ಲವರ್ಸ್ ಗೆ ಸಹಾಯ ಮಾಡುವ ನೆಪದಲ್ಲಿ ಯುವತಿ ಜೊತೆ ಅಸಭ್ಯ ವರ್ತನೆ.. ಆಸ್ಪತ್ರೆ ಸೇರಿದ ಆಟೋ ಚಾಲಕ !?

Bengaluru Crime News: ಇದೇ ವೇಳೆ ಬಂದ ಆಟೋ ಚಾಲಕನೊಬ್ಬ, 'ನೀವು ಎಲ್ಲಿಗೆ ಹೋಗಬೇಕು..?' ಎಂದು ವಿಚಾರಿಸಿದಾಗ ಇಬ್ಬರೂ 'ಮೆಜೆಸ್ಟಿಕ್ ಬಳಿ ರೈಲ್ವೇ ಸ್ಟೇಷನ್'ಗೆ ಹೋಗಬೇಕು ಎಂದಿದ್ದರು. 

Written by - VISHWANATH HARIHARA | Last Updated : May 24, 2024, 01:24 PM IST
  • ಮನೆ ಬಿಟ್ಟು ಬಂದರೆ ಆಗೋದು ಇದೇ ಗತಿ
  • ನೆಲೆ ಇಲ್ಲದ ಪ್ರೇಮಿಗಳೇ ಇವರ ಟಾರ್ಗೇಟ್
  • ಆಟೋ ಚಾಲಕನ ಕುಕೃತ್ಯದಿಂದ ಹೈರಾಣಾದ ಜೋಡಿ
ಲವರ್ಸ್ ಗೆ ಸಹಾಯ ಮಾಡುವ ನೆಪದಲ್ಲಿ ಯುವತಿ ಜೊತೆ ಅಸಭ್ಯ ವರ್ತನೆ.. ಆಸ್ಪತ್ರೆ ಸೇರಿದ ಆಟೋ ಚಾಲಕ !? title=

ಬೆಂಗಳೂರು : ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಮಾದೇಶ ಮತ್ತು ಐಸು ಮನೆ ಬಿಟ್ಟು ಬಂದಾಗ ಮಾದೇಶನ ಸ್ನೇಹಿತ ಸಹಾಯ ಮಾಡ್ತಾನೆ. ಇಲ್ಲೊಂದು ಜೋಡಿ ಹಾಗೆಯೇ ಸ್ನೇಹಿತನ ಮಾತು  ನಂಬಿ ಮನೆ ಬಿಟ್ಟು ಬಂದಿರ್ತಾರೆ. ಮೇ.4 ರಂದು ಪ್ರೇಮಿಗಳಿಬ್ಬರು ಸ್ನೇಹಿತ ಚೇತನ್ ನನ್ನ ಭೇಟಿಯಾಲು ರಾತ್ರಿ 8.30 ಕ್ಕೆ ಜಯನಗರ ಮೆಟ್ರೋ ಸ್ಟೇಷನ್ ಬಳಿ ಬಂದಿದ್ದರು. ಆದರೆ ರಾತ್ರಿ 10.30ರವರೆಗೆ ಕಾದರೂ ಸಹ ಚೇತನ್ ಬಂದಿರಲಿಲ್ಲ. 

ಇದೇ ವೇಳೆ ಬಂದ ಆಟೋ ಚಾಲಕನೊಬ್ಬ, 'ನೀವು ಎಲ್ಲಿಗೆ ಹೋಗಬೇಕು..?' ಎಂದು ವಿಚಾರಿಸಿದಾಗ ಇಬ್ಬರೂ 'ಮೆಜೆಸ್ಟಿಕ್ ಬಳಿ ರೈಲ್ವೇ ಸ್ಟೇಷನ್'ಗೆ ಹೋಗಬೇಕು ಎಂದಿದ್ದರು. ಅದರಂತೆ ಯುವಕ - ಯುವತಿಯನ್ನ ಆಟೋದಲ್ಲಿ ಕರೆದೊಯ್ದ ಚಾಲಕ ಸ್ವಲ್ಪ ದೂರ ಹೋದ ಬಳಿಕ ತಮಗೆ ರೂಂ ಬೇಕಾ ಎಂದು ವಿಚಾರಿಸಿದ್ದ. 

ಇದನ್ನೂ ಓದಿ:  ಕರ್ನಾಟಕ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತ: ಟಾರ್ಚ್‌ಲೈಟ್‌ನಲ್ಲಿ ರೋಗಿಗಳಿಗೆ ಚಿಕಿತ್ಸೆ 

ಈ ವೇಳೆ ಇಬ್ಬರೂ ಸಹ, ಬೇಡ, ನಮಗೆ ರೈಲ್ವೇ ಸ್ಟೇಷನ್ ಬಳಿ ಬಿಟ್ಟರೆ ಸಾಕು ಎಂದಿದ್ದರು. ಅಷ್ಟಕ್ಕೇ ಸುಮ್ಮನಾಗದ ಆಟೋ ಚಾಲಕ, ಪಿಳ್ಳಗಾನಹಳ್ಳಿಯಲ್ಲಿ ನನ್ನದೆ ಒಂದು ಖಾಲಿ ಮನೆ ಇದೆ. ಇಷ್ಟವಾದರೆ ಇಂದು ಅಲ್ಲಿ ಇರಿ ಎಂದು ಹೇಳಿದ್ದ. ಇಬ್ಬರೂ ಸಹ ಆತನ ಮಾತಿಗೆ ಒಪ್ಪಿಕೊಂಡಿದ್ದರು. 

ದಾರಿ ಮಧ್ಯೆ ಹೋಗುವಾಗ ಮದ್ಯ ಖರೀದಿಸಿದ್ದ ಆಟೋ ಚಾಲಕ, ರಾತ್ರಿ 12.30ಕ್ಕೆ ಪಿಳ್ಳಗಾನಹಳ್ಳಿಯಲ್ಲಿರುವ ತನ್ನ ಮನೆ ತಲುಪಿದ್ದ. ಬಳಿಕ ಈಗಾಗಲೇ ತಡವಾಗಿದೆ. ಇವತ್ತು ಇಲ್ಲಿಯೇ ಇದ್ದು ಬೆಳಗ್ಗೆ ಎದ್ದು ಹೋಗಿ ಎಂದಿದ್ದ ಆಟೋ ಚಾಲಕ ಮದ್ಯಪಾನ ಮಾಡಿ ಯವಕನಿಗೂ ಬಲವಂತವಾಗಿ ಮದ್ಯಪಾನ ಮಾಡಿಸಿದ್ದ. ಬಳಿಕ ಯುವತಿಯನ್ನ ಕರೆದು ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸಿದ್ದ. ಈ ವೇಳೆ ಯುವತಿ ಪ್ರತಿರೋಧಿಸಿದಾಗ, ಅಲ್ಲಿಯೇ ಇದ್ದ ಮಚ್ಚನ್ನು ತೋರಿಸಿ, ತನ್ನೊಂದಿಗೆ ಸಹಕರಿಸದೇ ಇದ್ದರೆ ಇಬ್ಬರನ್ನೂ ಮುಗಿಸಿಬಿಡೋದಾಗಿ ಬೆದರಿಕೆ ಹಾಕಿದ್ದ. 

ಅಷ್ಟೇ ಅಲ್ಲ ಯುವತಿಗೆ ಲೈಂಗಿಕ ಕಿರುಕುಳ ಕೊಡಲು ಶುರು ಮಾಡಿದಾಗ ಆಕೆ ಕಿರುಚಿಕೊಂಡಿದ್ದಳು. ತಕ್ಷಣ ಎಚ್ಚರಗೊಂಡ ಯುವಕ ಅಲ್ಲಿದ್ದ ಮಚ್ಚಿನಿಂದ ಆಟೋ ಚಾಲಕನ ಮೇಲೆ ಹಲ್ಲೆ ಮಾಡಿ ಸ್ನೇಹಿತೆಯನ್ನ ಕರೆದುಕೊಂಡು ಓಡಿ ಹೋಗಿದ್ದ. ಬಳಿಕ ಭಯದಲ್ಲಿದ್ದ ಇಬ್ಬರೂ ಎಲ್ಲಿಯೂ ದೂರು ಕೊಟ್ಟಿರಲಿಲ್ಲ.

ಇದನ್ನೂ ಓದಿ:  ತಾಯಿ ಮಗಳಿಗೆ ವಿಮಾ ಹಣ ರೂ.15 ಲಕ್ಷ ಬಡ್ಡಿ ಸಮೇತಕೊಡಲು ಲೋಂಬಾರ್ಡ ವಿಮಾ ಕಂಪನಿಗೆ ಆಯೋಗದ ಆದೇಶ 

ಇತ್ತ ಮಾರನೇ ದಿನ ಕೋಣನಕುಂಟೆ ಪೊಲೀಸ್ ಠಾಣೆಗೆ ಗಾಬರಿಯಿಂದ ಬಂದಿದ್ದ ಆಟೋ ಚಾಲಕ, ತನ್ನ ಮನೆಗೆ ನುಗ್ಗಿ ಯುವಕ,ಯುವತಿ ಹಲ್ಲೆ ಮಾಡಿ ರಾಬರಿ ಮಾಡಿದ್ದಾರೆಂದು ದೂರು ನೀಡಿದ್ದ. ಆತನ ಪ್ರಕರಣ ಗಂಭೀರವಾಗಿ ತೆಗೆದುಕೊಂಡ ಕೋಣನಕುಂಟೆ ಪೊಲೀಸರು, ಆರಂಭದಲ್ಲೇ ಅನುಮಾನ ವ್ಯಕ್ತಪಡಿಸಿದ್ದರು. ಆತನ ಮನೆಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನ ಆಧರಿಸಿದಾಗ ಆಟೋ ಚಾಲಕನೇ ಯುವಕ - ಯುವತಿಯನ್ನ ಕರೆತಂದಿರುವ ವಿಚಾರ ಬಯಲಾಗಿತ್ತು. ತಕ್ಷಣ ಯುವಕ - ಯುವತಿಯನ್ನ ವಶಕ್ಕೆ ಪಡೆದು ವಿಚಾರಿಸಿದಾಗ ಇಡೀ ಸಂಗತಿ ಬಯಲಾಗಿದೆ.

ಸದ್ಯ ಯುವತಿಯಿಂದಲೂ ದೂರು‌ ಪಡೆದಿರುವ ಕೋಣನಕುಂಟೆ ಠಾಣಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆಟೋ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದು, ಬಳಿಕ ಆತನನ್ನ ವಶಕ್ಕೆ ಪಡೆಯುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News