Kamal Hasan on Kantara: ಕಾಂತಾರ ಸಿನಿಮಾ ಸ್ಪೂರ್ತಿದಾಯಕವಾಗಿದೆ ಎಂದ ಕಮಲ್ ಹಾಸನ್

Kamal Hasan Watched Kantara : ರಿಷಬ್ ಶೆಟ್ಟಿ ಕರಿಯರ್‌ನಲ್ಲಿ ಸೂಪರ್‌ ಹಿಟ್‌ ಕೊಟ್ಟ ಸಿನಿಮಾ ಕಾಂತಾರ. ಇದನ್ನು ನೋಡಿದ ಯಾರೂ ಹೊಗಳದೆ ಬಿಟ್ಟಿಲ್ಲ. ಎಲ್ಲರ ಬಾಯಲ್ಲೂ ಮೆಚ್ಚುಗೆಯ ಮಾತುಗಳನ್ನೇ ಪಡೆದಿರುವ ಕಾಂತಾರ ಅನೇಕರ ಗಮನಸೆಳೆದಿದೆ. ಕಡಿಮೆ ಬಜೆಟ್‌ನಲ್ಲಿ ರೆಡಿಯಾಗಿದ್ದರೂ, ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆದಿದೆ. 

Written by - Chetana Devarmani | Last Updated : Nov 21, 2022, 12:50 PM IST
  • ಕಾಂತಾರ ಸಿನಿಮಾ ವೀಕ್ಷಿಸಿದ ಕಮಲ್‌ ಹಾಸನ್‌
  • ಕಾಂತಾರ ಸಿನಿಮಾ ಸ್ಪೂರ್ತಿದಾಯಕವಾಗಿದೆ
  • ರಿಷಬ್‌ ಅಭಿನಯ ಮೆಚ್ಚಿದ ಸೌತ್‌ ಸೂಪರ್‌ ಸ್ಟಾರ್‌
Kamal Hasan on Kantara: ಕಾಂತಾರ ಸಿನಿಮಾ ಸ್ಪೂರ್ತಿದಾಯಕವಾಗಿದೆ ಎಂದ ಕಮಲ್ ಹಾಸನ್  title=
ಕಮಲ್‌ ಹಾಸನ್‌

Kamal Hasan Watched Kantara : ರಿಷಬ್ ಶೆಟ್ಟಿ ಕರಿಯರ್‌ನಲ್ಲಿ ಸೂಪರ್‌ ಹಿಟ್‌ ಕೊಟ್ಟ ಸಿನಿಮಾ ಕಾಂತಾರ. ಇದನ್ನು ನೋಡಿದ ಯಾರೂ ಹೊಗಳದೆ ಬಿಟ್ಟಿಲ್ಲ. ಎಲ್ಲರ ಬಾಯಲ್ಲೂ ಮೆಚ್ಚುಗೆಯ ಮಾತುಗಳನ್ನೇ ಪಡೆದಿರುವ ಕಾಂತಾರ ಅನೇಕರ ಗಮನಸೆಳೆದಿದೆ. ಕಡಿಮೆ ಬಜೆಟ್‌ನಲ್ಲಿ ರೆಡಿಯಾಗಿದ್ದರೂ, ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆದಿದೆ. ಈ ವರ್ಷದ ದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿ ಕಾಂತಾರ ಹೊರಹೊಮ್ಮಿದೆ. ಕಾಂತಾರ ತನ್ನ ಕಥಾಹಂದರ ಮತ್ತು ಕಥಾವಸ್ತುದಿಂದ ಪ್ರೇಕ್ಷಕರನ್ನು ದಿಗ್ಭ್ರಮೆಗೊಳಿಸಿದೆ. ಚಿತ್ರದಲ್ಲಿ ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿ ಪ್ರೇಕ್ಷಕರು ಮತ್ತು ಸೆಲೆಬ್ರಿಟಿಗಳಿಂದ ಸಾಕಷ್ಟು ಪ್ರಶಂಸೆಗಳನ್ನು ಪಡೆಯುತ್ತಿದ್ದಾರೆ. ರಜನಿಕಾಂತ್ ನಂತರ ಈಗ ಸೌತ್ ಸೂಪರ್ ಸ್ಟಾರ್ ಕಮಲ್ ಹಾಸನ್ ಕಾಂತಾರ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ : ಡಿಸೆಂಬರ್ 30ಕ್ಕೆ ತೆರೆಗೆ ಬರಲಿದೆ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ..! 

ಟೈಮ್ಸ್ ಆಫ್ ಇಂಡಿಯಾದ ಇತ್ತೀಚಿನ ವರದಿಗಳ ಪ್ರಕಾರ, ಕಮಲ್ ಹಾಸನ್ ನವೆಂಬರ್ 18 ರಂದು ಕಾಂತಾರವನ್ನು ವೀಕ್ಷಿಸಿದರು ಮತ್ತು ರಿಷಬ್ ಶೆಟ್ಟಿ ಅವರ ನಿರ್ದೇಶನದಿಂದ ಹೆಚ್ಚು ಪ್ರಭಾವಿತರಾಗಿದ್ದಾರಂತೆ. ಹಿರಿಯ ನಟ ಕಮಲ್ ಹಾಸನ್‌ ಈ ಚಿತ್ರದ ಸ್ಟೋರಿ ಟೆಲ್ಲಿಂಗ್‌ನ್ನು ಬಲು ಮೆಚ್ಚಿದ್ದು, ಹೆಚ್ಚು ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದ್ದಾರೆ. 

ಕಾಂತಾರ ಚಿತ್ರವು ಪ್ಯಾನ್ ಇಂಡಿಯಾದಲ್ಲಿ ಬಿಡುಗಡೆಯಾದಾಗ ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಗಳಿಸಿತು. ಚಿತ್ರದಲ್ಲಿ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ನವೀನ್ ಡಿ ಪಡೀಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಂತಾರ ಮುಂದಿನ ವಾರ ನವೆಂಬರ್ 24, 2022 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರೀಮಿಯರ್ ಆಗಲಿದೆ ಎಂದು ವರದಿಯಾಗಿದೆ.  

ಇದನ್ನೂ ಓದಿ : ಕುಡಿದ ಮತ್ತಿನಲ್ಲಿ ಆಶಿಕಾ ರಂಪಾಟ : ಚಿತ್ರತಂಡದ ಮೇಲೆ ಬೇಸಗೊಂಡ ಪವನ್‌ ಒಡೆಯರ್‌..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News