Janhvi Kapoor: ಮುಂಬೈನಲ್ಲಿ ₹ 39 ಕೋಟಿಯ ಮನೆ ಖರೀದಿಸಿದ ಜಾಹ್ನವಿ ಕಪೂರ್..!

ಜಾಹ್ನವಿ ಅವರ ಹೊಸ ಮನೆ ಜುಹುವಿನಲ್ಲಿದ್ದು ಈ ಕಟ್ಟದಲ್ಲಿ ಮೂರು ಮಹಡಿಗಳಿವೆ. ಡಿಸೆಂಬರ್ 7 ರಂದು ಮನೆ ಖರೀದಿ ಒಪ್ಪಂದವನ್ನು ಫೈನಲ್ ಮಾಡಲಾಗಿತ್ತು

Written by - Zee Kannada News Desk | Last Updated : Jan 5, 2021, 09:23 PM IST
  • ನಟ ಜಾಹ್ನವಿ ಕಪೂರ್ ಅವರು ಮುಂಬೈಯಲ್ಲಿ 39 ಕೋಟಿ ರೂ.ಗಳ ಹೊಸ ಮನೆ ಖರೀದಿಸಿದ್ದಾರೆ.
  • ಜಾಹ್ನವಿ ಅವರ ಹೊಸ ಮನೆ ಜುಹುವಿನಲ್ಲಿದ್ದು ಈ ಕಟ್ಟದಲ್ಲಿ ಮೂರು ಮಹಡಿಗಳಿವೆ. ಡಿಸೆಂಬರ್ 7 ರಂದು ಮನೆ ಖರೀದಿ ಒಪ್ಪಂದವನ್ನು ಫೈನಲ್ ಮಾಡಲಾಗಿತ್ತು
  • ಆಲಿಯಾ ತನ್ನ ಗೆಳೆಯ ರಣಬೀರ್ ಕಪೂರ್ ಅವರ ಮನೆಯ ಸಂಕೀರ್ಣದಲ್ಲಿ ಅಪಾರ್ಟ್ಮೆಂಟ್ ಖರೀದಿಸಿದರೆ, ಹೃತಿಕ್ ಜುಹುದಲ್ಲಿನ ಪೆಂಟ್ ಹೌಸ್ ಅಪಾರ್ಟ್ಮೆಂಟ್‌ಗಾಗಿ ಸುಮಾರು 100 ಕೋಟಿ ರೂ. ವ್ಯಯಿಸಿದ್ದಾರೆ.
Janhvi Kapoor: ಮುಂಬೈನಲ್ಲಿ ₹ 39 ಕೋಟಿಯ ಮನೆ ಖರೀದಿಸಿದ ಜಾಹ್ನವಿ ಕಪೂರ್..! title=
Janhvi Kapoor buys new house (Photo: Zee Media)

ಮುಂಬೈ: ನಟ ಜಾಹ್ನವಿ ಕಪೂರ್ ಅವರು ಮುಂಬೈಯಲ್ಲಿ 39 ಕೋಟಿ ರೂ.ಗಳ ಹೊಸ ಮನೆ ಖರೀದಿಸಿದ್ದಾರೆ. ನಿರ್ಮಾಪಕ ಬೋನಿ ಕಪೂರ್ ಮತ್ತು ಲೇಡಿ ಸೂಪರ್‌ಸ್ಟಾರ್ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಇದುವರೆಗೆ ಎರಡೇ ಸಿನಿಮಾ ಮಾಡಿದ್ದಾರೆ. ಅದರಲ್ಲಿಯೂ ಒಂದು ಕಿರುಚಿತ್ರ.

ಜಾಹ್ನವಿ ಅವರ ಹೊಸ ಮನೆ ಜುಹುವಿನಲ್ಲಿದ್ದು ಈ ಕಟ್ಟದಲ್ಲಿ ಮೂರು ಮಹಡಿಗಳಿವೆ. ಡಿಸೆಂಬರ್ 7 ರಂದು ಮನೆ ಖರೀದಿ ಒಪ್ಪಂದವನ್ನು ಫೈನಲ್ ಮಾಡಲಾಗಿತ್ತು. ದಾಖಲೆಗಳ ಪ್ರಕಾರ ಇದಕ್ಕೆ ಬರೋಬ್ಬರಿ 78 ಲಕ್ಷ ರೂ.ಗಳ ಸ್ಟಾಂಪ್ ಡ್ಯೂಟಿಯನ್ನು ನಟಿ ಪಾವತಿಸಿದ್ದಾರೆ ಎನ್ನಲಾಗಿದೆ.

2018ರಲ್ಲಿ ಧಡಕ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಜಾಹ್ನವಿ ಕೊನೆಯ ಬಾರಿಗೆ ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್ ನಲ್ಲಿ ಕಾಣಿಸಿಕೊಂಡರು. ನಿರ್ದೇಶಕ ಜೋಯಾ ಅಖ್ತರ್ ಅವರ ಗೋಸ್ಟ್ ಸ್ಟೋರೀಸ್‌ನಲ್ಲಿ ಕಾಣಿಸಿಕೊಂಡರು. ಇನ್ನು ದೋಸ್ತಾನಾ 2 ಮತ್ತು ರೂಹಿ ಅಫ್ಜಾನಾ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚೆಗೆ, ನಟಿ ಆಲಿಯಾ ಭಟ್ ಮತ್ತು ಹೃತಿಕ್ ರೋಷನ್ ಇಬ್ಬರೂ ಮುಂಬೈನಲ್ಲಿ ಹೊಸ ಪ್ರಾಪರ್ಟಿ ಖರೀದಿಸಿದ್ದಾರೆಂದು ಹೇಳಲಾಗಿದೆ. ಆಲಿಯಾ ತನ್ನ ಗೆಳೆಯ ರಣಬೀರ್ ಕಪೂರ್ ಅವರ ಮನೆಯ ಸಂಕೀರ್ಣದಲ್ಲಿ ಅಪಾರ್ಟ್ಮೆಂಟ್ ಖರೀದಿಸಿದರೆ, ಹೃತಿಕ್ ಜುಹುದಲ್ಲಿನ ಪೆಂಟ್ ಹೌಸ್ ಅಪಾರ್ಟ್ಮೆಂಟ್‌ಗಾಗಿ ಸುಮಾರು 100 ಕೋಟಿ ರೂ. ವ್ಯಯಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G

Apple Link - https://apple.co/3loQYe

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News