18 ವರ್ಷಗಳ ನಂತರ ಕಮಲ್‌ ರಜನಿ ನಡುವೆ ವಾರ್‌.. ʼಇಂಡಿಯನ್‌ 2ʼ ʼಜೈಲರ್‌ʼ ಯಾರ್‌ ಗೆಲ್ತಾರೆ..!

ಈ ವರ್ಷದ ದಿಪಾವಳಿಯಂದು ಸಿನಿ ಪ್ರೇಕ್ಷಕರಿಗೆ ಡಬಲ್‌ ಧಮಾಕಾ ಸಿಗಲಿದೆ. ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ʼಜೈರಲ್‌ʼ ಮತ್ತು ಯೂನಿವರ್ಸಲ್ ಹೀರೋ ಕಮಲ್ ಹಾಸನ್ ಅಭಿನಯದ ಇಂಡಿಯನ್‌ 2 ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗಲಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ನೇರ ಹಣಾಹಣಿ ನಡೆಸಲಿದ್ದು, ಇಬ್ಬರು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Written by - Krishna N K | Last Updated : Feb 5, 2023, 03:01 PM IST
  • ಈ ವರ್ಷದ ದಿಪಾವಳಿಯಂದು ಸಿನಿ ಪ್ರೇಕ್ಷಕರಿಗೆ ಡಬಲ್‌ ಧಮಾಕಾ ಸಿಗಲಿದೆ.
  • 18 ವರ್ಷಗಳ ನಂತರ ಕಮಲ್‌ ರಜನಿ ನಡುವೆ ವಾರ್‌ ನಡೆಯಲಿದೆ.
  • ದೀಪಾವಳಿಯಂದು ರಜನಿ ಜೈಲರ್‌ ಮತ್ತು ಕಮಲ್‌ ಇಂಡಿಯನ್‌ 2 ರಿಲೀಸ್‌ ಆಗಲಿವೆ.
18 ವರ್ಷಗಳ ನಂತರ ಕಮಲ್‌ ರಜನಿ ನಡುವೆ ವಾರ್‌.. ʼಇಂಡಿಯನ್‌ 2ʼ ʼಜೈಲರ್‌ʼ ಯಾರ್‌ ಗೆಲ್ತಾರೆ..! title=

Indian 2 and Jailer release date : ಈ ವರ್ಷದ ದಿಪಾವಳಿಯಂದು ಸಿನಿ ಪ್ರೇಕ್ಷಕರಿಗೆ ಡಬಲ್‌ ಧಮಾಕಾ ಸಿಗಲಿದೆ. ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ʼಜೈರಲ್‌ʼ ಮತ್ತು ಯೂನಿವರ್ಸಲ್ ಹೀರೋ ಕಮಲ್ ಹಾಸನ್ ಅಭಿನಯದ ಇಂಡಿಯನ್‌ 2 ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗಲಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ನೇರ ಹಣಾಹಣಿ ನಡೆಸಲಿದ್ದು, ಇಬ್ಬರು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಇತ್ತೀಚಿನ ವರದಿಗಳ ಪ್ರಕಾರ ʼಜೈಲರ್ʼ ಮತ್ತು ʼಇಂಡಿಯನ್-2ʼ ಸಿನಿಮಾಗಳು 2023 ರ ದೀಪಾವಳಿ ಹಬ್ಬದಂದು ವಿಶ್ವದಾದ್ಯಂತ ತೆರೆಗೆ ಬರಲಿವೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದರೆ ಕಮಲ್ ಹಾಸನ್-ರಜನಿಕಾಂತ್ ಚಿತ್ರಗಳು ಭಾರತದಲ್ಲಿ ಹೊಸ ದಾಖಲೆ ಸೃಷ್ಟಿಸುವುದರಲ್ಲಿ ಯಾವುದೇ ಡೌಟ್‌ ಇಲ್ಲ. ಅಲ್ಲದೆ, ಅಂದು ಬಿಡುಗಡೆಯಾಗುವ ಇತರೆ ಸಿನಿಮಾಗಳೂ ಸಹ ಮಕಾಡೆ ಮಲಗುವುದಂತು ಸತ್ಯ.

ಇದನ್ನೂ ಓದಿ: ಅಪ್ಪು ಜೀವಿಸಿದ ʼಗಂಧದ ಗುಡಿʼಗೆ 100ರ ಸಂಭ್ರಮ..!

ವಿಶೇಷ ಅಂದ್ರೆ, ರಜನಿ ಮತ್ತು ಕಮಲ್‌ ಸಿನಿಮಾಗಳು ಮುಖಾಮುಖಿಯಾಗುತ್ತಿರುವುದು ಇದೇ ಮೊದಲಲ್ಲ, ಈ ಹಿಂದೆ ಸುಮಾರು 18 ವರ್ಷಗಳ ಹಿಂದೆ ಇಬ್ಬರು ನಟರ ಚಿತ್ರಗಳು ಒಂದೇ ದಿನದಲ್ಲಿ ಬಿಡುಗಡೆಯಾಗಿದ್ದವು. ರಜನಿಕಾಂತ್ ಅವರ 'ಚಂದ್ರಮುಖಿ' ಮತ್ತು ಕಮಲ್ ಹಾಸನ್ ಅವರ 'ಮುಂಬೈ ಎಕ್ಸ್‌ಪ್ರೆಸ್' ಏಪ್ರಿಲ್ 14, 2005 ರಂದು ರಿಲೀಸ್‌ ಅಗಿದ್ದವು. ʼಚಂದ್ರಮುಖಿʼ ಚಿತ್ರವು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು ಮತ್ತು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತು, ಇದು ರಜನಿಕಾಂತ್ ಅವರ ವೃತ್ತಿಜೀವನದ ಅತ್ಯುತ್ತಮ ಚಿತ್ರವಾಗಿದೆ. ಆದರೆ ಕಮಲ್ ಅಭಿನಯದ ʼಮುಂಬೈ ಎಕ್ಸ್ ಪ್ರೆಸ್ʼ ಕಮಲ್ ಅವರ ಸ್ಕ್ರೀನ್ ಕೆರಿಯರ್ ನಲ್ಲಿ ಕೆಟ್ಟ ಚಿತ್ರವಾಗಿತ್ತು.

ಶಂಕರ್ ನಿರ್ದೇಶನದ ಕಮಲ್ ಹಾಸನ್ ಅಭಿನಯದ 'ಇಂಡಿಯನ್-2' ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿದೆ. ಚಿತ್ರದಲ್ಲಿ ಕಾಜಲ್ ಅಗರ್ವಾಲ್, ರಾಹುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಸಮುದ್ರಕನಿ, ಗುರು ಸೋಮಸುಂದರಂ, ಸಿದ್ಧಾರ್ಥ್, ಬಾಬಿ ಸಿಂಹ ಮತ್ತು ದಿವಂಗತ ಹಾಸ್ಯನಟ ವಿವೇಕ್ ನಟಿಸಿದ್ದಾರೆ. ನೆಲ್ಸನ್ ನಿರ್ದೇಶನದ ರಜನಿಕಾಂತ್ ಅವರ 'ಜೈಲರ್' ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸುತ್ತಿದೆ. ಚಿತ್ರದಲ್ಲಿ ಮೋಹನ್ ಲಾಲ್, ಶಿವರಾಜಕುಮಾರ್, ತಮನ್ನಾ, ರಮ್ಯಾ ಕೃಷ್ಣನ್, ವಸಂತ ರವಿ ಮತ್ತು ಯೋಗಿ ಬಾಬು ನಟಿಸಿದ್ದಾರೆ. ಈ ಎರಡೂ ಚಿತ್ರಗಳಿಗೆ ಅನಿರುದ್ಧ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News