Kiccha Sudeep: 21ರಂದು ಸಿಹಿ ಸುದ್ದಿ ನೀಡಲಿರುವ ಫ್ಯಾಂಟಮ್ ತಂಡ : ಏನದು ಗುಡ್ ನ್ಯೂಸ್ ?

ಬಹು ನಿರೀಕ್ಷೆಯ ಫ್ಯಾಂಟಮ್ ಚಿತ್ರದ ಬಗ್ಗೆ  ಮಹತ್ವದ ಮಾಹಿತಿಯೊಂದು ಜನವರಿ 21ರಂದು ಹೊರಬೀಳಲಿದೆ. ಈಬಗ್ಗೆ  ನಿರ್ದೇಶಕ ಅನೂಪ್ ಭಂಡಾರಿ ಮಾಹಿತಿ ನೀಡಿದ್ದಾರೆ.

Written by - Ranjitha R K | Last Updated : Jan 18, 2021, 03:10 PM IST
  • ಕಿಚ್ಚ ಸುದೀಪ್ ಅಭಿಮಾನಿಗಳಿಗೊಂದು ಶುಭ ಸುದ್ದಿ
  • ಜನವರಿ 21ರಂದು ಫ್ಯಾಂಟಮ್ ಚಿತ್ರದ ಮಹತ್ವದ ಮಾಹಿತಿ ಪ್ರಕಟ
  • ಈ ಬಗ್ಗೆ ಟ್ವೀಟ್ ಮಾಡಿರುವ ನಿರ್ದೇಶಕ ಅನೂಪ್ ಭಂಡಾರಿ
Kiccha Sudeep: 21ರಂದು ಸಿಹಿ ಸುದ್ದಿ ನೀಡಲಿರುವ ಫ್ಯಾಂಟಮ್  ತಂಡ : ಏನದು ಗುಡ್ ನ್ಯೂಸ್ ? title=
ಜನವರಿ 21ರಂದು ಫ್ಯಾಂಟಮ್ ಚಿತ್ರದ ಮಹತ್ವದ ಮಾಹಿತಿ ಪ್ರಕಟ(photo Anup Bhandaritwitter)

ಬೆಂಗಳೂರು :  ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸಿನಿಮಾ ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ. ಈನಡುವೆ ಚಿತ್ರದ ಕುರಿತ ಮಹತ್ವದ ವಿಚಾರವನ್ನು ಜನವರಿ 21ರಂದು ಪ್ರಕಟಿಸುವದಾಗಿ ಚಿತ್ರ ತಂಡ ಘೋಷಿಸಿದೆ.

ಕಿಚ್ಚ ಸುದೀಪ್ (Kiccha Sudeep) ಅಭಿಮಾನಿಗಳು ಫ್ಯಾಂಟಮ್ ಚಿತ್ರಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದಾರೆ.  ಕೊರೋನಾ (Coronavirus) ಕಾರಣದಿಂದಾಗಿ ಫ್ಯಾಂಟಮ್ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿತ್ತು.  ನಂತರ ಚಿತ್ರೀಕಣಮತ್ತೆ ಆರಂಭವಾಗಿರುವ ಸುದ್ದಿಯೇ ಕಿಚ್ಚನ ಅಭಿಮಾನಿಗಳಲ್ಲಿ  ಹೊಸ ಸಂಚಲನ ಮೂಡಿಸಿತ್ತು.  ನಿರ್ದೇಶಕ ಅನೂಪ್ ಭಂಡಾರಿ (Anup Bhandari) ಚಿತ್ರದ ಬಗ್ಗೆ ಮಹತ್ವದ ಮಾಹಿತಿ ಜನವರಿ 21ರಂದು ಸಂಜೆ 4 ಗಂಟೆ  ನಿಮಿಷಕ್ಕೆ ಹೊರಬೀಳಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದರಿಂದ ಕಿಚ್ಚ ಅಭಿಮಾನಿಗಳು ಪುಳಕಿತಗೊಂಡಿದ್ದಾರೆ.

 

ಇದನ್ನೂ  ಓದಿ : Kiccha Sudeep : ಗೋವಾ 'ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕಿಚ್ಚ ಸುದೀಪ್

ಈ ನಡುವೆ, ಪ್ರತಿಭಟನಾ ನಿರತ ವಾದ್ಯಗೋಷ್ಟಿ ಕಲಾವಿದರಿಗೆ ಸುದೀಪ್ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಗಮನ ಹರಿಸುವಂತೆ ತಮ್ಮ ಸ್ನೇಹಿತರು ಮತ್ತುಅಭಿಮಾನಿಗಳಲ್ಲೂ(fans) ಕಿಚ್ಚ ಮನವಿ  ಮಾಡಿದ್ದಾರೆ. ಅಲ್ಲದೆ ತಮ್ಮ ಕೈಯಲ್ಲಾಗುವ ಸಹಾಯ ಮಾಡುವಂತೆ ಕೋರಿದ್ದಾರೆ.ಅಲ್ಲದೆ, ಈ ಕಲಾವಿದರ ಪರವಾಗಿ ಸರ್ಕಾರ ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರವಕ್ಕೂ  ಮನವಿ ಮಾಡಿದ್ದಾರೆ. ದೂರದರ್ಶನವಿಲ್ಲದ ಕಾಲದಿಂದಲೂ ಎಲ್ಲರನ್ನೂ ರಂಜಿಸುತ್ತಾ ಬಂದಿರುವ ಈ ಕಲಾವಿದರನ್ನು ಮುಂದಿನತಲೆಮಾರಿನ ತನಕ ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯ  ಎಂದು ಸುದೀಪ್ (Sudeep)ಅಭಿಪ್ರಾಯಪಟ್ಟಿದ್ದಾರೆ.

 

ಇದನ್ನೂ  ಓದಿ : Video : ನಿವೇದಿತಾಗೆ ಚಂದನ್ ಹೇಗೆ ಕಿಸ್ ಮಾಡ್ತಾರೆ ಗೊತ್ತಾ..?

ಕಲಾವಿದರ ಜೊತೆ ನಾವೇ ನಿಲ್ಲದಿದ್ದರೆ  ಬೇರೆ ಯಾರು ಬೆಂಬಲಕ್ಕೆ  ಬರುತ್ತಾರೆಎಂದು  ಕಿಚ್ಚ ಸುದೀಪ್ ಪ್ರಶ್ನಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News