Kaatera Woman Review Video Viral: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಡೈರೆಕ್ಟರ್ ತರುಣ್ ಸುಧೀರ್ ಕಾಂಬಿನೇಷನ್‌ನಲ್ಲಿ ತೆರೆಕಂಡಿರುವ 'ಕಾಟೇರ' ಸಿನಿಮಾಕ್ಕೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನೈಜ್ಯ ಘಟನೆಗಳ ಸುತ್ತ ಕಟ್ಟಿರುವ ಕಥೆಗೆ ಸಿನಿಪ್ರಿಯರು ಭಾವನಾತ್ಮಕವಾಗಿ ಸ್ಪಂದಿಸಿದ್ದಾರೆ. ಈಗಾಗಲೇ ಸಿನಿಮಾ ಬಿಡುಗಡೆಯಾಗಿ ಎರಡು ದಿನಗಳಾಗಿದ್ದು, ಬಾಯಿಂದ ಬಾಯಿಗೆ ತಲುಪಿ ಚಿತ್ರ ಕುಟುಂಬಗಳನ್ನು ತಲುಪಿತ್ತಿದೆ. ಹಾಗೆ, ದರ್ಶನ್ ಸಿನಿಮಾಗಳೆಂದರೇ ಆಕ್ಷನ್ ಎನ್ನುತ್ತಿದ್ದವರಿಗೆ ಇದು ಫ್ಯಾಮಿಲಿ ಚಿತ್ರವಾಗಿದ್ದು, ಜನರು ಕುಟುಂಬಗಳ ಸಮೇತ ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ಮತ್ತೆ'ಕಾಟೇರ' ನೋಡಿ ಕಣ್ಣೀರು ಹಾಕುತ್ತಿದ್ದಾರೆ.
ಹೌದು.. ದರ್ಶನ್ ನಟನೆಯ ಕಾಟೇರ ಸಿನಿಮಾ ನೋಡಿ ಬಂದ ಮಹಿಳೆಯೊಬ್ಬರು ಭಾವುಕವಾಗಿ ಮಾತನಾಡಿದ್ದು, ಯೂಟ್ಯೂಬ್ ಚಾನೆಲ್‌ವೊಂದರ ವಿಡಿಯೋದಲ್ಲಿ ಮಾತನಾಡಿರುವ ಮಹಿಳೆಯೊಬ್ಬರು ಸಿನಿಮಾ ನೋಡಿ ಕಣ್ಣೀರು ಹಾಕಿದ್ದಾರೆ. ಜೊತೆಗೆ ಇಂದಿರಾ ಗಾಂಧಿ ಅವರನ್ನು ನೆನಪಿಸಿಕೊಂಡಿದ್ದಾರೆ. ಆ ಮಹಿಳೆಯು "ಸಿನಿಮಾ ಚೆನ್ನಾಗಿದೆ. ನಮ್ಮ ಹಿಂದಿನ ದಿನಗಳನ್ನು ನೆನಪಿಸಿದೆ. ನಾವು ಸಿನಿಮಾ ನೋಡಿ ಅತ್ತು ಬಂದಿದ್ದೇವೆ. ನಾನು ಸಣ್ಣವಳಿದ್ದಾಗ ಎಲ್ಲಾ ಆಸ್ತಿ, ಪಾಸ್ತಿ ಎಲ್ಲಾ ಸಾಹುಕಾರರ ಕೈಯಲ್ಲಿರುತ್ತಿತ್ತು. ನಮಗೆ ಏನು ಕೊಡುತ್ತಿರಲಿಲ್ಲ. ಆದರೆ, ಇಂದಿರಾ ಗಾಂಧಿ ಅವರು ಅದನ್ನೆಲ್ಲಾ ಬಡವರಿಗೆ ಹಂಚಿದರು. ಹೀಗಾಗಿ ನಾವು ಚೆನ್ನಾಗಿದ್ದೇವೆ" ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ.
#Kaatera winning Family audience Heart❤️ #BlockBusterKaatera#DBoss𓃰 #BossOfSandalwood
pic.twitter.com/rIv3ijBY43— MONSTER😈 (@_fanofdboss_) December 30, 2023
ಇದನ್ನೂ ಓದಿ: ಕಾಟೇರದಲ್ಲಿ ಹಿರಣ್ಯ ಕಶಿಪು ಸೀನ್‌ಗೆ ಬಾಲಿವುಡ್‌ನ ಈ ಚಿತ್ರ ಸ್ಪೂರ್ತಿ!
ಕಾಟೇರ ಸಿನಿಮಾ 1974 ರಲ್ಲಿ ನಡೆಯುವ ಘಟನೆಗಳ ಸುತ್ತ ಕಥೆ ಹೆಣೆದಿದ್ದು, ಇದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜಾರಿಗೆ ತಂದ ಮಹತ್ತರ ಕಾಯ್ದೆ ಭೂ ಸುಧಾರಣೆಯ ಉಳುವವನೇ ಭೂಮಿಯ ಒಡೆಯ ಕಾಯ್ದೆಯಿಂದ ಸ್ಫೂರ್ತಿ ಪಡೆದಿದೆ. ಈಗ ಚಿತ್ರವನ್ನು ವೀಕ್ಷಿಸಿದ ಹಲವು ಮಂದಿ ಇಂದಿರಾ ಗಾಂಧಿ ನೆನಪಿಸಿಕೊಂಡಿದ್ದಾರೆ. "ಭಾರತದ ಉಕ್ಕಿನ ಮಹಿಳೆ" ಎಂದು ಕರೆಸಿಕೊಳ್ಳುವ ಮತ್ತು ದೇಶದ ಹಲವಾರು ಭೂ ಸುಧಾರಣೆಗಳ ಹಿಂದೆ ನಿಂತ ವಿಶೇಷವಾಗಿ ಐತಿಹಾಸಿಕ ಕಾನೂನು 'ಉಳುವವನೇ ಭೂಮಿಯ ಒಡೆಯ ಕಾಯ್ದೆ'ಯನ್ನು ಜಾರಿಗೊಳಿಸಿದವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ.
ಮಾಜಿ ಮುಖ್ಯಮಂತ್ರಿ ಡಿ ದೇವರಾಜ್ ಅರಸ್ ಕರ್ನಾಟಕದಲ್ಲಿ ಆಡಳಿತ ನಡೆಸುವಾಗ ಜಾರಿಗೆ ಬಂದ ಈ ಕಾಯ್ದೆ ಅದೆಷ್ಟೋ ಶೋಷಿತರಿಗೆ ವರದಾನವಾಗಿದ್ದು, ಕರ್ನಾಟಕ ಮತ್ತು ದೇಶದ ಇತರ ಭಾಗಗಳಲ್ಲಿ 1970 ಮತ್ತು 80 ರ ದಶಕಗಳಲ್ಲಿ ಕಾರ್ಮಿಕರು ಮತ್ತು ಭೂ ಕೃಷಿಕರು ಎದುರಿಸಿದ ಶೋಷಣೆಗೆ ಪ್ರತಿಕ್ರಿಯೆಯಾಗಿ ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿಗೆ ಬಂದಿತು. ಈ ಕಾನೂನು ಕರ್ನಾಟಕದಲ್ಲಿ ಭೂ ಮಾಲೀಕತ್ವದಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾಯಿತು. ಇಂದಿರಾ ಗಾಂಧಿಯವರ ಅವಧಿಯಲ್ಲಿ ಜಾರಿಗೆ ತಂದ ಈ ಕಾಯ್ದೆಯನ್ನು ಮುಖ್ಯವಾಗಿಟ್ಟುಕೊಂಡು ಕಾಟೇರ ಸಿನಿಮಾ ಮಾಡಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.