Bigg Boss 8: ಬಿಗ್‌ಬಾಸ್‌ ಮನೆ ಎಂಟ್ರಿ ನೀಡಿದ ರಘು ವೈನ್‌ ಸ್ಟೋರ್ ಮಾಲೀಕ..!

ಲಾಕ್‌ಡೌನ್‌ನಲ್ಲಿ ಇಡೀ ಕರ್ನಾಟಕವೇ ಮೊಬೈಲ್‌ ಹಿಡಿದು ಬ್ಯುಸಿಯಾಗುವಂತೆ ಮಾಡಿದ ರಘು ಗೌಡ

Last Updated : Mar 1, 2021, 06:01 PM IST
  • ಲಾಕ್‌ಡೌನ್‌ನಲ್ಲಿ ಇಡೀ ಕರ್ನಾಟಕವೇ ಮೊಬೈಲ್‌ ಹಿಡಿದು ಬ್ಯುಸಿಯಾಗುವಂತೆ ಮಾಡಿದ ರಘು ಗೌಡ
  • ರಘು ವೈನ್‌ ಸ್ಟೋರ್ಸ್ ಶೀರ್ಷಿಕೆಯ ಚಾನೆಲ್‌ ಮೂಲಕ ಸಾಕಷ್ಟು ವಿಡಿಯೋಗಳನ್ನು ಮಾಡಿದ್ದಾರೆ.
  • ಕೈ ತುಂಬಾ ಸಂಬಳ ಬರುತ್ತಿದ್ದ ಐಟಿ ಕೆಲಸಕ್ಕೆ ಗುಡ್‌ ಬೈ ಹೇಳಿ ಕಂಟೆಂಟ್‌ ಕ್ರಿಯೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Bigg Boss 8: ಬಿಗ್‌ಬಾಸ್‌ ಮನೆ ಎಂಟ್ರಿ ನೀಡಿದ ರಘು ವೈನ್‌ ಸ್ಟೋರ್ ಮಾಲೀಕ..!

ಬೆಂಗಳೂರು: ಯುಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಹಾಸ್ಯ ವಿಡಿಯೋ ಮಾಡುವ ಮೂಲಕ ಲಾಕ್‌ಡೌನ್‌ನಲ್ಲಿ ಇಡೀ ಕರ್ನಾಟಕವೇ ಮೊಬೈಲ್‌ ಹಿಡಿದು ಬ್ಯುಸಿಯಾಗುವಂತೆ ಮಾಡಿದ ರಘು ಗೌಡ.

ರಘು ವೈನ್‌ ಸ್ಟೋರ್ಸ್ ಶೀರ್ಷಿಕೆಯ ಚಾನೆಲ್‌ ಮೂಲಕ ಸಾಕಷ್ಟು ವಿಡಿಯೋ(Video)ಗಳನ್ನು ಮಾಡಿದ್ದಾರೆ. ಕೈ ತುಂಬಾ ಸಂಬಳ ಬರುತ್ತಿದ್ದ ಐಟಿ ಕೆಲಸಕ್ಕೆ ಗುಡ್‌ ಬೈ ಹೇಳಿ ಕಂಟೆಂಟ್‌ ಕ್ರಿಯೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

H Vishwanath: 'ಅವಕಾಶ ಸಿಕ್ಕರೆ ಖಂಡಿತಾ 'ಬಿಗ್​ ಬಾಸ್' ಮನೆಗೆ ಹೋಗುತ್ತೇನೆ'

ಬಿಬಿ ವೇದಿಕೆಯ ಮೇಲೆ ಪತ್ನಿಗೆ ಬಾಯ್ ಹೇಳಿ ಎಂದರೆ ಸುದೀಪ್ (Sudeep)‌ ಬಳಿಯೇ ಒಂದು ನಿಮಿಷ ಕೇಳಿ ಪತ್ನಿ ಹೇಳಿದ್ದೇನೆಂದು ಕೇಳಿದ್ದರು. ಅದನ್ನು ಕೇಳಿ ಸುದೀಪ್ ಸಹ ನಕ್ಕರು.

Petrol Bomb Explodes : ಪೆಟ್ರೋಲ್ ಬಾಂಬ್ ಸಿಡಿಸುವಾಗ ಅನಾಹುತ, ನಟ ರಿಷಬ್ ಶೆಟ್ಟಿಗೆ ಗಾಯ

'ಕ್ವಾರಂಟೈನ್‌ನಲ್ಲಿದ್ದಾಗ ಕೊಟ್ಟ ಪೌಡರ್, ಸೋಪ್, ಶ್ಯಾಂಪು ಎಲ್ಲಾ ಚೆನ್ನಾಗಿತ್ತು. ಅದನ್ನು ಬ್ಯಾಗ್‌ನಲ್ಲಿ ಪ್ಯಾಕ್ ಮಾಡಿದ್ದೀನಿ. ಮನೆಯಲ್ಲಿ ಬಳಸು,' ಎಂದು ರಘು(Raghu Gowda) ಹೇಳಿದ್ದರು. ನಂತರ ಸುದೀಪ್ ಮುಖ ನೋಡಿ 'ವೇಸ್ಟ್‌ ಆಗಬಾರದು ಅಲ್ವಾ ಸರ್? ಅದಕ್ಕೆ ಹೀಗಾದರೂ ಬಳಕೆಯಾಗಲಿ,' ಎಂದ್ಹೇಳಿ ರಘು ಕೂಡ ನಕ್ಕರು.

ಏಪ್ರಿಲ್ 14 ರಂದು ಬಹುನಿರೀಕ್ಷಿತ ಪ್ರಭಾಸ್ ಅಭಿನಯದ 'ಸಲಾರ್' ಸಿನಿಮಾ ಬಿಡುಗಡೆ

ರಘು ಜೊತೆ ಪತ್ನಿ ಕೂಡ ಕಾಮಿಡಿ ವಿಡಿಯೋ ಮಾಡುತ್ತಾರೆ, ವಿದ್ಯಾ(Vidya) ವೃತ್ತಿಯಲ್ಲಿ ಮೇಕಪ್ ಆರ್ಟಿಸ್ಟ್‌. ರಘು ಗೌಡ ಮನೆ ಪ್ರವೇಶಿಸುತ್ತಿರುವ ವಿಚಾರ ತಿಳಿದು ಇಡೀ ಟ್ರೋಲ್ ಪೇಜ್ ಹಾಗೂ ಸೋಷಿಯಲ್ ಮೀಡಿಯಾ ಅಭಿಮಾನಿಗಳು ಈಗಾಗಲೇ ಫ್ಯಾನ್ ಪೇಜ್ ಕ್ರಿಯೇಟ್ ಮಾಡಿದ್ದಾರೆ.

Bigg Boss 8: ಮನೆಗೆ ಕಾಲಿಟ್ಟ ಮೊದಲ ಸ್ಪರ್ಧಿಯಾಗಿ 'ಟಿಕ್ ಟಾಕ್ ಧನುಶ್ರೀ' ಎಂಟ್ರಿ!

ರಘು ತಂದೆ ಹಾಗೂ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ. ಡಿಪ್ರೆಶನ್(Depression)‌ಗೆ ಒಳಗಾಗಿ ರಘು ಚಿಕಿತ್ಸೆ ಪಡೆದು, ಎಲ್ಲರನ್ನೂ ನಗಿಸುವ ಕೈಂಕರ್ಯಕ್ಕೆ ಮುಂದಾದರು. ಈಗ ಸಂತೋಷವಾಗಿದ್ದಾರೆ. ಏನೇ ಇರಲಿ, ನಗು ನಗುತ್ತಾ ಮತ್ತೊಬ್ಬರ ಜೊತೆ ಮಾತನಾಡಿ, ಮನಸ್ಸಿನಲ್ಲಿ ಓಡುತ್ತಿರುವ ವಿಚಾರವನ್ನು ಹಂಚಿಕೊಳ್ಳಿ. ಡಿಪ್ರೆಶನ್ ಹತ್ತಿರವೂ ಬಾರದಂತೆ ನಿಮ್ಮವರು ನೋಡಿಕೊಳ್ಳುತ್ತಾರೆ ಎಂದರು ರಘು.

Shanvi Srivastava: ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶಾನ್ವಿ ಶ್ರೀವಾಸ್ತವ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News