ಬಾಲಿವುಡ್ ನಟಿ ಸುಶ್ಮಿತಾ ಸೇನ್ ಜೊತೆ ಐಪಿಎಲ್ ಮಾಜಿ ಅಧ್ಯಕ್ಷ ಲಲೀತ್ ಮೋದಿ ಲವ್ವಿ ಡವ್ವಿ..!

ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಅಧ್ಯಕ್ಷರಾದ ಲಲಿತ್ ಮೋದಿ ಅವರು ಇಂದು ನಟಿ ಸುಶ್ಮಿತಾ ಸೇನ್ ಅವರೊಂದಿಗೆ ಹೊಸ ಇನಿಂಗ್ಸ್ ಆರಂಭಿಸಿರುವುದಾಗಿ ಘೋಷಿಸಿಕೊಂಡಿದ್ದಾರೆ, ಅಷ್ಟೇ ಅಲ್ಲದೆ ಅವರನ್ನು ಬೆಟರ್ ಹಾಫ್ ಎಂದು ಕರೆದುಕೊಂಡಿದ್ದಾರೆ.

Written by - Zee Kannada News Desk | Last Updated : Jul 14, 2022, 11:07 PM IST
  • ಈಗ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು,
  • ಈ ಜೋಡಿಗಳು ಈಗಾಗಲೇ ಮದುವೆಯಾಗಿದ್ದಾರಾ? ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ
ಬಾಲಿವುಡ್ ನಟಿ ಸುಶ್ಮಿತಾ ಸೇನ್ ಜೊತೆ ಐಪಿಎಲ್ ಮಾಜಿ ಅಧ್ಯಕ್ಷ ಲಲೀತ್ ಮೋದಿ ಲವ್ವಿ ಡವ್ವಿ..! title=
Photo Courtsey: Twitter

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಅಧ್ಯಕ್ಷರಾದ ಲಲಿತ್ ಮೋದಿ ಅವರು ಇಂದು ನಟಿ ಸುಶ್ಮಿತಾ ಸೇನ್ ಅವರೊಂದಿಗೆ ಹೊಸ ಇನಿಂಗ್ಸ್ ಆರಂಭಿಸಿರುವುದಾಗಿ ಘೋಷಿಸಿಕೊಂಡಿದ್ದಾರೆ, ಅಷ್ಟೇ ಅಲ್ಲದೆ ಅವರನ್ನು ಬೆಟರ್ ಹಾಫ್ ಎಂದು ಕರೆದುಕೊಂಡಿದ್ದಾರೆ.

ಈಗ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ಈ ಜೋಡಿಗಳು ಈಗಾಗಲೇ ಮದುವೆಯಾಗಿದ್ದಾರಾ? ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ.ಆದರೆ ಅವರ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಲಲೀತ್ ಮೋದಿ ತಾವಿನ್ನೂ ಮದುವೆಯಾಗಿಲ್ಲ, ಬರಿ ಡೇಟಿಂಗ್ ಮಾತ್ರ ಮಾಡುತ್ತಿರುವುದು..ಮುಂದೊಂದು ದಿನ ಅದು ಆದರೂ ಆಗಬಹುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ದ ಸಿಎಂಗೆ ದೂರು :ವರ್ಗಾವಣೆಗೆ ಮನವಿ

ಐಪಿಎಲ್‌ಗೆ ಸಂಬಂಧಿಸಿದ ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆಯ ತನಿಖೆಯ ಮಧ್ಯೆ ಲಲಿತ್ ಮೋದಿ 2010 ರಲ್ಲಿ ಭಾರತವನ್ನು ತೊರೆದಿದ್ದರು. ಅಂದಿನಿಂದ ಅವರು ಲಂಡನ್‌ನಲ್ಲಿದ್ದಾರೆ.

ಸುಶ್ಮಿತಾ ಸೇನ್ 1994 ರಲ್ಲಿ ಭುವನ ಸುಂದರಿ ಕಿರೀಟವನ್ನು ಧರಿಸಿದ ನಂತರ ಅವರು 1996 ರ ದಸ್ತಕ್ ಚಲನಚಿತ್ರದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರು ಬಿವಿ ನಂ 1, ಡು ನಾಟ್ ಡಿಸ್ಟರ್ಬ್, ಮೈ ಹೂ ನಾ, ಮೈನೆ ಪ್ಯಾರ್ ಕ್ಯೂನ್ ಕಿಯಾ ಮತ್ತು ತುಮ್ಕೋ ನಾ ಭೂಲ್ ಪಾಯೆಂಗೆ ಮತ್ತು ನೋ ಪ್ರಾಬ್ಲಂ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ : ಹೇಮಾವತಿ, ತುಂಗಭದ್ರಾ ಜಲಾಶಯಗಳಿಂದ ಕಾಲುವೆಗಳಿಗೆ ನೀರು ಬಿಡಲು ಸರ್ಕಾರ ನಿರ್ಧಾರ

ಸುಶ್ಮಿತಾ ಸೇನ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಾಡೆಲ್-ನಟ ರೋಹ್ಮನ್ ಶಾಲ್‌ನಿಂದ ಬೇರ್ಪಡುವುದಾಗಿ ಘೋಷಿಸಿದ್ದರು. ಅಲಿಸಾ ಮತ್ತು ರೆನೀ ಎಂಬ ಇಬ್ಬರು ಹೆಣ್ಣುಮಕ್ಕಳಿಗೆ ಅವಳು ಒಂಟಿ ತಾಯಿಯಾಗಿದ್ದಾರೆ. ಶ್ರೀಮತಿ ಸೇನ್ 2000 ರಲ್ಲಿ ರೆನೀಯನ್ನು ದತ್ತು ಪಡೆದರೆ ಮತ್ತು ಅಲಿಸಾಳನ್ನು 2010 ರಲ್ಲಿ ದತ್ತಕ್ಕೆ ಪಡೆದುಕೊಂಡಿದ್ದಾರೆ.

ಸುಶ್ಮಿತಾ ಸೇನ್ ಕೊನೆಯ ಬಾರಿಗೆ ಆರ್ಯ ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು, ಇದು ಕಳೆದ ವರ್ಷ ಇಂಟರ್ನ್ಯಾಷನಲ್ ಎಮ್ಮಿಸ್‌ನಲ್ಲಿ ಅತ್ಯುತ್ತಮ ನಾಟಕ ಸರಣಿಯ ವಿಭಾಗದಲ್ಲಿ ನಾಮನಿರ್ದೇಶನಗೊಂಡಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News