ಆಸ್ಕರ್ ಸ್ಪರ್ಧೆಯಿಂದ 'ನ್ಯೂಟನ್' ಹೊರಕ್ಕೆ

   

Last Updated : Dec 15, 2017, 06:35 PM IST
  • ಭಾರತದಿಂದ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಪ್ರವೇಶ ಪಡೆದಿದ್ದ ರಾಜಕುಮಾರ ರಾವ್ ಅಭಿನಯದ ನ್ಯೂಟನ್ ಚಿತ್ರ, 90 ನೆ ಆಸ್ಕರ್ ಪ್ರಶಸ್ತಿಯ ಉತ್ತಮ ವಿದೇಶಿ ಚಲನಚಿತ್ರ ವಿಭಾಗದ ಸ್ಪರ್ಧೆಗೆ ಆಯ್ಕೆಯಾಗಿತ್ತು.
  • 2001 ರಿಂದ ಇಲ್ಲಿಯವರೆಗೂ ಲಗಾನ್ ಚಿತ್ರವನ್ನು ಹೊರತುಪಡಿಸಿ ಯಾವುದೇ ಭಾರತೀಯ ಚಲನಚಿತ್ರವು ಅಂತಿಮ ಅಂತಕ್ಕೆ ಆಯ್ಕೆಯಾಗಿಲ್ಲ.
  • ಇದಕ್ಕೂ ಮೊದಲು 1958 ರಲ್ಲಿ ಮದರ್ ಇಂಡಿಯಾ ಮತ್ತು 1989ರಲ್ಲಿ ಸಲಾಂ ಬಾಂಬೆ ಚಿತ್ರಗಳು ಹಿಂದೆ ಆಯ್ಕೆಯಾಗಿದ್ದವು ಎನ್ನುವುದನ್ನು ನಾವು ಗಮನಿಸಬಹುದು.
ಆಸ್ಕರ್ ಸ್ಪರ್ಧೆಯಿಂದ  'ನ್ಯೂಟನ್' ಹೊರಕ್ಕೆ title=

ಲಾಸ್ ಎಂಜಲಿಸ್: ಭಾರತದಿಂದ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಪ್ರವೇಶ ಪಡೆದಿದ್ದ ರಾಜಕುಮಾರ ರಾವ್ ಅಭಿನಯದ ನ್ಯೂಟನ್ ಚಿತ್ರ, 90 ನೆ ಆಸ್ಕರ್ ಪ್ರಶಸ್ತಿಯ ಉತ್ತಮ ವಿದೇಶಿ ಚಲನಚಿತ್ರ ವಿಭಾಗದ ಸ್ಪರ್ಧೆಗೆ ಆಯ್ಕೆಯಾಗಿತ್ತು. ಪ್ರಮುಖವಾಗಿ ಚತ್ತೀಸಘಡ್ ಪ್ರದೇಶದಲ್ಲಿನ ನಕ್ಸಲ್ ವಿಷಯದ ಕುರಿತು ಬೆಳಕು ಚೆಲ್ಲಿ ಭಾರತೀಯ ಸಿನಿರಸಿಕರಿಂದ ಮೆಚ್ಚುಗೆ ಪಡೆದಿತ್ತು. ಆದರೆ ಇಗ ಮುಂದಿನ ಅಕಾಡೆಮಿ ಪ್ರಶಸ್ತಿಯ ಹಂತಕ್ಕೆ ತಲುಪುವಲ್ಲಿ ವಿಫಲವಾಗಿ ಸ್ಪರ್ಧೆಯಿಂದ ಹೊರಬಿದ್ದಿದೆ. 

ಸದ್ಯ ಬಂದಿರುವ ವರದಿಯ ಪ್ರಕಾರ ಅಕಾಡೆಮಿ ಆಫ್ ಮೋಶನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ 9 ಚಲನ ಚಿತ್ರಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗಿದೆ, ಈ ಪಟ್ಟಿಯಲ್ಲಿ  ನ್ಯೂಟನ್ ಚಿತ್ರ ಸ್ಥಾನವನ್ನು ಪಡೆದಿಲ್ಲ, ಎಂದು ಹೇಳಲಾಗಿದೆ. ಇಲ್ಲಿ ಆಯ್ಕೆ ಮಾಡಿರುವ ಚಿತ್ರಗಳಲ್ಲಿ  ಎ ಫೆಂಟಾಸ್ಟಿಕ್ ವೊಮೆನ್(ಚಿಲಿ) ಇನ್ ದಿ ಫೇಡ (ಜರ್ಮನಿ) ಆನ್ ಬಾಡಿ ಅಂಡ್ ಸೌಲ್(ಹಂಗೇರಿ) ಫಾಕ್ಸಟ್ರೋಟ್(ಇಸ್ರೇಲ್) ದಿ ಇನ್ಸಲ್ಟ್ (ಲೆಬನಾನ್ ) ಲವ್ ಲೆಸ್ (ರಷ್ಯಾ ) ಫೆಲಿಸೈಟ್(ಸೆನೆಗಲ್ ) ದಿ ವೌಂಡ್ (ದಕ್ಷಿಣ ಆಫ್ರಿಕಾ ) ದಿ ಸ್ಕ್ವೇರ್ (ಸ್ವಿಡೆನ್) ಚಿತ್ರಗಳು ಮುಂದಿನ ಹಂತಕ್ಕೆ ಆಯ್ಕೆಯಾಗಿವೆ ಎಂದು ಅಕಾಡೆಮಿ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಘೋಷಿಸಿದೆ.

2001 ರಿಂದ ಇಲ್ಲಿಯವರೆಗೂ ಲಗಾನ್ ಚಿತ್ರವನ್ನು ಹೊರತುಪಡಿಸಿ ಯಾವುದೇ ಭಾರತೀಯ ಚಲನಚಿತ್ರವು ಅಂತಿಮ ಅಂತಕ್ಕೆ ಆಯ್ಕೆಯಾಗಿಲ್ಲ.ಇದಕ್ಕೂ ಮೊದಲು 1958 ರಲ್ಲಿ ಮದರ್ ಇಂಡಿಯಾ ಮತ್ತು 1989ರಲ್ಲಿ ಸಲಾಂ ಬಾಂಬೆ ಚಿತ್ರಗಳು ಹಿಂದೆ ಆಯ್ಕೆಯಾಗಿದ್ದವು ಎನ್ನುವುದನ್ನು ನಾವು ಗಮನಿಸಬಹುದು.

 

Trending News