್' ಸಿನಿಮಾದಲ್ಲಿ ಶಿವಣ್ಣನ ಪಾತ್ರ ಕೂಡ ಆಹಾ! ಓಹೋ! ಅನ್ನುವಂತಿದೆ. ನಟ ಮೋಹನ್ ಲಾಲ್ ಕೂಡ ಈ ಸಿನಿಮಾದಲ್ಲಿ ಮೇಜರ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. 

ಇದನ್ನೂ ಓದಿ- Vaibhavi Jagdish : ಪಡ್ಡೆ ಹುಡುಗರ ಹಾರ್ಟ್‌ಬೀಟ್‌ ಹೆಚ್ಚಸಿದ ಜೈ ಜಗದೀಶ್‌ ಪುತ್ರಿ..ಪೋಟೋಸ್‌ ನೋಡಿ

ಡೈರೆಕ್ಟರ್ ನೆಲ್ಸನ್ ದಿಲೀಪ್‌ಕುಮಾರ್ ಕೆಲಸ ನೋಡಿ ವೀಕ್ಷಕರು ಫುಲ್ ಖುಷ್ ಆಗಿದ್ದಾರೆ. ತಮಿಳುನಾಡಿನಲ್ಲಿ ಮೊದಲ ದಿನವೇ 15 ಕೋಟಿ ರೂಪಾಯಿಯ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಆಗಿತ್ತು. ಈ ಸಿನಿಮಾದಲ್ಲಿ ನಟಿಸಿರುವ ಸ್ಟಾರ್‌ಗಳಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳಿದ್ದು ಅದು ಕೂಡ ಈ ಚಿತ್ರದ ಗೆಲುವಿಗೆ ಕಾರಣ ಎಂತಲೇ ಹೇಳಲಾಗುತ್ತಿದೆ. 

ಜೈಲರ್ ಸಿನಿಮಾದಲ್ಲಿ ತಲೈವಾ ಮ್ಯಾಜಿಕ್ ಮಾಡುತ್ತಾರೆ. ಈ ಸಿನಿಮಾದಲ್ಲಿ ರಜನಿ ಅವರಿಗೊಂದು ಸಿಕ್ರೇಟ್ ಫ್ಲ್ಯಾಶ್‌ಬಾಕ್ ಇರುತ್ತದೆ, ಅದೇ ಈ ಚಿತ್ರದ ಶಕ್ತಿಯಾಗಿದೆ. ಅದುವೇ ರಜಿನಿ ಕಟ್ಟಿನಲ್ಲಿರುವ ಡಾಲರ್. ರಜಿನಿ ಕತ್ತಿನಲ್ಲಿರೋ ಡಾಲರ್ ಕೂಡ ಒಂದು ಎಮೋಷನಲ್ ಕಥೆ ಹೇಳುತ್ತೆ. ಅದೇನು ಅಂತ ನೋಡಬೇಕು ಅಂದ್ರೆ ಥೀಯೇಟರ್ ಗೆ ಬರಬೇಕು.

ಇದನ್ನೂ ಓದಿ- Shraddha Das : ಕಣ್ಮನ ಸೆಳೆಯುತಿದೆ ಕೋಟಿಗೊಬ್ಬ-2 ಚೆಲುವೆಯ ಸೌಂದರ್ಯ..ಪೋಟೋಸ್‌ ನೋಡಿ

ನೆಲ್ಸನ್ ದಿಲೀಪ್‌ಕುಮಾರ್ ಅವರು 'ಜೈಲರ್' ಕಥೆ ಮೇಲೆ ಬಹಳ ನಂಬಿಕೆ ಇಟ್ಟುಕೊಂಡಿದ್ದರು. ಅದಕ್ಕೆ ಈಗ ಸಕ್ಸಸ್ ಕೂಡ ಸಿಕ್ಕಿದೆ. ನೆಲ್ಸನ್ ಸಿನಿಮಾಗಳು ಸದಾ ಎಮೋಶನ್ಸ್ ಸೇರಿ ಸಾಕಷ್ಟು ವಿಷಯಗಳು ಅಡಗಿರುತ್ತವೆ. ಅನಿರುದ್ಧ್ ರವಿಚಂದ್ರ ಅವರು ಮ್ಯೂಸಿಕ್ ವಿಚಾರದಲ್ಲಿ ಮ್ಯಾಜಿಕ್ ಮಾಡುತ್ತಾರೆ. ಈಗಾಗಲೇ ತಮನ್ನಾ ಭಾಟಿಯಾ ಅವರ ಕಾವಾಲಯ್ಯ ಕ್ರೇಜ್ ಎಲ್ಲರಿಗೂ ತಿಳಿದಿರುವಂತಹದ್ದೇ ಆಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News