ಅಂದು ಅಲ್ಲು ಅರ್ಜುನ್ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಇಂದು ಸ್ಟಾರ್‌ ನಟ..!

Mangalavara Movie : ಅದೃಷ್ಟ ಯಾರ ಮನೆ ಬಾಗಿಲನ್ನು ಯಾವಾಗ ಹೇಗೆ ತಟ್ಟುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದರಂತೆ ಅದೃಷ್ಟ ನಮಗೆ ಬರಬೇಕು ಅಂತ ಹಣೆಯಲ್ಲಿ ಬರೆದಿದ್ದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸದ್ಯ ತೆಲುಗಿನಲ್ಲಿ ಒಳ್ಳೆಯ ಹೆಸರು ಗಳಿಸಿರುವ ನಟನ ಬದುಕು ಈ ಮಾತಿಗೆ ಉದಾರಹಣೆ. ಒಂದು ಕಾಲದಲ್ಲಿ ಅಲ್ಲು ಅರ್ಜುನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಈಗ ತೆಲುಗು ಸಿನಿಮಾಗಳಲ್ಲಿ ಸ್ಟಾರ್‌ ನಟನಾಗಿ ಫೇಮಸ್ ಆಗಿದ್ದಾನೆ.

Written by - Krishna N K | Last Updated : Dec 30, 2023, 11:59 AM IST
  • ಅದೃಷ್ಟ ಯಾರ ಮನೆ ಬಾಗಿಲನ್ನು ಯಾವಾಗ ಹೇಗೆ ತಟ್ಟುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
  • ಅದೃಷ್ಟ ನಮಗೆ ಬರಬೇಕು ಅಂತ ಹಣೆಯಲ್ಲಿ ಬರೆದಿದ್ದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
  • ಒಂದು ಕಾಲದಲ್ಲಿ ಅಲ್ಲು ಅರ್ಜುನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಈಗ ಸ್ಟಾರ್‌ ನಟ.
ಅಂದು ಅಲ್ಲು ಅರ್ಜುನ್ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಇಂದು ಸ್ಟಾರ್‌ ನಟ..! title=

Laxman Meesala : ಅಜಯ್ ಭೂಪತಿ ನಿರ್ದೇಶನದ ಮತ್ತು ಪಾಯಲ್ ರಜಪೂತ್ ನಾಯಕಿಯಾಗಿ ನಟಿಸಿದ ಆರ್‌ಎಕ್ಸ್‌ 100 (RX 100) ಚಿತ್ರ ಬ್ಲಾಕ್ಬಸ್ಟರ್‌ ಹಿಟ್‌ ಆಗಿತ್ತು. ಬೋಲ್ಡ್ ಕಾನ್ಸೆಪ್ಟ್‌ನೊಂದಿಗೆ ಬಂದ ಈ ಸಿನಿಮಾ ನಿರ್ದೇಶಕ ಅಜಯ್ ಭೂಪತಿ, ನಟಿ ಪಾಯಲ್ ಮತ್ತು ನಟ ಕಾರ್ತಿಕೇಯ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಆದರೆ ಈ ಚಿತ್ರದಲ್ಲಿ ಈ ಮೂವರ ಹೊರತಾಗಿ ಖ್ಯಾತಿ ಗಳಿಸಿದ ಮತ್ತೊಬ್ಬ ನಟ ಲಕ್ಷ್ಮಣ್ ಮಿಸಾಳ.

ಸಿನಿಮಾದಲ್ಲಿ ಲಕ್ಷ್ಮಣ್ ಮಿಸಾಳ ನಾಯಕನ ಪಕ್ಕದಲ್ಲಿ ಕಾಣಿಸಿಕೊಂಡು, ಬಹುತೇಕ ಚಿತ್ರದುದ್ದಕ್ಕೂ ಪ್ರೇಕ್ಷಕರು ತಮ್ಮ ಅಸ್ತಿತ್ವವನ್ನು ಅನುಭವಿಸುವಂತೆ ಮಾಡಿದರು. ಇತ್ತೀಚೆಗೆ, ಅಜಯ್ ಭೂಪತಿ ನಿರ್ದೇಶನದ ಸೂಪರ್ ಹಿಟ್ ಚಿತ್ರ ಮಂಗಳವಾರದಲ್ಲಿಯೂ ಸಹ ಪ್ರಮುಖ ಪಾತ್ರದಲ್ಲಿ ಲಕ್ಷ್ಮಣ್‌ ಕಾಣಿಸಿಕೊಂಡಿದ್ದಾರೆ. ಅಜಯ್ ಭೂಪತಿ ಅವರ ಚಿತ್ರಗಳಲ್ಲಿ ಮಾತ್ರವಲ್ಲದೆ ಕೆಲವು ಸಿನಿಮಾಗಳಲ್ಲಿಯೂ ನಟಿಸಿ ತೆಲುಗು ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಇದನ್ನೂ ಓದಿ:ಪ್ರಭಾಸ್ ಸೇರಿದಂತೆ.. 2023ರಲ್ಲಿ ಗ್ರ್ಯಾಂಡ್ ಕಮ್ ಬ್ಯಾಕ್ ಕೊಟ್ಟ ಮೂವರು ಸ್ಟಾರ್ ಹೀರೋಗಳಿವರು..!

ಲಕ್ಷ್ಮಣ್ ಸಿನಿಮಾ ಪ್ರವೇಶಿಸುವ ಮುನ್ನ ಏನು ಮಾಡುತ್ತಿದ್ದರು ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗುತ್ತಿದೆ. ಲಕ್ಷ್ಮಣ್ ನಟನಾಗುವ ಮೊದಲು ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. 

ಹೌದು, ನೀವು ಕೇಳಿದ್ದು ನಿಜ, ಸ್ವತಃ ಲಕ್ಷ್ಮಣ್ ಅವರು ಸಿನಿಮಾ ಪ್ರವೇಶಿಸುವ ಮೊದಲು ಮತ್ತು ಯಶಸ್ಸು ಸಾಧಿಸುವ ಮುನ್ನ ಅನುಭವಿಸಿದ ಕಷ್ಟಗಳ ಕುರಿತು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದರು. ಈ ವೇಳೆ ಅವರು ಚಿತ್ರರಂಗ ಪ್ರವೇಶಿಸುವ ಮೊದಲು ಯಾವುದೇ ಕೆಲಸದಲ್ಲಿ ಸ್ಥಿರವಾಗಿರಲಿಲ್ಲ. ಕುಟುಂಬವನ್ನು ಪೋಷಿಸಲು, ಅವರು ಮನೆಗಳ ನಿರ್ಮಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ಬಾಕ್ಸಾಫೀಸ್ ನಲ್ಲಿ 'ಡಂಕಿ' ಧಮಾಕ...7 ದಿನದಲ್ಲಿ 305 ಕೋಟಿ ಬಾಚಿದ ಕಿಂಗ್ ಖಾನ್ ಸಿನಿಮಾ

ಅಲ್ಲದೆ, ಗೊತ್ತಿಲ್ಲದೇ ಅನೇಕ ಸೆಲೆಬ್ರಿಟಿಗಳ ಮನೆಯಲ್ಲಿ ದುಡಿದಿದ್ದಾಗಿ ಹೇಳಿದ್ದಾರೆ. ಈ ಪೈಕಿ ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಮನೆ ನಿರ್ಮಾಣದ ವೇಳೆ ತಾನೂ ಕೂಲಿ ಕೆಲಸ ಮಾಡಿದ್ದೆ ಎಂದು ಲಕ್ಷ್ಮಣ್ ತಿಳಿಸಿದ್ದಾರೆ. ಫಿಲಂ ನಗರ್ ಕಲ್ಚರಲ್ ಸೆಂಟರ್ ನಿರ್ಮಿಸುವಾಗ ಖ್ಯಾತ ನಿರ್ದೇಶಕ ಎಸ್ ವಿ ಕೃಷ್ಣಾ ರೆಡ್ಡಿ ಅವರ ಮನೆಯಲ್ಲಿ ಕೆಲಸ ಮಾಡಿದ್ದೆ ಎಂಬ ಕುತೂಹಲಕಾರಿ ಸಂಗತಿಗಳನ್ನು ಲಕ್ಷ್ಮಣ್ ಬಹಿರಂಗಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News