ಸಾರ್ವಕಾಲಿಕ ನಟರ ಪಟ್ಟಿಯಲ್ಲಿ ಭಾರತದಿಂದ ಶಾರುಖ್ ಗೆ ಮಾತ್ರ ಸ್ಥಾನ...!

ರಾಬರ್ಟ್ ಡಿ ನಿರೋ, ಟಾಮ್ ಕ್ರೂಸ್, ಟಾಮ್ ಹ್ಯಾಂಕ್ಸ್, ನಟಾಲಿ ಪೋರ್ಟ್‌ಮ್ಯಾನ್, ಬೆಟ್ಟೆ ಡೇವಿಸ್, ಡೆನ್ಜೆಲ್ ವಾಷಿಂಗ್ಟನ್ ಮುಂತಾದ ನಟರನ್ನು ಒಳಗೊಂಡಿರುವ ಪಟ್ಟಿಯಲ್ಲಿ ಖಾನ್ ಏಕೈಕ ಭಾರತೀಯ ನಟರಾಗಿದ್ದಾರೆ.

Written by - Zee Kannada News Desk | Last Updated : Dec 21, 2022, 05:21 PM IST
  • 1992 ರಲ್ಲಿ ತಮ್ಮ ಚೊಚ್ಚಲ ಚಿತ್ರ 'ದೀವಾನಾ' ಮೂಲಕ ಬೆಳ್ಳಿ ಪರದೆಗೆ ಪಾದಾರ್ಪಣೆ ಮಾಡಿದರು
  • ಪಠಾಣ' ನಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.
  • ಚಿತ್ರವು ಜನವರಿ 25, 2023 ರಂದು ಜಗತ್ತಿನಾಧ್ಯಂತ ಬಿಡುಗಡೆಯಾಗಲಿದೆ.
  • 1992 ರಲ್ಲಿ ತಮ್ಮ ಚೊಚ್ಚಲ ಚಿತ್ರ 'ದೀವಾನಾ' ಮೂಲಕ ಬೆಳ್ಳಿ ಪರದೆಗೆ ಪಾದಾರ್ಪಣೆ ಮಾಡಿದರು.
  • 1990 ರ ದಶಕ ಮತ್ತು 2000 ರ ದಶಕದ ಆರಂಭದಲ್ಲಿ ಕೆಲವು ಐಕಾನಿಕ್ ರೋಮ್ಯಾಂಟಿಕ್ ಬ್ಲಾಕ್ಬಸ್ಟರ್ ಹಿಟ್ ಗಳನ್ನು ನೀಡಿದರು.
ಸಾರ್ವಕಾಲಿಕ ನಟರ ಪಟ್ಟಿಯಲ್ಲಿ ಭಾರತದಿಂದ ಶಾರುಖ್ ಗೆ ಮಾತ್ರ ಸ್ಥಾನ...! title=

ನವದೆಹಲಿ: ಎಂಪೈರ್ ಮ್ಯಾಗಜೀನ್‌ನ ಸಾರ್ವಕಾಲಿಕ 50 ಶ್ರೇಷ್ಠ ನಟರ ಪಟ್ಟಿಯಲ್ಲಿ ಭಾರತದಿಂದ ಬಾಲಿವುಡ್ ನ ಸೂಪರ್‌ಸ್ಟಾರ್ ಶಾರುಖ್ ಖಾನ್ ಮಾತ್ರ ಸ್ಥಾನ ಪಡೆದಿದ್ದಾರೆ.

ರಾಬರ್ಟ್ ಡಿ ನಿರೋ, ಟಾಮ್ ಕ್ರೂಸ್, ಟಾಮ್ ಹ್ಯಾಂಕ್ಸ್, ನಟಾಲಿ ಪೋರ್ಟ್‌ಮ್ಯಾನ್, ಬೆಟ್ಟೆ ಡೇವಿಸ್, ಡೆನ್ಜೆಲ್ ವಾಷಿಂಗ್ಟನ್ ಮುಂತಾದ ನಟರನ್ನು ಒಳಗೊಂಡಿರುವ ಪಟ್ಟಿಯಲ್ಲಿರುವವರಲ್ಲಿ ಖಾನ್ ಏಕೈಕ ಭಾರತೀಯ ನಟರಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪಬ್ ಗಳಿಗೆ ನಿಯಮಗಳೇ ಇಲ್ವಾ: ಹೈದರಾಬಾದ್ ಪೊಲೀಸರೇ ಬೆಟರ್ ಆದ್ರೂ...?

1980 ರ ದಶಕದ ಉತ್ತರಾರ್ಧದಲ್ಲಿ ದೂರದರ್ಶನದಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ ಖಾನ್ ಮತ್ತು ಅಂತಿಮವಾಗಿ 1992 ರಲ್ಲಿ ತಮ್ಮ ಚೊಚ್ಚಲ ಚಿತ್ರ 'ದೀವಾನಾ' ಮೂಲಕ ಬೆಳ್ಳಿ ಪರದೆಗೆ ಪಾದಾರ್ಪಣೆ ಮಾಡಿದರು, 1990 ರ ದಶಕ ಮತ್ತು 2000 ರ ದಶಕದ ಆರಂಭದಲ್ಲಿ ಕೆಲವು ಐಕಾನಿಕ್ ರೋಮ್ಯಾಂಟಿಕ್ ಬ್ಲಾಕ್ಬಸ್ಟರ್ ಹಿಟ್ ಗಳನ್ನು ನೀಡಿದರು.ಏತನ್ಮಧ್ಯೆ, ಶಾರುಖ್ ಖಾನ್ ಮುಂದಿನ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಮುಂಬರುವ ಆಕ್ಷನ್ ಥ್ರಿಲ್ಲರ್ ಚಿತ್ರ 'ಪಠಾನ್' ನಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.ಈ ಚಿತ್ರವು ಜನವರಿ 25, 2023 ರಂದು ಜಗತ್ತಿನಾಧ್ಯಂತ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಮಾಡಿ ಗೂಗಲ್ ಸಿಇಓ ಸುಂದರ್ ಪಿಚ್ಚೈ ಹೇಳಿದ್ದೇನು ಗೊತ್ತಾ?

ಇದಲ್ಲದೆ, ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಮುಂಬರುವ ಚಿತ್ರ 'ಡುಂಕಿ' ತಾಪ್ಸಿ ಪನ್ನು ಮತ್ತು ದಕ್ಷಿಣ ನಿರ್ದೇಶಕ ಅಟ್ಲೀ ಅವರ ಮುಂಬರುವ ಆಕ್ಷನ್ ಥ್ರಿಲ್ಲರ್ ಚಿತ್ರ '. ಜವಾನ್' ಮುಂದಿನ ತಿಂಗಳುಗಳಲ್ಲಿ ಬಿಡುಗಡೆಗೆ ಅಣಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News