BBK9 : ಬಿಗ್ ಬಾಸ್ ಈ ವಾರಾಂತ್ಯದ ಸಂಚಿಕೆಗೆ ಕಿಚ್ಚ ಸುದೀಪ್ ಗೈರು?

Bigg Boss Kannada Season 9 : ವಾರಾಂತ್ಯದ ಸಂಚಿಕೆಗಳನ್ನು ವೀಕ್ಷಿಸಲು ಅಭಿಮಾನಿಗಳು ಯಾವಾಗಲೂ ಉತ್ಸುಕರಾಗಿದ್ದಾರೆ. ಆದಾಗ್ಯೂ, ಈ ವಾರಾಂತ್ಯದ ಸಂಚಿಕೆಗಳಿಗೆ ನಟ ಕಿಚ್ಚ ಸುದೀಪ್‌ ಬರುವುದಿಲ್ಲ ಎಂಬ ಊಹಾಪೋಹಗಳಿವೆ.

Written by - Chetana Devarmani | Last Updated : Oct 20, 2022, 10:31 AM IST
  • ಬಿಗ್ ಬಾಸ್ ಕನ್ನಡ ಸೀಸನ್‌ 9
  • ವಾರಾಂತ್ಯದ ಸಂಚಿಕೆಗೆ ಸುದೀಪ್‌ ಗೈರು!?
  • ಬಿಗ್ ಬಾಸ್ ಕನ್ನಡ ಹೋಸ್ಟ್ ಕಿಚ್ಚ ಸುದೀಪ್
BBK9 : ಬಿಗ್ ಬಾಸ್ ಈ ವಾರಾಂತ್ಯದ ಸಂಚಿಕೆಗೆ ಕಿಚ್ಚ ಸುದೀಪ್ ಗೈರು?  title=
ಕಿಚ್ಚ ಸುದೀಪ್ 

Bigg Boss Kannada Season 9 : ಬಿಗ್ ಬಾಸ್ ಕನ್ನಡ ಹೋಸ್ಟ್ ಕಿಚ್ಚ ಸುದೀಪ್ ವಾರವಿಡೀ ಶೋನಲ್ಲಿ ನಡೆಯುವ ಎಲ್ಲವನ್ನೂ ಗಮನಿಸುತ್ತಾರೆ ಮತ್ತು ವಾರಾಂತ್ಯದ ಸಂಚಿಕೆಗಳಲ್ಲಿ ತಪ್ಪು ಮಾಡಿದವರನ್ನು ತಿದ್ದಿ, ಉತ್ತಮ ಆಡ ಆಡಿದವರಿಗೆ ಮತ್ತಷ್ಟು ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಾರೆ. ಕಳೆದ 8 ಸೀಸನ್‌ಗಳಲ್ಲಿ ಕಿಚ್ಚ ಸುದೀಪ್ ಎಂಬ ಹೆಸರು ಕಾರ್ಯಕ್ರಮಕ್ಕೆ ಸಮಾನಾರ್ಥಕವಾಗಿದೆ. ಬಿಗ್‌ ಬಾಸ್‌ ಅಂದ್ರೆ ಸುದೀಪ್‌ ಎಂಬಂತಾಗಿದೆ. ಅವರ ವಾರಾಂತ್ಯದ ಸಂಚಿಕೆಗಳನ್ನು ವೀಕ್ಷಿಸಲು ಅಭಿಮಾನಿಗಳು ಯಾವಾಗಲೂ ಉತ್ಸುಕರಾಗಿದ್ದಾರೆ. ಆದಾಗ್ಯೂ, ಈ ವಾರಾಂತ್ಯದ ಸಂಚಿಕೆಗಳಿಗೆ ನಟ ಕಿಚ್ಚ ಸುದೀಪ್‌ ಬರುವುದಿಲ್ಲ ಎಂಬ ಊಹಾಪೋಹಗಳಿವೆ.

ಇದನ್ನೂ ಓದಿ : BBK 9: ಬಿಗ್ ಬಾಸ್ ಮನೆಯಲ್ಲಿ ಓಪನ್ ನಾಮಿನೇಷನ್! ಸಾನ್ಯಾ ನೇರ ನಾಮಿನೇಟ್ ಆಗಿದ್ಯಾಕೆ?

"ಸೂಪರ್ ಸಂಡೆ ವಿತ್ ಸುದೀಪ್" ಹೆಚ್ಚು ಇಷ್ಟಪಡುವ ಬಿಗ್‌ ಬಾಸ್‌ನ ಭಾಗವಾಗಿದೆ. ಈ ವಾರಾಂತ್ಯದಲ್ಲಿ ಸುದೀಪ್‌ ಅವರು ಬಿಗ್‌ ಬಾಸ್‌ ಸಂಚಿಕೆಗೆ ಗೈರಾಗಲಿದ್ದಾರಂತೆ. ಏಕೆಂದರೆ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಪ್ರೀ ರಿಲೀಸ್‌ ಕಾರ್ಯಕ್ರಮ ನಡೆಯಲಿದೆ. ಅಂದು ನಡೆಯಲಿರುವ ಪುನೀತ್‌ ಪರ್ವ ಈವೆಂಟ್‌ನಲ್ಲಿ ಸುದೀಪ್‌ ಭಾಗಿಯಾಗುವ ಸಾಧ್ಯತೆ ಹೆಚ್ಚಾಗಿರುವ ಕಾರಣ ಬಿಗ್‌ ಬಾಸ್‌ನ ಈ ವೀಕೆಂಡ್‌ ಎಪಿಸೋಡ್‌ಗೆ ಅವರು ಗೈರಾಗಬಹುದು ಎಂದು ಊಹಿಸಲಾಗಿದೆ. ಆದರೆ ಇದೆಲ್ಲ ಕೇವಲ ಊಹಾಪೋಹಗಳಾಗಿದ್ದು, ಸುದೀಪ್‌ ಆಗಲಿ ಅಥವಾ ಬಿಗ್‌ ಬಾಸ್‌ ಆಯೋಜಕರಾಗಲಿ ಈ ಬಗ್ಗೆ ದೃಢೀಕರಿಸಿಲ್ಲ.  

ಕಳೆದ 8 ಸೀಸನ್‌ಗಳಲ್ಲಿ ನಟ ಸುದೀಪ್‌ ನಿಯಮಿತವಾಗಿ ಕಾರ್ಯಕ್ರಮದ ಹೋಸ್ಟ್‌ ಆಗಿ ಎಲ್ಲರ ಮನಗೆದ್ದಿದ್ದಾರೆ. ಸುದೀಪ್‌ ನಡೆಸಿಕೊಡುವ ರೀತಿಗೆ ಬಿಗ್‌ ಬಾಸ್‌ ಫ್ಯಾನ್ಸ್‌ ಮನಸೋತಿದ್ದಾರೆ. ಹೀಗಾಗಿ ಬಿಗ್‌ ಬಾಸ್‌ನಲ್ಲಿ ಸುದೀಪ್‌ ಇಲ್ಲದಿದ್ರೆ ಅದು ಪ್ರೇಕ್ಷಕರಲ್ಲಿ ಭಾರೀ ನಿರಾಸೆಯನ್ನು ತರಲಿದೆ. 

ಇದನ್ನೂ ಓದಿ : ಮೀಸೆ ಎಲ್ಲಿದೆ.. ಅವ್ರರಿಗೆ ಗಡ್ಡ ಇದ್ಯಾ..! : ಬಿಗ್‌ಹೌಸ್‌ನಲ್ಲಿ ʼಪಟ ಪಟ ಚಿತ್ರಟಪʼ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News