ನವದೆಹಲಿ: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅವರಿಗೆ Y+ಶ್ರೇಣಿಯ ಭದ್ರತೆ ಲಭಿಸಿದೆ. ಮೂಲಗಳ ಪ್ರಕಾರ, ಗೃಹ ಸಚಿವಾಲಯವು ಕಂಗನಾ ಅವರಿಗೆ ವೈ+ ಭದ್ರತೆಯನ್ನು ನೀಡಿದೆ ಎನ್ನಲಾಗಿದೆ. ಕಳೆದ ಕೆಲ ದಿನಗಳಿಂದ ಕಂಗನಾ ರಣಾವತ್ ಮತ್ತು ಶಿವಸೇನೆ ಮುಖಂಡ ಸಂಜಯ್ ರಾವುತ್ ನಡುವಿನ ಮಾತಿನ ಚಕಮಕಿ ತೀವ್ರಗೊಂಡಿತ್ತು. ಸಂಜಯ್ ರಾವುತ್, ಕಂಗನಾ ಅವರಿಗೆ ಮುಂಬೈಗೆ ಬರದಂತೆ ಸಲಹೆ ನೀಡಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿದ್ದ ಕಂಗನಾ ಕೂಡ ತಾವು ಸೆಪ್ಟೆಂಬರ್ 9 ರಂದು ಮುಂಬೈಗೆ ಬರಲು ನಿರ್ಧರಿಸಿದ್ದರು.
ಕೇಂದ್ರ ಗ್ರಹ ಸಚಿವಾಲಯ ಪ್ರಸ್ತುತ ಕಂಗನಾ ರಣಾವತ್ ಅವರಿಗೆ Y ದರ್ಜೆಯ ಸುರಕ್ಷೆ ಒದಗಿಸಿದ್ದು, ಕಂಗನಾ ಭದ್ರತೆಯಲ್ಲಿ 11 ಜನ ಜವಾನರು ಇರಲಿದ್ದಾರೆ. ಇವರಲ್ಲಿ ಇಬ್ಬರು ಕಮಾಂಡೋಗಳಿರಲಿದ್ದು, ಉಳಿದವರೆಲ್ಲರೂ ಪೊಲೀಸ್ ಸಿಬ್ಬಂದಿಗಳು ಇರಲಿದ್ದಾರೆ. ಈ ಕುರಿತಾದ ಅಧಿಸೂಚನೆ ಸ್ವಲ್ಪ ಹೊತ್ತಿನಲ್ಲಿಯೇ ಬಿಡುಗಡೆಯಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ 9 ರಂದು ಕಂಗನಾ ಮುಂಬೈ ತಲುಪಿದಾಗ ಅವರಿಗೆ Y ಶ್ರೇಣಿಯ ಭದ್ರತೆ ಸಿಗಲಿದೆ.
ದೇಶಾದ್ಯಂತ ಬಹುಚರ್ಚೆಗೆ ಗ್ರಾಸವಾಗಿರುವ ಸುಶಾಂತ್ ಸಿಂಗ್ ರಾಜ್ಪುತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಗನಾ ರಣಾವತ್ ಆರಂಭದಿಂದಲೇ ತೀಕ್ಷ್ಣ ನಿಲುವು ತಳೆದಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. ತನಗೆ ಸಿಕ್ಕಿರುವ Y ದರ್ಜೆಯ ಭದ್ರತೆ ಕುರಿತು ಪ್ರತಿಕ್ರಿಯೆ ನೀಡಿರುವ ಕಂಗನಾ, "ಯಾವುದೇ ಫ್ಯಾಸಿಸ್ಟ್ ಭಕ್ತನ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂಬುದಕ್ಕೆ ಇದು ಪುರಾವೆಯಾಗಿದೆ, ನಾನು @ಅಮಿತ್‌ಶಾಜಿ ಅವರಿಗೆ ಕೃತಜ್ಞನಾಗಿದ್ದೇನೆ, ಸಂದರ್ಭಗಳ ಕಾರಣ ಹೇಳಿ ಕೆಲವು ದಿನಗಳ ನಂತರ ಮುಂಬೈಗೆ ಹೋಗುವಂತೆ ಅವರು ನನಗೆ ಸಲಹೆ ನೀಡಬಹುದಿತ್ತು. ಆದರೆ, ಅವರು ಭಾರತದ ಮಗಳ ಮಾತುಗಳ ಗೌರವವನ್ನು ಕಾಪಾಡಿದ್ದಾರೆ. ನಮ್ಮ ಸ್ವಾಭಿಮಾನ ಮತ್ತು ಆತ್ಮಾಭಿಮಾನದ ಮಾನ ಕಾಪಾಡಿದ್ದಾರೆ, ಜೈ ಹಿಂದ್" ಎಂದು ಬರೆದುಕೊಂಡಿದ್ದಾರೆ.
ये प्रमाण है की अब किसी देशभक्त आवाज़ को कोई फ़ासीवादी नहीं कुचल सकेगा,मैं @AmitShah जी की आभारी हूँ वो चाहते तो हालातों के चलते मुझे कुछ दिन बाद मुंबई जाने की सलाह देते मगर उन्होंने भारत की एक बेटी के वचनों का मान रखा, हमारे स्वाभिमान और आत्मसम्मान की लाज रखी, जय हिंद 🙏 https://t.co/VSbZMG66LT
— Kangana Ranaut (@KanganaTeam) September 7, 2020