ರಸ್ತೆ ಅಪಘಾತ: ‘ಸಿಲ್ಲಿ ಲಲ್ಲಿ’ ಖ್ಯಾತಿಯ ನಟಿ ಸುನೇತ್ರಾ ಪಂಡಿತ್‌ಗೆ ಗಂಭೀರ ಗಾಯ

ಎನ್.ಆರ್.ಕಾಲೋನಿಯ ಮುಖ್ಯ ರಸ್ತೆ ಹಲವು ವರ್ಷಗಳಿಂದಲೂ ಆ್ಯಕ್ಸಿಡೆಂಟ್ ಸ್ಪಾಟ್ ಆಗಿದೆ. ಈ ಸ್ಥಳದಲ್ಲಿ ಆಗಾಗ ಆ್ಯಕ್ಸಿಡೆಂಟ್‍ಗಳು ಆಗುತ್ತಲೇ ಇರುತ್ತವೆ.

Written by - Zee Kannada News Desk | Last Updated : May 8, 2022, 12:14 PM IST
  • ಕನ್ನಡದ ಖ್ಯಾತ ಕಿರುತೆರೆ ನಟಿ ಸುನೇತ್ರಾ ಪಂಡಿತ್ ದ್ವಿಚಕ್ರ ವಾಹನ ಅಪಘಾತ
  • ಶನಿವಾರ ತಡರಾತ್ರಿ ಶೂಟಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಘಟನೆ
  • ಗಾಯಗೊಂಡಿರುವ ನಟಿಗೆ ಬಸವನಗುಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ರಸ್ತೆ ಅಪಘಾತ: ‘ಸಿಲ್ಲಿ ಲಲ್ಲಿ’ ಖ್ಯಾತಿಯ ನಟಿ ಸುನೇತ್ರಾ ಪಂಡಿತ್‌ಗೆ ಗಂಭೀರ ಗಾಯ title=
ನಟಿ ಸುನೇತ್ರಾ ಪಂಡಿತ್ ದ್ವಿಚಕ್ರ ವಾಹನ ಅಪಘಾತ

ಬೆಂಗಳೂರು: ಶೂಟಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದ ಕನ್ನಡದ ಖ್ಯಾತ ಕಿರುತೆರೆ ನಟಿ ಸುನೇತ್ರಾ ಪಂಡಿತ್ ಅವರ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅವರು ಸದ್ಯ ಬಸವನಗುಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶನಿವಾರ(ಮೇ 7) ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ‘ಸಿಲ್ಲಿ ಲಲ್ಲಿ’ ಖ್ಯಾತಿ ಸುನೇತ್ರಾರಿಗೆ ಪೆಟ್ಟು ಬಿದ್ದಿದೆ. ಗಾಯಗೊಂಡ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಬಸವನಗುಡಿ ಸಂಚಾರಿ ಠಾಣಾ ವ್ಯಾಪ್ತಿಯ ಎನ್.ಆರ್.ಕಾಲೋನಿ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ಶೂಟಿಂಗ್ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಸುನೇತ್ರಾ ಮನೆಗೆ ತೆರಳುತ್ತಿದ್ದರು. ಈ ವೇಳೆ ಅವೈಜ್ಞಾನಿಕ ಹಂಪ್ ಕಾಣಿಸದೆ ಸ್ಕೂಟಿ ಜಂಪ್ ಆದ ಪರಿಣಾಮ ಮುಂದಿದ್ದ ಗುಂಡಿಯಿಂದ ಸ್ಕಿಡ್ ಆಗಿ ಬಿದ್ದಿದ್ದಾರೆ.

ಇದನ್ನೂ ಓದಿ: Vinay Rajkumar Birthday : ವಿನಯ್ ಬರ್ತ್ ಡೇ : ‘ಪೆಪೆ’ ರಕ್ತಸಿಕ್ತ ಲುಕ್ ನಲ್ಲಿ ಮಿಂಚಿದ ದೊಡ್ಮನೆ ಕುಡಿ

ಘಟನೆಯಲ್ಲಿ ನಟಿಯ ತಲೆಯ ಹಿಂಭಾಗಕ್ಕೆ ಪೆಟ್ಟಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ‘ಸಿಲ್ಲಿ ಲಲ್ಲಿ’ ಸೇರಿದಂತೆ ಹಲವು ಧಾರವಾಹಿಗಳಲ್ಲಿ ಸುನೇತ್ರ ನಟಿಸಿದ್ದಾರೆ. ಸ್ಕೂಟಿಯಲ್ಲಿ ಸುನೇತ್ರ ಒಬ್ಬರೇ ‌ ಒಬ್ಬರೇ ಸಂಚರಿಸುತ್ತಿದ್ದರು.ಆಕ್ಸಿಡೆಂಟ್ ಅದ‌ ತಕ್ಷಣವೇ ಸ್ಥಳೀಯರು ಅವರನ್ನು ಆಸ್ಪತ್ರೆ ರವಾನಿಸಿದ್ದಾರೆ.  

ಎನ್.ಆರ್.ಕಾಲೋನಿಯ ಮುಖ್ಯ ರಸ್ತೆಯು ಹಲವು ವರ್ಷಗಳಿಂದಲೂ ಆ್ಯಕ್ಸಿಡೆಂಟ್ ಸ್ಪಾಟ್ ಆಗಿದೆ. ಈ ಸ್ಥಳದಲ್ಲಿ ಆಗಾಗ ಆ್ಯಕ್ಸಿಡೆಂಟ್‍ಗಳು ಆಗುತ್ತಲೇ ಇರುತ್ತವೆ. ಇಲ್ಲಿರುವ ಗುಂಡಿಗಳಿಂದಲೇ ಹೆಚ್ಚು ಅಪಘಾತಗಳು ಆಗುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಹಿಂದೆ ಬಸ್‍ವೊಂದು ಇದೇ ಜಾಗದಲ್ಲಿ ಆ್ಯಕ್ಸಿಡೆಂಟ್ ಆಗಿ ಮೂವರು ಸಾವನ್ನಪ್ಪಿದ್ದರು. ಇತ್ತೀಚೆಗಷ್ಟೇ ಇದೇ ಸ್ಥಳದಲ್ಲಿ ಹಲವು ಸವಾರರು ಬಿದ್ದು ಆಸ್ಪತ್ರೆ ಸೇರಿದ್ದರು.

ಇದನ್ನೂ ಓದಿ: ಕೆಜಿಎಫ್ 3 ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆಯೇ ರಾಣಾ ದಗ್ಗುಬಟಿ..?

ಈ ಬಗ್ಗೆ ಅನೇಕ ಬಾರಿ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆ್ಯಕ್ಸಿಡೆಂಟ್ ಜೋನ್ ಆಗಿರುವ ಈ ಸ್ಥಳದಲ್ಲಿರುವ ಗುಂಡಿಗಳನ್ನು, ಅವೈಜ್ಞಾನಿಕ ಹಂಪ್‍ಗಳನ್ನು ಸರಿಪಡಿಸಿ ಎಂದು ಮನವಿ ಮಾಡಿದರೂ ಅಧಿಕಾರಿಗಳು ಡೋಂಟ್ ಕೇರ್ ಎನ್ನುತ್ತಿದ್ದಾರೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News