ನವದೆಹಲಿ: ಬಾಲಿವುಡ್ ನಟ ಆಮಿರ್ ಖಾನ್ ಮತ್ತು ಕರೀನ್ ಕಪೂರ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ ಚಿತ್ರ ಬಿಡುಗಡೆಯಾಗಿ 5 ದಿನವಾಗಿದೆ. ಸತತ ರಜೆಯ ವೀಕೆಂಡ್ ಇದ್ದರೂ ದೇಶದಾದ್ಯಂತ ಆಮಿರ್ ಚಿತ್ರಕ್ಕೆ ಎದುರಾದ ವಿರೋಧದಿಂದಾಗಿ ದೊಡ್ಡ ಹಿನ್ನಡೆಯಾಗಿದೆ.
ಹಾಲಿವುಡ್‍ನ ‘ಫಾರೆಸ್ಟ್ ಗಂಪ್’ ಚಿತ್ರದ ರಿಮೇಕ್ ಆಗಿರುವ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾವನ್ನು ಅದ್ವೈತ್ ಚಂದನ್ ನಿರ್ದೇಶಿಸಿದ್ದಾರೆ. ಅಂದಾಜು 180 ಕೋಟಿ ರೂ. ಬಜೆಟ್‍ನಲ್ಲಿ ನಿರ್ಮಿಸಿರುವ ಈ ಚಿತ್ರ ಬಾಕ್ಸಾ ಆಫೀಸ್‍ನಲ್ಲಿ 5 ದಿನಕ್ಕೆ ಕೇವಲ 45.83 ಕೋಟಿ ರೂ. ಮಾತ್ರ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ: "ಕಾಂತಾರ" ಚಿತ್ರದ "ಸಿಂಗಾರ ಸಿರಿಯೆ" ಹಾಡಿಗೆ ಕನ್ನಡ ಕಲಾರಸಿಕರು ಫಿದಾ
ಈ ಬಗ್ಗೆ ಬಾಲಿವುಡ್ ಚಿತ್ರ ವಿಮರ್ಶಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದು, ‘ಲಾಲ್ ಸಿಂಗ್ ಛಡ್ಡಾ’ ಚಿತ್ರವು 5ನೇ ದಿನವೂ ಯಾವುದೇ ಪ್ರಗತಿ ಕಂಡಿಲ್ಲ. ಜನರು ಅಮಿರ್ ಖಾನ್ ಚಿತ್ರವನ್ನು ತಿರಸ್ಕರಿಸಿದ್ದಾರೆ. ‘ಲಾಲ್ ಸಿಂಗ್ ಛಡ್ಡಾ’ 5ನೇ ದಿನ ಮೊದಲ ದಿನದ ಗಳಿಕೆಗಿಂತಲೂ ಕಡಿಮೆ ಕಲೆಕ್ಷನ್ ಮಾಡಿದೆ’ ಎಂದು ಹೇಳಿದ್ದಾರೆ.
#LaalSinghChaddha is rejected... #LSC *5-day* total is lower than *Day 1* total of #ThugsOfHindostan [₹ 50.75 cr; #Hindi version], do the math... Thu 11.70 cr [#RakshaBandhan], Fri 7.26 cr, Sat 9 cr, Sun 10 cr, Mon 7.87 cr [#IndependenceDay]. Total: ₹ 45.83 cr. #India biz. pic.twitter.com/b8myhVtaAF
— taran adarsh (@taran_adarsh) August 16, 2022
ಅಮಿರ್ ಖಾನ್ ನಟನೆಯ ‘ಥಗ್ಸ್ ಆಫ್ ಹಿಂದೋಸ್ತಾನ್’ ಚಿತ್ರದ ಮೊದಲ ದಿನದ ಗಳಿಕೆ(Hindi version)ಯೇ 50.75 ಕೋಟಿ ರೂ. ಆಗಿತ್ತು. ಆದರೆ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾ 5ನೇ ದಿನವೂ ಇಷ್ಟು ಗಳಿಕೆ ಮಾಡಿಲ್ಲ. ನಿರಂತರ ರಜೆ ಇದ್ದರೂ ಪ್ರಯೋಜನವಾಗಿಲ್ಲ. ಗುರುವಾರ 11.70 ಕೋಟಿ, ಶುಕ್ರವಾರ 7.26 ಕೋಟಿ, ಶನಿವಾರ 9 ಕೋಟಿ, ಭಾನುವಾರ 10 ಕೋಟಿ ಹಾಗೂ ಸೊಮವಾರ ಕೇವಲ 7.87 ಕೋಟಿ ರೂ. ಗಳಿಸಿದೆ. ಒಟ್ಟು 5 ದಿನಕ್ಕೆ 45.83 ಕೋಟಿ ರೂ. ಗಳಿಕೆ ಮಾಡಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸದ್ದು ಮಾಡ್ತಿದೆ ‘ಸಲಾರ್’: ಪೋಸ್ಟರ್ ಕಂಡು ನಿಬ್ಬೆರಗಾದ ಪ್ರಭಾಸ್ ಅಭಿಮಾನಿಗಳು
ಬಹಿಷ್ಕಾರದ ಅಭಿಯಾನಕ್ಕೆ ಸಿಲುಕಿದ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾ ನೋಡಲು ಜನರು ಥಿಯೇಟರ್‍ಗೆ ಬರುತ್ತಿಲ್ಲ. ಇದು ಚಿತ್ರಕ್ಕೆ ಭಾರೀ ಹೊಡೆತ ನೀಡಿದೆ. ಈ ಚಿತ್ರದ ಸೋಲಿನಿಂದ ಅಮೀರ್ ಖಾನ್ ತೀವ್ರ ಆಘಾತಕ್ಕೊಳಗಾಗಿದ್ದಾರೆ ಎಂದು ಹೇಳಲಾಗಿದೆ. ‘ಲಾಲ್ ಸಿಂಗ್ ಛಡ್ಡಾ’ದಲ್ಲಿ ಆಮಿರ್ ಖಾನ್, ಕರೀನಾ ಕಪೂರ್ ಜೊತೆಗೆ ನಾಗಚೈತನ್ಯ, ಮೋನಾ ಸಿಂಗ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.